ಚಂಡಮಾರುತದ ಎಫೆಕ್ಟ್: ಬೆಂಗಳೂರಿನಲ್ಲಿ ಮೈಕೊರೆಯುವ ಚಳಿ! 21.6 ಡಿಗ್ರಿ ಸೆಲ್ಸಿಯಸ್ ತಾಪಮಾನ
ದಿತ್ವಾ ಚಂಡಮಾರುತದ ಪರಿಣಾಮದಿಂದ ಬೆಂಗಳೂರಿನಲ್ಲಿ ಚಳಿ ಹೆಚ್ಚಾಗಿದೆ. ಶನಿವಾರ 21.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಈ ವರ್ಷದ ಅತಿ ಚಳಿ ದಿನವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸಾಮಾನ್ಯಕ್ಕಿಂತ 5.8 ಡಿಗ್ರಿ ಸೆಲ್ಸಿಯಸ್ ಕಡಿಮೆ ತಾಪಮಾನವಿದ್ದು, ಮುಂದಿನ 2 ದಿನ ಇದೇ ರೀತಿಯ ಶೀತ ವಾತಾವರಣ ಮುಂದುವರಿಯಲಿದೆ.

ಬೆಂಗಳೂರು, ನವೆಂಬರ್ 29: ಸಿಲಿಕಾನ್ ಸಿಟಿಯಲ್ಲಿ (bangaluru) ಚಳಿಗಾಲ (Cold) ಆರಂಭವಾಗಿದೆ. ಈ ಸಲ ವ್ಯಾಪಕ ಮಳೆಯಾಗಿದ್ದು, ಹೆಚ್ಚು ಚಳಿ ಜನರನ್ನ ಕಾಡುವ ಆತಂಕ ಇದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ 16 ಡಿಗ್ರಿ ಸೆಲ್ಸಿಯಸ್ಗೆ ವಾತಾವರಣ ಕುಸಿದೆ. ದಿತ್ವಾ ಚಂಡಮಾರುತದ ಪರಿಣಾಮದಿಂದಾಗಿ ಚಳಿ ಹೆಚ್ಚಾಗಿದೆ. ಶನಿವಾರದಂದು ನಗರದಲ್ಲಿ 21.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಈ ವರ್ಷದ ಅತ್ಯಂತ ಚಳಿ ದಿನವಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ರಾಜ್ಯ ಹವಾಮಾನ ಇಲಾಖೆ, ಶನಿವಾರದಂದು ಬೆಂಗಳೂರಿನಲ್ಲಿ 21.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಅದು ಈ ವರ್ಷದ ಅತ್ಯಂತ ಚಳಿ ದಿನವಾಗಿದೆ. ಒಂದೇ ಒಂದು ಹನಿ ಮಳೆ ಇಲ್ಲದೆ ಸಾಮಾನ್ಯಕ್ಕಿಂತ -5.8 ಡಿಗ್ರಿ ಸೆಲ್ಸಿಯಸ್ರಷ್ಟು ಕಡಿಮೆ ತಾಪಮಾನ ಹೊಂದಿರುವುದು ಅದು ತುಂಬಾ ಅಪರೂಪ ಎಂದು ಹೇಳಿದೆ.
ರಾಜ್ಯ ಹವಾಮಾನ ಇಲಾಖೆ ಟ್ವೀಟ್
SHIVERING SATURDAY IN BENGALURU 🥶🥶🥶
21.6c recorded during the day in the City. That makes it the coldest Day of the Year.
We are -5.8c from normal. That too without a single drop of rain. That is quite rare.
Circulation over TN is usually the cause for Daytime temperature… pic.twitter.com/ImVK3xHZ8q
— Namma Karnataka Weather (@namma_vjy) November 29, 2025
ತಮಿಳುನಾಡಿನ ಉಂಟಾಗಿರುವ ದಿತ್ವಾ ಚಂಡಮಾರುತದ ಪರಿಣಾಮದಿಂದಾಗಿ ಚಳಿ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಹಗಲಿನ ತಾಪಮಾನವು 25 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಾಗಲು ಕಾರಣವಾಗುತ್ತದೆ. ಸಾಮಾನ್ಯವಾಗಿ ನಿರಂತರ ಮಳೆ ಸುರಿದರೆ ಮಾತ್ರ ಈ ವ್ಯತ್ಯಸವಾಗುವುದನ್ನು ಕಾಣಬಹುದು, ಆದರೆ ಇಂದು ಹಾಗಾಗಲಿಲ್ಲ. ಮೋಡ ಕವಿದ ವಾತಾವರಣದ್ದರೂ ಮಳೆ ಆಗಿಲ್ಲ.
ಕಳೆದ ಮೂರು ದಾಖಲಾಗಿರುವ ಗರಿಷ್ಠ ತಾಪಮಾನ
- ಗುರುವಾರ: 25.2 ಡಿಗ್ರಿ ಸೆಲ್ಸಿಯಸ್
- ಶುಕ್ರವಾರ: 25.3 ಡಿಗ್ರಿ ಸೆಲ್ಸಿಯಸ್
- ಶನಿವಾರ: 21.6 ಡಿಗ್ರಿ ಸೆಲ್ಸಿಯಸ್
ಇದನ್ನೂ ಓದಿ: Bengaluru Weather: ಬೆಂಗಳೂರಿನಲ್ಲಿ ಇಂದಿನಿಂದ 3 ದಿನ ಭಾರೀ ಚಳಿ
ಇನ್ನು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 2 ದಿನ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ. ಇತ್ತ ಬೆಂಗಳೂರಿನಲ್ಲಿ ಮುಂದಿನ 2 ದಿನ ಇದೇ ವಾತಾವರಣ ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆಯಿಂದ ಮಾಹಿತಿ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




