
ಬೆಂಗಳೂರು, ಮಾ.18: ಬೆಂಗಳೂರಿನಲ್ಲಿ ಮನೆ ಹುಡುಕುವುದು ಅಷ್ಟೊಂದು ಸುಲಭದ ಮಾತಲ್ಲ, ಅದರಲ್ಲೂ ಬ್ಯಾಚುಲರ್ಸ್ ಕಥೆ ಕೇಳುವುದೇ ಬೇಡ. ಈಗ ಇಲ್ಲೊಂದು ಅಂತಹದೇ ಪೋಸ್ಟ್ವೊಂದು ವೈರಲ್ ಆಗಿದೆ. ಎಲೆಕ್ಟ್ರಾನಿಕ್ ಸಿಟಿಯಿಂದ ಎಂ.ಜಿ. ರಸ್ತೆಯ ಕಚೇರಿಗೆ ಪ್ರತಿದಿನ 52 ಕಿ.ಮೀ ಪ್ರಯಾಣಿಸಿ ಸುಸ್ತಾದ ಯುವಕನೊಬ್ಬ, ಮನೆ ಹುಡುಕಲಾರದೆ ಬೆಸತ್ತು ಕೆಲಸವನ್ನೇ ಬಿಡಲು ನಿರ್ಧರಿಸಿರುವ ಘಟನೆಯ ಬಗ್ಗೆ ಹಂಚಿಕೊಂಡಿದ್ದಾರೆ. ಇದೀಗ ಈ ವೈರಲ್ ಪೋಸ್ಟ್ ಹೊಸ ಚರ್ಚೆಗೆ ಕಾರಣವಾಗಿದೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಿದ್ದ ಈ ವ್ಯಕ್ತಿ ಎಂ.ಜಿ. ರಸ್ತೆ ಹತ್ತಿರ ಕೆಲಸಕ್ಕೆ ಸೇರಿದ್ದರು. ಪ್ರತಿದಿನ 3 ಗಂಟೆಗಳ ಕಾಲ ಬಿಸಿಲಿನಲ್ಲಿ ಸಂಚರಿಸಿ ಸುಸ್ತಾಗುತ್ತಿದ್ದರು. ಇಂದಿರಾನಗರ, ದೊಮ್ಮಲೂರು, ರಿಚ್‌ಮಂಡ್ ಟೌನ್‌ನಂತಹ ಪ್ರದೇಶಗಳಲ್ಲಿ 25,000 ರೂ. ಬಜೆಟ್‌ನಲ್ಲಿ 1BHK ಮನೆಗಾಗಿ ಹುಡುಕಾಟ ನಡೆಸಿದ್ದರು. ಪ್ರೀಮಿಯಂ ಆಪ್‌ಗಳಿಗೆ 8,000 ರೂ. ಪಾವತಿಸಿದರೂ ಮತ್ತು ಬ್ರೋಕರ್ ಜತೆಗೆ ಅಲೆದಾಟ ಮಾಡಿದರೂ ಸರಿಯಾದ ಮನೆ ಸಿಗಲಿಲ್ಲ. “ಬೆಂಕಿಪೆಟ್ಟಿಗೆಯಂತಹ ಮನೆಗಳಿಗೆ ಅತಿಯಾದ ಬಾಡಿಗೆ ಕೇಳುತ್ತಿದ್ದಾರೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೊಮ್ಮಲೂರಿನಲ್ಲಿ ಒಂದು ಮನೆ ಫಿಕ್ಸ್ ಆಗಿದ್ದರೂ, ಟೋಕನ್ ಹಣ ನೀಡುವ ಸಮಯದಲ್ಲಿ ಬ್ರೋಕರ್ ನಂಬರ್ ಬ್ಲಾಕ್ ಮಾಡಿದ್ದಾನೆ. ನಂತರ ವಿಚಾರಿಸಿದಾಗ ಆ ಮನೆಯನ್ನು ಬೇರೆಯವರಿಗೆ ಹೆಚ್ಚಿನ ಬಾಡಿಗೆಗೆ ನೀಡಲಾಗಿತ್ತು. ಇದರಿಂದ ಬೇಸತ್ತ ಯುವಕ, “ಬೆಂಗಳೂರು ರಿಯಲ್ ಎಸ್ಟೇಟ್ ಒಂದು ಜೋಕ್, ನಾನು ಈ ಮನೆ ಹುಡುಕಾಟದಿಂದ ಬೇಸತ್ತು, ನನ್ನ ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
Bangalore house hunt reality
by
u/Sufficient_Level_819 in
bangalorerentals
ಇಂದಿರಾನಗರ, ದೊಮ್ಲೂರ್, ವಿಕ್ಟೋರಿಯಾ ಲೇಔಟ್, ಫ್ರೇಜರ್ ಟೌನ್ ಮತ್ತು ರಿಚ್ಮಂಡ್ ಟೌನ್ ನಂತಹ ನೆರೆಹೊರೆಯಲ್ಲಿ ಮನೆ ಹುಡುಕಿದರೂ ಮನೆ ಸಿಕ್ಕಿಲ್ಲ. ಬೆಂಗಳೂರಿನ ಬಾಡಿಗೆ ಮಾರುಕಟ್ಟೆಯ ವಾಸ್ತವ ನನಗೆ ಆ ಸಮಯದಲ್ಲಿ ಗೊತ್ತಾಯಿತು. ಕೆಲವು ಟು-ಲೀಟ್ ಬೋರ್ಡ್‌ಗಳನ್ನು ಕಂಡುಕೊಂಡರು ಮತ್ತು ಅವರು ಶಾರ್ಟ್‌ಲಿಸ್ಟ್ ಮಾಡಿದ ಪ್ರದೇಶಗಳಲ್ಲಿ ಲಭ್ಯವಿರುವ ಅಪಾರ್ಟ್‌ಮೆಂಟ್‌ಗಳನ್ನು ಗುರುತಿಸಲು ಒದ್ದಾಡಿದ್ದೇನೆ. ಅದರ ನಡುವೆ ಈ ದಲ್ಲಾಳಿನ ಮೋಸ ಕೂಡ ನನಗೆ ಚಿತ್ರಹಿಂಸೆ ನೀಡಿದೆ. ಆ ಕಾರಣಕ್ಕೆ ಈ ಮನೆ ಹುಡುಕುವುದು ದೊಡ್ಡ ಸವಾಲಾಗಿದೆ ಎಂದು ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್‌ಗೆ ಡಿಕೆಶಿ ಮಾಸ್ಟರ್ ಪ್ಲಾನ್: ಚಾಮರಾಜಪೇಟೆ TO ಕೆಂಗೇರಿ 810 ಕೋಟಿ ರೂ. ವೆಚ್ಚದ ಮೇಲ್ಸೇತುವೆ ಯೋಜನೆ!
ಈ ಪೋಸ್ಟ್‌ಗೆ ಸೋಶಿಯಲ್ ಮೀಡಿಯಾ ನೆಟ್ಟಿಗರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ಬಾಡಿಗೆ ಮಾರುಕಟ್ಟೆಯಲ್ಲಿ ಇದೇ ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ನಾನು ಜನವರಿಯಿಂದ ಮನೆ ಹುಡುಕುತ್ತಿದ್ದೇನೆ. ಒಂದು ಮನೆಯೂ ಸಿಗುತ್ತಿಲ್ಲ. ಚಿಕ್ಕ ಚಿಕ್ಕ ರೂಮ್ಗಳಿರುವ ಮನೆಗಳನ್ನು ತೋರಿಸಿ, ಹೆಚ್ಚು ಪಡೆಯುತ್ತಿದ್ದಾರೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮಲ್ಲೇಶ್ವರಂ, ರಾಜಾಜಿನಗರ ಮತ್ತು ಶೇಷಾದ್ರಿಪುರಂನಂತಹ ಸ್ಥಳಗಳನ್ನು ಪರಿಶೀಲನೆ ಮಾಡಿ ಎಂದು ಒಬ್ಬರು ಸಲಹೆ ನೀಡಿದ್ದಾರೆ.
ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ