ಗೂಗಲ್ ಮ್ಯಾಪ್ನಲ್ಲಿ ಸ್ಥಾನ ಪಡೆದ ಬೆಂಗಳೂರಿನ ರಸ್ತೆ ಗುಂಡಿ: ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಯ್ತು ಗುಂಡಿ ಮ್ಯಾಪ್

| Updated By: ಗಂಗಾಧರ​ ಬ. ಸಾಬೋಜಿ

Updated on: Sep 22, 2022 | 5:14 PM

ಸಿಲಿಕಾನ್ ಸಿಟಿಯ ರಸ್ತೆಯ ಗುಂಡಿಗಳು ಇದೀಗ ಗೂಗಲ್ ಮ್ಯಾಪ್ನಲ್ಲಿ ಸ್ಥಾನ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ಗೂಗಲ್ ಮ್ಯಾಪ್​ನಲ್ಲಿ ಬೆಂಗಳೂರು ಪಾಟ್ ಹೋಲ್ ಅಡ್ರೆಸ್ ಸಖತ್ ವೈರಲ್ ಆಗ್ತಿದೆ.

ಗೂಗಲ್ ಮ್ಯಾಪ್ನಲ್ಲಿ ಸ್ಥಾನ ಪಡೆದ ಬೆಂಗಳೂರಿನ ರಸ್ತೆ ಗುಂಡಿ: ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಯ್ತು ಗುಂಡಿ ಮ್ಯಾಪ್
ಸಿಲಿಕಾನ್ ಸಿಟಿ ಅಲ್ಲ ಪಾಟ್ ಹೋಲ್ ಸಿಟಿ
Follow us on

ಬೆಂಗಳೂರು: ಬೆಂಗಳೂರ ದೇಶದ ಎಲ್ಲರ ಅಚ್ಚು ಮೆಚ್ಚಿನ ನಗರ. ನಮ್ಮ ದೇಶದ ವಿವಿಧ ರಾಜ್ಯಗಳಿಂದ ಅಷ್ಟೇ ಅಲ್ಲ, ಹಲವು ವಿದೇಶೀಯರೂ ಬೆಂಗಳೂರನ್ನೇ ತಮ್ಮ ವಾಸಸ್ಥಾನವನ್ನಾಗಿ ಆರಿಸಿಕೊಂಡಿದ್ದಾರೆ. ದಿನಕ್ಕೊಂದು ಬಡಾವಣೆಯನ್ನು ಏರುತ್ತಾ ಅಕ್ಕಪಕ್ಕದ ಹಳ್ಳಿಗಳನ್ನೆಲ್ಲಾ ತನ್ನ ತೆಕ್ಕೆಯೊಳಕ್ಕೆ ತೆಗೆದುಕೊಂಡು ಬೃಹತ್ ಗಾತ್ರ ಪಡೆದಿದೆ ಬೆಂಗಳೂರು. ಆದ್ರೀಗ ಅಧಿಕಾರಗಳ ಮಾಡಿದ ತಪ್ಪಿಗೆ ಸಿಲಿಕಾನ್ ನಗೆ ಪಾಟ್ಲಿಗೆ ಈಡಾಗಿದ್ದು, ರಸ್ತೆ ಗುಂಡಿಗಳು ಗೂಗಲ್ ಮ್ಯಾಪ್​ನಲ್ಲಿ ಸ್ಥಾನ ಪಡೆದಿವೆ.

ಬೆಂಗಳೂರಿನಲ್ಲಿ ರಸ್ತೆಗುಂಡಿಗೂ ಇದೆ ಪ್ರತ್ಯೇಕ ಅಡ್ರೆಸ್

ಸಿಲಿಕಾನ್ ಸಿಟಿಯ ರಸ್ತೆಯ ಗುಂಡಿಗಳು ಇದೀಗ ಗೂಗಲ್ ಮ್ಯಾಪ್ನಲ್ಲಿ ಸ್ಥಾನ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ಗೂಗಲ್ ಮ್ಯಾಪ್​ನಲ್ಲಿ ಬೆಂಗಳೂರು ಪಾಟ್ ಹೋಲ್ ಅಡ್ರೆಸ್ ಸಖತ್ ವೈರಲ್ ಆಗ್ತಿದೆ. ಬೆಳ್ಳಂದೂರಿನ Abizer’s pothole ಅಡ್ರೆಸ್ ಗೂಗಲ್ ಮ್ಯಾಲ್ನಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಬಿಬಿಎಂಪಿಯ ಮರ್ಯಾದೆ ಮೂರು ಕಾಸಿಗೆ ಹರಾಜು ಆಗಿದೆ. nimo tai ಅನ್ನೊ ಟ್ವಿಟರ್ ಅಕೌಂಟ್​ನಿಂದ ರಸ್ತೆಗುಂಡಿಯ ಸ್ಕ್ರೀನ್ ಶಾಟ್ ಸಖತ್ ಸುದ್ದಿ ಆಗಿದ್ದು, ಇದು ನಾನು ಕಂಡ ಅದ್ಭುತ ರಸ್ತೆಗುಂಡಿ, ದಯವಿಟ್ಟು ಇಲ್ಲಿಗೆ ಭೇಟಿ ಕೊಡಿ ಅಂತಾ ಕಮೆಂಟ್ಸ್ ಮಾಡಿ ವ್ಯಂಗ್ಯ ಮಾಡಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ ಸಿಲಿಕಾನ್ ಸಿಟಿಯ ಗುಂಡಿಗಳಿಗೂ ಮ್ಯಾಪ್

ಇನ್ನು ಇದೇ ವಿಚಾರಕ್ಕೆ ಮಾತನಾಡಿರು ಟ್ರಾಫಿಕ್ ಎಕ್ಸ್ಪರ್ಟ್ ಶ್ರೀಹರಿ, ಅಧಿಕಾರಿಗಳ ತಪ್ಪಿನಿಂದ ಗುಂಡಿಗಳಿಗೂ ಮ್ಯಾಪ್ ಬರುವಂತ ಸ್ಥಿತಿ ಮಾಡಿದ್ದಾರೆ. ಈ ರಸ್ತೆ ಗಂಡುಗಳಿಗೆ ಇನ್ಮುಂದೆ ಪಿನ್ ಕೋಡ್ ಕೊಡದು ಒಳ್ಳೆಯದು. ಅಧಿಕಾರಗಳು ಹೋಪ್ಲೆಸ್ ಕೆಲಸ ಮಾಡ್ತಿದ್ದಾರೆ. ಒಂದು ಅಡ್ರೆಸ್ಗೆ ಬೇಕಾದರೆ ನಾವು ಮ್ಯಾಪ್ ಹಾಕಿಕೊಂಡು ಹೋಗ್ತಿವಿ. ಇದೀಗ ಗುಂಡಿಗಳಿಗೆ ಮ್ಯಾಪ್ ಬಂದಿದಿಯಲ್ಲ‌ ಐಟಿ ಸಿಟಿ ಬೆಂಗಳೂರಿನ್ನ ಮಾನ, ಮರ್ಯಾದೆ ತೆಗೆದಿದ್ದಾರೆ ಅಂತಾ ಬೇಸರ ಹೊರ ಹಾಕಿದ್ದಾರೆ

ಸಕ್ಕತ್ ಟ್ರೆಂಡ್ ಆಗ್ತಿದೆ ಈ ಗುಂಡಿ ಮ್ಯಾಪ್

ಒಟ್ನಲ್ಲಿ ಸದ್ಯ ಎಲ್ಲ ಕಡೆ ಸಕ್ಕತ್ ಟ್ರೆಂಡ್ ಆಗ್ತಿದೆ ಈ ಗುಂಡಿ ಮ್ಯಾಪ್. ಆದ್ರೆ ಅಧಿಕಾರಿಗಳು ಮಾತ್ರ ಬೆಂಗಳೂರಿನ ಮಾನ ಮರ್ಯಾದೆ ಹೋಗ್ತಿದ್ರು ಸಹ ಅಧಿಕಾರಿಗಳ ಮಾತ್ರ ಗಾರ್ಡನಿದ್ರೆಯಲ್ಲಿ ಜಾರಿದ್ದಾರೆ.

2023 ಜ.21ರೊಳಗೆ ಡಾಂಬರೀಕರಣ ಪೂರ್ಣ

ಬಿಬಿಎಂಪಿ ವ್ಯಾಪ್ತಿಯ 2010 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಹೈಕೋರ್ಟ್​ಗೆ ಬಿಬಿಎಂಪಿ ಪರ ವಕೀಲ‌ ವಿ. ಶ್ರೀನಿಧಿ ಮಾಹಿತಿ ನೀಡಿದ್ದಾರೆ. ಪ್ರಮುಖ ರಸ್ತೆಗಳ 221 ರಸ್ತೆಗುಂಡಿ ಮುಚ್ಚುವುದು ಬಾಕಿಯಿದೆ. ದೂರು ಪರಿಹಾರಕ್ಕೆ ವೆಬ್​​ಸೈಟ್​​ನಲ್ಲಿ ಅವಕಾಶ ಕಲ್ಪಿಸಲಾಗಿದೆ, ಆದರೆ ದೂರು ಪರಿಹಾರ ಕೋಶ ಅಸಮರ್ಪಕವಾಗಿದೆ. ವೆಬ್​​ಸೈಟ್​​ನ ದೂರವಾಣಿ ನಂಬರ್ ಕೆಲಸ‌ ಮಾಡುತ್ತಿಲ್ಲವೆಂದು ಹೈಕೋರ್ಟ್​ಗೆ ವರದಿ ನೀಡಿದ್ದಾರೆ. ಇದಕ್ಕೆ ಹೈಕೋರ್ಟ್,​​ ಇಂತಹ ವೆಬ್​​ಸೈಟ್​​ಗಳಿಂದ ದೂರು ಪರಿಹಾರ ಸಾಧ್ಯವೇ? ಎಂದು ಬಿಬಿಎಂಪಿಗೆ ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನೆ ಮಾಡಿದೆ. ರಸ್ತೆಗುಂಡಿ ಮುಚ್ಚಲು ಕೋಲ್ಡ್ ಮಿಕ್ಸ್ ಬಳಕೆಗೂ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಬಾಳಿಕೆ ಬರುವ ಹಾಟ್ ಮಿಕ್ಸ್ ತಂತ್ರಜ್ಞಾನ ಬಳಸಲು ಸೂಚನೆ ನೀಡಿದೆ.

427 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ಟೆಂಡರ್ ಕರೆಯಲಾಗಿದೆ. 2023 ಜ.21ರೊಳಗೆ ಡಾಂಬರೀಕರಣ ಪೂರ್ಣಗೊಳಿಸಲಾಗುವುದು. 2023 ಮಾ.31 ರೊಳಗೆ 2500 ಕಿ.ಮೀ. ಒಳರಸ್ತೆ ಡಾಂಬರೀಕರಣವನ್ನು ಪೂರ್ಣಗೊಳಿಸಲಾಗುವುದು ಎಂದು ಹೈಕೋರ್ಟ್​ಗೆ ಬಿಬಿಎಂಪಿ ಪರ ವಕೀಲರು ಮಾಹಿತಿ ನೀಡಿದ್ದಾರೆ. ಬೈಕ್ ಸವಾರರಿಗೆ ಅಪಾಯಕಾರಿಯಾಗದ ರೀತಿ ರಸ್ತೆಗುಂಡಿ‌ ಮುಚ್ಚಲು ಹೈಕೋರ್ಟ್​ ಬಿಬಿಎಂಪಗೆ ಸೂಚನೆ ನೀಡಿ, ವಿಚಾರಣೆಯನ್ನು ಸೆಪ್ಟೆಂಬರ್​​ 30ಕ್ಕೆ ಮುಂದೂಡಿದೆ.

ವರದಿ: ವಿನಯಕುಮಾರ್ ಕಾಶಪ್ಪನವರ್, ಟಿವಿ9, ಬೆಂಗಳೂರು

Published On - 5:09 pm, Thu, 22 September 22