ಕಳೆದ 10 ವರ್ಷಗಳಲ್ಲಿ ಅಕ್ಟೋಬರ್​​ನಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ತಂಪು ತಂಪು ಕೂಲ್ ಕೂಲ್

|

Updated on: Oct 25, 2023 | 10:58 AM

ಮಳೆಯಾಗದೆ ಬೆಂಗಳೂರಿನ ಹವಾಮಾನದಲ್ಲಿ ವೈಪರೀತ್ಯ ಕಂಡುಬಂದಿದೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮಂಗಳವಾರ ಕನಿಷ್ಠ ತಾಪಮಾನ 17.2 ಡಿಗ್ರಿ ಸೆಲ್ಸಿಯಸ್​​, ಹೆಚ್‌ಎಎಲ್ ವಿಮಾನ ನಿಲ್ದಾಣದ ಬಳಿ 17 ಡಿಗ್ರಿ ಸೆಲ್ಸಿಯಸ್​​ ತಾಪಮಾನ ದಾಖಲಾಗಿದೆ.

ಕಳೆದ 10 ವರ್ಷಗಳಲ್ಲಿ ಅಕ್ಟೋಬರ್​​ನಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ತಂಪು ತಂಪು ಕೂಲ್ ಕೂಲ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು ಅ.25: ಕಳೆದ 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಮಂಗಳವಾರ ಕನಿಷ್ಠ 17.1 ಡಿಗ್ರಿ ಸೆಲ್ಸಿಯಸ್​ ತಾಪಮಾನ (Temperature) ದಾಖಲಾಗಿದೆ. 2014ರ ಅಕ್ಟೋಬರ್ 31 ರಂದು ತಾಪಮಾನವು 17.5 ಡಿಗ್ರಿ ಸೆಲ್ಸಿಯಸ್​​ಗೆ ಇಳಿದಿತ್ತು. ಇದಾದ ಬಳಿಕ 2023ರ ಅಕ್ಟೋಬರ್​ 24 ರಂದು 17.1 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (IMD) ತಿಳಿಸಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಕನಿಷ್ಠ ತಾಪಮಾನ 17.2 ಡಿಗ್ರಿ ಸೆಲ್ಸಿಯಸ್​​, ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 17 ಡಿಗ್ರಿ ಸೆಲ್ಸಿಯಸ್​​ ತಾಪಮಾನ ದಾಖಲಾಗಿದೆ.

‘ರೇಡಿಯೇಶನ್ ಕೂಲಿಂಗ್’

ತಾಪಮಾನದಲ್ಲಿನ ಕುಸಿತವು “ರೇಡಿಯೇಶನ್ ಕೂಲಿಂಗ್” ಎಂಬ ವಿದ್ಯಮಾನಕ್ಕೆ ಕಾರಣವೆಂದು ಹೇಳಬಹುದು. ಶಾಖವು ರಾತ್ರಿಯ ಸಮಯದಲ್ಲಿ ಭೂಮಿಯಿಂದ ಹೊರಸೂಸಲ್ಪಡುತ್ತದೆ. ಮಳೆಯಾಗದೆ ತಾಪಮಾನದಲ್ಲಿ ಕುಸಿತವುಂಟಾಗಿದ್ದು, ಇದನ್ನು ವಿಕಿರಣ ತಂಪಾಗಿಸುವಿಕೆ ಎಂದು ಕರೆಯಲಾಗುತ್ತದೆ. ಕೊನೆಪಕ್ಷ ಮಳೆ ಮೋಡ ಕವಿದರೆ ತಾಪಮಾನ ಕಡಿಮೆಯಾಗುವುದಿಲ್ಲ. ಕಳೆದ ವರ್ಷ ಇದೇ ಅವಧಿಯಲ್ಲಿ ಮಳೆಯಾಗಿದ್ದರಿಂದ ತಾಪಮಾನ ಈ ರೀತಿ ಕಡಿಮೆಯಾಗಿಲ್ಲ ಎಂದು ಬೆಂಗಳೂರಿನ ಐಎಂಡಿ ವಿಜ್ಞಾನಿ ಎ.ಪ್ರಸಾದ್ ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:52 am, Wed, 25 October 23