ಇಂದಿನಿಂದ 3 ದಿನ ಬೆಂಗಳೂರಿನಲ್ಲಿ ಸ್ಪೇಸ್​ ಎಕ್ಸ್​​ಪೋ 2024 ಸಮ್ಮೇಳನ

ಎಂಟನೇ ಆವೃತ್ತಿಯ ಅಂತರಾಷ್ಟ್ರೀಯ ಬೆಂಗಳೂರು ಸ್ಪೇಸ್​ ಎಕ್ಸ್​​ಪೋ 2024 ಸಮ್ಮೇಳನ ಇಂದಿನಿಂದ ಆರಂಭವಾಗಿದೆ. ಸಮ್ಮೇಳನ ಸೆಪ್ಟೆಂಬರ್​ 18 ರಿಂದ 20ರವರೆಗೆ ನಡೆಯಲಿದೆ. ಮೂರು ದಿನಗಳ ಈ ಸಮ್ಮೇಳನದಲ್ಲಿ ವಿವಿಧ ದೇಶಗಳ 250ಕ್ಕೂ ಅಧಿಕ ಗಣ್ಯರು ಮತ್ತು ಕಂಪನಿಗಳು ಭಾಗಿಯಾಗಲಿವೆ.

ಇಂದಿನಿಂದ 3 ದಿನ ಬೆಂಗಳೂರಿನಲ್ಲಿ ಸ್ಪೇಸ್​ ಎಕ್ಸ್​​ಪೋ 2024 ಸಮ್ಮೇಳನ
ಸಾಂದರ್ಭಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on:Sep 18, 2024 | 11:08 AM

ಬೆಂಗಳೂರು, ಸೆಪ್ಟೆಂಬರ್​ 18: ಎಂಟನೇ ಆವೃತ್ತಿಯ ಅಂತರಾಷ್ಟ್ರೀಯ ಬೆಂಗಳೂರು ಸ್ಪೇಸ್​ ಎಕ್ಸ್​​ಪೋ 2024 (Bengaluru Space Expo -2024) ಸಮ್ಮೇಳನ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ. ಈ ಸಮ್ಮೇಳನದಲ್ಲಿ ವಿವಿಧ ದೇಶಗಳ 250ಕ್ಕೂ ಅಧಿಕ ಗಣ್ಯರು ಮತ್ತು ಕಂಪನಿಗಳು ಭಾಗಿಯಾಗಲಿವೆ. ಈ ಅಂತರಾಷ್ಟ್ರೀಯ ಸಮ್ಮೇಳನವನ್ನು ಭಾರತೀಯ ಕೈಗಾರಿಕೆಗಳ ಒಕ್ಕೂಟ (CII) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಆಯೋಜಿಸಿದೆ.

ಬಾಹ್ಯಾಕಾಶ ತಂತ್ರಜ್ಞಾನದ ವಿಚಾರವಾಗಿ ಚರ್ಚಿಸಲು ಮತ್ತು ಹೊಸದನ್ನು ಅನ್ವೇಷಿಸಲು ಸಂಶೋಧಕರಿಗೆ, ಉದ್ಯಮಿಗಳಿಗೆ ಸಮ್ಮೇಳನ ವೇದಿಕೆ ಕಲ್ಪಿಸಿದೆ. ಸಮ್ಮೇಳನದಲ್ಲಿ ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹೊಸ ಅನ್ವೇಷಣೆಗಳು ಅನಾವರಣಗೊಳ್ಳಲಿವೆ.

ಬೆಂಗಳೂರು ಬಾಹ್ಯಾಕಾಶ ಸ್ಪೇಸ್​ ಎಕ್ಸಪೋ 2024 ಇಂದು (ಸೆ.18) ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗಿದೆ. ಉದ್ಯಮಿಗಳು ಸಮ್ಮೇಳನಕ್ಕೆ ಯಾವುದೇ ದಿನ ಮತ್ತು ನಿಗದಿತ ಸಮಯದಲ್ಲಿ ಭೇಟಿ ನೀಡಬಹುದಾಗಿದೆ. ಇನ್ನು, ಸಾಮಾನ್ಯ ಜನರು ಮತ್ತು ವಿದ್ಯಾರ್ಥಿಗಳು ಕೊನೆಯ ದಿನ ಸಮ್ಮೇಳನಕ್ಕೆ ಭೇಟಿ ನೀಡಬಹುದಾಗಿದೆ.

ಈ ಸಮ್ಮೇಳನದಲ್ಲಿ ಡಿಟಿಹೆಚ್​ ಪೂರೈಕೆದಾರರು, ಎಲೆಕ್ಟ್ರಾನಿಕ್ಸ್​​ ಮತ್ತು ಆಪ್ಟಿಕ್ಸ್​, ಜಿಪಿಎಸ್​ ನ್ಯಾವಿಗೇಷನ್​, ಐಟಿ ಮತ್ತು ಬಾಹ್ಯಾಕಾಶಕ್ಕೆ ಸಂಬಂಧಿಸಿದ ಆಟೋಬೈಲ್​​, ಉಡಾವಣಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವ, ಸಂಶೋಧನಾ ಸಂಸ್ಥೆಗಳು ಸೇರಿದಂತೆ ಹಲವಾರು ಕಂಪನಿಗಳು ಭಾಗಿಯಾಗಲಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:04 am, Wed, 18 September 24

ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ