ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಚಿರತೆ ಓಡಾಟ, ಜನರಿಗೆ ಹೆಚ್ಚಿದ ಆತಂಕ
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಎನ್‌ಟಿಟಿಎಫ್ ಕಾಲೇಜು ಕಾಂಪೌಂಡ್ ಪಕ್ಕದಲ್ಲಿನ ರಸ್ತೆಯಲ್ಲಿ ಚಿರತೆ ರಸ್ತೆ ದಾಟುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಿರತೆ ರಸ್ತೆ ದಾಟುತ್ತಿರುವ ದೃಶ್ಯ ಟೋಲ್ ಫ್ಲಾಜಾ ಫೇಸ್ 1ರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೆಂಗಳೂರು, ಸೆಪ್ಟೆಂಬರ್ 18: ಮಂಗಳವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿಯ (Electronic City) ಎನ್‌ಟಿಟಿಎಫ್ (NNTF) ಕಾಲೇಜು ಕಾಂಪೌಂಡ್ ಪಕ್ಕದಲ್ಲಿನ ರಸ್ತೆಯಲ್ಲಿ ಚಿರತೆ (Leopard) ರಸ್ತೆ ದಾಟುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಿರತೆ ರಸ್ತೆ ದಾಟುತ್ತಿರುವ ದೃಶ್ಯ ಟೋಲ್ ಫ್ಲಾಜಾ ಫೇಸ್ 1ರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ಚಿರತೆ ಕಾಣಿಸಿಕೊಂಡಿದ್ದು ಇದೇ ಮೊದಲಲ್ಲ. ಎರಡು ವಾರಗಳ ಹಿಂದೆ ಬೆಂಗಳೂರಿನ ಜಿಗಣಿ ಪ್ರದೇಶದಲ್ಲಿ ಚಿರತೆ ಓಡಾಟ ಕಂಡುಬಂದಿತ್ತು. ಇದೇ ಚಿರತೆ ಮತ್ತೆ ಎಲೆಕ್ಟ್ರಾನಿಕ್ ಸಿಟಿಯಲ್ಲೂ ಕಂಡು ಬಂದಿದೆ ಎಂದು ಅಧಿಕಾರಿಗಳು ಮತ್ತು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ: Viral Video: ಚಿರತೆಯನ್ನು ಬೇಟೆಯಾಡಿದ ನಾಯಿಗಳು; ವಿಡಿಯೋ ಇಲ್ಲಿದೆ ನೋಡಿ
ಎಲೆಕ್ಟ್ರಾನಿಕ್ ಸಿಟಿಯ ಎನ್‌ಟಿಟಿಎಫ್ ಕಾಲೇಜಿನ ಪ್ರಾಂಶುಪಾಲ ಸುನೀಲ್ ಜೋಶಿ ಮಾತನಾಡಿ, ಟೋಲ್‌ಗೇಟ್ ಬಳಿಯಿರುವ ಕ್ಯಾಮೆರಾದಲ್ಲಿ ಕಾಂಪೌಂಡ್ ಬಳಿ ಚಿರತೆ ಹಾದು ಹೋಗಿರುವ ದೃಶ್ಯ ಸೆರೆಯಾಗಿದೆ. ಕ್ಯಾಂಪಸ್‌ನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪರಿಶೀಲನೆ ನಡೆಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಬಂದು ಮರು ಪರಿಶೀಲನೆ ನಡೆಸಿದ್ದಾರೆ.
ಟ್ವಿಟರ್ ಪೋಸ್ಟ್
A leopard was spotted on CCTV near Kyalasnalli, Harbour’s Layout at 3 am, causing panic among locals. Stray dogs barking alerted residents, and security guards are now equipped with firecrackers to deter the big cat. Forest officials are monitoring the situation. #jigani #leopard… pic.twitter.com/nTk58xRpo0
— Karnataka Portfolio (@karnatakaportf) September 3, 2024
ನಾವು ಎಲ್ಲ ಕೊಠಡಿಗಳು ಮತ್ತು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದೇವೆ. ಚಿರತೆಯ ಯಾವುದೇ ಕುರುಹು ಕಂಡುಬಂದಿಲ್ಲ. ಚಿರತೆ ಕಾಂಪೌಂಡ್ ಪಕ್ಕದ ಮಾರ್ಗದ ಬಳಿ ನಡೆದುಕೊಂಡು ಹೋಗುತ್ತಿರುವುದು ಕಂಡಿದೆ. ಆದರೆ ಅದು ಎಲ್ಲಿ ಹೋಯಿತು ಎಂದು ನಮಗೆ ತಿಳಿದಿಲ್ಲ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:32 am, Wed, 18 September 24