AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿಗೆ ಒಪ್ಪಿರುವುದಾಗಿ ವ್ಯಕ್ತಿಯನ್ನು ಕರೆಸಿ ಚಾಕು ಇರಿತ; ಯುವತಿ ಹಾಗೂ ಆತನ ಸ್ನೇಹಿತ ಅರೆಸ್ಟ್

ಜಯನಗರದಲ್ಲಿ ಬಟ್ಟೆ ಅಂಗಡಿ ನಡೆಸ್ತಿರೋ ಹಿತೇಂದ್ರ ಕುಮಾರ್ ಅವರ ಬಟ್ಟೆ ಅಂಗಡಿಯಲ್ಲಿ ಕೆಲಸ ಬಿಟ್ಟಿದ್ದ ಯುವತಿ ಕರೆ ಮಾಡಿ ಕರೆದಾಗ ಹಿತೇಂದ್ರ ಭೇಟಿಗೆ ಹೋಗಿದ್ದರು. ಈ ವೇಳೆ ಹಿತೇಂದ್ರ ಅವರು ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದರು. ಬಳಿಕ ಮತ್ತೊಮ್ಮೆ ಭೇಟಿ ವೇಳೆ ಯುವತಿಯ ಸ್ನೇಹಿತ ಚಾಕು ಇರಿದಿದ್ದಾನೆ.

ಪ್ರೀತಿಗೆ ಒಪ್ಪಿರುವುದಾಗಿ ವ್ಯಕ್ತಿಯನ್ನು ಕರೆಸಿ ಚಾಕು ಇರಿತ; ಯುವತಿ ಹಾಗೂ ಆತನ ಸ್ನೇಹಿತ ಅರೆಸ್ಟ್
ಸಾಂದರ್ಭಿಕ ಚಿತ್ರ
TV9 Web
| Edited By: ಆಯೇಷಾ ಬಾನು|

Updated on: Sep 18, 2024 | 10:34 AM

Share

ಬೆಂಗಳೂರು, ಸೆ.18: ಯುವತಿಯೋರ್ವಳು ತಾನು ಪ್ರೀತಿ‌ ಮಾಡುವುದಾಗಿ ಸುಳ್ಳು ಹೇಳಿ ವ್ಯಕ್ತಿಯನ್ನು ತಾನಿರುವ ಜಾಗಕ್ಕೆ ಕರೆಸಿ ತನ್ನ ಸ್ನೇಹಿತನ ಕೈಯಿಂದ ಚಾಕು ಇರಿಸಿದ ಘಟನೆ ಬೆಂಗಳೂರಿನ ಸದ್ದಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತನ್ನ ಪ್ರೀತಿಗೆ (Love) ಯುವತಿ ಒಪ್ಪಿಕೊಂಡಿದ್ದಾಳೇ ಎಂದು ಖುಷಿಯಲ್ಲಿ ಭೇಟಿಯಾಗಲು ಬಂದ ವ್ಯಕ್ತಿ ಮೇಲೆ ಕೊಲೆ ಯತ್ನ ನಡೆದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಟ್ಟೆ ಅಂಗಡಿ ವ್ಯಾಪಾರಿ ಹಿತೇಂದ್ರ ಕುಮಾರ್(59) ಎಂಬಾತನ ಮೇಲೆ ಕೊಲೆ ಯತ್ನ ನಡೆದಿದೆ. ಜಯನಗರದಲ್ಲಿ ಬಟ್ಟೆ ಅಂಗಡಿ ನಡೆಸ್ತಿರೋ ಗಾಯಾಳು ಹಿತೇಂದ್ರ ಕುಮಾರ್ ಅವರ ಬಟ್ಟೆ ಅಂಗಡಿಗೆ ಜೂನ್ ತಿಂಗಳಲ್ಲಿ ಕೆಲಸಕ್ಕೆಂದು ಓರ್ವ ಯುವತಿ ಸೇರಿಕೊಂಡಿದ್ದಳು. ಎರಡು ಮೂರು ತಿಂಗಳು ಕೆಲಸ ಮಾಡಿ ನಂತರ ಕೆಲಸ ಬಿಟ್ಟಿದ್ದಳು. ಕಳೆದ ಸೆ. 14ರಂದು ಭೇಟಿಯಾಗೋಣಾ ಎಂದು ಯುವತಿ ಫೋನ್ ಮಾಡಿ ಹಿತೇಂದ್ರ ಅವರನ್ನು ಕರೆಸಿಕೊಂಡಿದ್ದಳು. ಬಿಟಿಎಂ ಲೇಔಟ್ ನ ಪಾರ್ಕ್ ವೊಂದರಲ್ಲಿ ಯುವತಿಯನ್ನ ಭೇಟಿಯಾಗಲು ಹಿತೇಂದ್ರ ಅವರು ತೆರಳಿದ್ದಳು.

ಇದನ್ನೂ ಓದಿ: ಆನೆ-ಮಾನವ ಸಂಘರ್ಷ ತಪ್ಪಿಸಲು ಕೇಂದ್ರ ಸಚಿವ ಭೂಪೇಂದ್ರ ಯಾದವ್​ಗೆ ಮನವಿ ಸಲ್ಲಿಸಿದ ಸಂಸದ ಯದುವೀರ್

ಈ ವೇಳೆ ಹಿತೇಂದ್ರ ಕುಮಾರ್ ತನ್ನ ಪಾರ್ಕ್​ನ ಬೆಂಚ್ ಮೇಲೆ ಕೂತು ಪ್ರೀತಿಯ ನಿವೇದನೆಯನ್ನು ಯುವತಿ ಬಳಿ ಹೇಳಿಕೊಂಡಿದ್ದ. ಯುವತಿ ಕೂಡ ಈ ಪ್ರೀತಿಗೆ ಒಕೆ ಅಂತಾ ಹೇಳಿದ್ದಳು. ಇದೇ ಖುಷಿಯಲ್ಲಿ ಮಾರನೇ ದಿನ ಮತ್ತೆ ಭೇಟಿ ಮಾಡಲು ಹಿತೇಂದ್ರ ಯುವತಿಯನ್ನು ಕರೆದಿದ್ದ. ಅದೇ ಪಾರ್ಕ್ ನಲ್ಲಿ, ಅದೇ ಬೆಂಚ್ ಮೇಲೆ ಕೂತು ಇಬ್ಬರೂ ಮಾತನಾಡಿದ್ದರು. ಈ‌ ವೇಳೆ ಯುವತಿ ಸ್ನೇಹಿತ ಸಿದ್ದು ಚಾಕು ಸಮೇತ ಏಕಾಏಕಿ ಎಂಟ್ರಿ ಕೊಟ್ಟಿದ್ದ. ಯುವತಿ ಹಾಗೂ ಹಿತೇಂದ್ರ ಮಾತನಾಡುತ್ತ ಕೂತಿದ್ದನ್ನು ಕಂಡ ಸಿದ್ದು ಜಗಳ ಶುರು ಮಾಡಿದ್ದ. ಈ ವೇಳೆ ಮೂವರ ಮಧ್ಯೆ ಜಗಳವಾಗಿ ಕೊನೆಗೆ ಸಿದ್ದು ಹಿತೇಂದ್ರಗೆ ಚಾಕು ಇರಿದಿದ್ದಾನೆ.

ಹಿತೇಂದ್ರ ಕುಮಾರ್ ಹೊಟ್ಟೆ, ಬೆನ್ನು ಸೇರಿ ಕೆಲವೆಡೆ ಇರಿಯಲಾಗಿದೆ. ಘಟನೆ ಸಂಬಂಧ ತಾನು ಪ್ರೀತಿಸ್ತಿದ್ದ ಯುವತಿ ಹಾಗೂ ಆಕೆಯ ಸ್ನೇಹಿತ ಸಿದ್ದು ವಿರುದ್ಧ ಗಾಯಾಳು ಹಿತೇಂದ್ರ ಅವರು ದೂರು ದಾಖಲಿಸಿದ್ದಾರೆ. ಉದ್ದೇಶ ಪೂರ್ವಕವಾಗಿ ಕೊಲೆ ಯತ್ನ ಮಾಡಿದ್ದಾರೆ ಎಂದು ಸದ್ದಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಸಿದ್ದು ಮತ್ತು ಆತನ ಸ್ನೇಹಿತೆಯನ್ನ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಬೇರೆ ವಿಚಾರ ಇರುವ ಶಂಕೆ ಹಿನ್ನೆಲೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಯುವತಿ ಬಳಿ ಪ್ರಕರಣಕ್ಕೆ ನಿಖರ ಕಾರಣದ ಮಾಹಿತಿ ಕಲೆ ಹಾಕಲಾಗುತ್ತಿದೆ.

ವರದಿ: ಪ್ರದೀಪ್, ಟಿವಿ9 ಬೆಂಗಳೂರು

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್