Peenya flyover: ಪೀಣ್ಯ ಫ್ಲೈಓವರ್ ಮೇಲೆ ಸ್ಪೀಡ್ ಬ್ರೇಕ್, ಅತಿ ವೇಗವಾಗಿ ವಾಹನ ಸಂಚರಿಸಿದರೆ ದಂಡ
ಪೀಣ್ಯ ಮೇಲ್ಸೇತುವೆ ಮೇಲೆ ಭಾರೀ ವಾಹನಗಳ ಓಡಾಟ ಯಾವಾಗ ಎಂದು ಎದುರು ನೋಡುತ್ತಿದ್ದವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಬೆಂಗಳೂರು ಸಂಚಾರಿ ಪೊಲೀಸರು ಸಿಹಿ ಸುದ್ದಿ ನೀಡಿದ್ದಾರೆ. ಜುಲೈ 29ರಿಂದ ಪ್ಲೈಓವರ್ ಮೇಲೆ ಎಲ್ಲಾ ರೀತಿಯ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲು ಸಿದ್ಧತೆ ಮಾಡಲಾಗಿದೆ. ಆದರೆ, ವಾಹನ ಸವಾರರ ಸ್ಪೀಡ್‌ಗೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ.
ಬೆಂಗಳೂರು, ಜುಲೈ 26: ಪೀಣ್ಯ ಮೇಲ್ಸೇತುವೆ ಮೇಲೆ ಭಾರೀ ವಾಹನಗಳ ಓಡಾಟಕ್ಕೆ ಯಾವಾಗ ಅವಕಾಶ ಸಿಗಬಹುದು ಎಂಬ ಕಾತರ ಬೆಂಗಳೂರಿಗರಲ್ಲಿತ್ತು. ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜುಲೈ 29 ರಿಂದ ಪೀಣ್ಯ ಪ್ಲೈಓವರ್ ಮೇಲೆ ಎಲ್ಲಾ ಮಾದರಿಯ ವಾಹನಗಳು ಓಡಾಡಲು ಅವಕಾಶ ಕ್ಪಿಸಿದೆ. ಐಐಎಸ್‌ಸಿ ಅಧ್ಯಯನದ ನಂತರ ಘನ ವಾಹನಗಳ ಓಡಾಕ್ಕೆ ಗ್ರೀನ್ ಸಿಗ್ನಲ್ ಸಿಕ್ಕ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಬೆಂಗಳೂರು ಸಂಚಾರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಆದರೆ, ವಾಹನ ಸವಾರರಿಗೆ ಕೆಲವೊಂದು ಅನುಸರಿಸಲೇ ಬೇಕಾದ ಷರತ್ತುಗಳನ್ನೂ ವಿಧಿಸಿದ್ದಾರೆ.
ಪೀಣ್ಯ ಮೇಲ್ಸೇತುವೆಯ ಎರಡು ಪಿಲ್ಲರ್ಗಳಿಗೆ ಈಗಾಗಲೇ ಕೇಬಲ್ಗಳನ್ನ ಅಳವಡಿಕೆ ಮಾಡಲಾಗಿದೆ. ಅದಕ್ಕೆ ಸಿಮೆಂಟ್ ಕಾರ್ಯ ಕೂಡ ಮಾಡಬೇಕಿದೆ. ಮತ್ತಷ್ಟು ಕೇಬಲ್ ಅಳವಡಿಕೆ ಕೂಡ ಮಾಡಬೇಕಿದೆ. ಹೀಗಾಗಿ ವಿಶೇಷ ಕಾಮಗಾರಿ ಅವಶ್ಯಕತೆ ಇರುವ ಹಿನ್ನೆಲೆ ಇಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅನುಮತಿ ಕೊಟ್ಟರೂ ವಾಹನಗಳ ಓಡಾಟದ ಸ್ಪೀಡ್‌ಗೆ ಬ್ರೇಕ್ ಹಾಕಿದೆ.
ಪೀಣ್ಯ ಫ್ಲೈಓವರ್ ವೇಗದ ಮಿತಿ ಎಷ್ಟು?
ಪೀಣ್ಯ ಫ್ಲೈಓವರ್ ಮೇಲೆ ಸಂಚಾರ ಮಾಡುವ ವಾಹನಗಳು ಗಂಟೆಗೆ 40-50 ಕಿಮೀ ವೇಗದಲ್ಲಿ ಮಾತ್ರ ಸಂಚಾರ ಮಾಡಬೇಕೆಂದು ಐಐಎಸ್‌ಸಿ ತಜ್ಞರು ಹೇಳಿದ್ದಾರೆ. ಸಿಮೆಂಟ್ ಕಾರ್ಯ ಮಾಡಬೇಕಾದಾಗ ಹೆಚ್ಚು ಸ್ಪೀಡ್‌ನಲ್ಲಿ ವಾಹನಗಳ ಓಡಾಟ ನಡೆಸಿದರೆ, ವೈಬ್ರೆಷನ್ ಉಂಟಾಗಿ ಅದರಿಂದ ಕಾಮಗಾರಿಗೆ ಅಡಚಣೆಯಾಗಲಿದೆ. ಈ ಹಿನ್ನೆಲೆ ಸ್ಪೀಡ್ ಲಿಮಿಟ್ ಅಳವಡಿಸಲಾಗಿದೆ.
ಒಂದು ದಿನ ಘನ ವಾಹನ ಸಂಚಾರಕ್ಕಿಲ್ಲ ಅನುಮತಿ
ಪ್ರತಿ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಶನಿವಾರ ಬೆಳಗ್ಗೆ 6 ಗಂಟೆವರೆಗೂ ಘನ ವಾಹನಗಳ ಓಡಾಟ ಬಂದ್ ಇರಲಿದೆ. ವಾಹನ ಸವಾರರು ಬೆಂಗಳೂರಿಗೆ ಬರಲು ಬದಲಿ ಮಾರ್ಗ ಅನುಸರಿಬೇಕಾಗುತ್ತದೆ. ಪ್ಲೈ ಓವರ್ ಎಡಪಥದಲ್ಲಿ ಗಂಟೆಗೆ 40 ಕಿಮೀ ವೇಗದಲ್ಲಿ ಸಂಚರಿಸಲು ಟ್ರಾಫಿಕ್ ಪೊಲೀಸರು ಸೂಚಿಸಿದ್ದಾರೆ.
ಇದನ್ನೂ ಓದಿ: ಪೀಣ್ಯ ಮೇಲ್ಸೇತುವೆ ಜುಲೈ ಕೊನೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ಮುಕ್ತ
ಪೀಣ್ಯ ಮೇಲ್ಸೇತುವೆಯಲ್ಲಿ ಭಾರೀ ವಾಹನಗಳ ಓಡಾಟಕ್ಕೆ ಅವಕಾಶ ಇಲ್ಲದ ಕಾರಣ ಗೊರಗುಂಟೆಪಾಳ್ಯ, ಜಾಲಹಳ್ಳಿ, ದಾಸರಹಳ್ಳಿ, ಎಂಟನೇಮೈಲಿ ಭಾಗದಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗುತ್ತಾ ಇತ್ತು. ವಾಹನ ಸಂಚಾರಕ್ಕೆ ಅವಕಾಶ ಕೊಟ್ಟ ಕಾರಣ ಟ್ರಾಫಿಕ್ ಸಮಸ್ಯೆ ಕಡಿಮೆ ಆಗುವ ನಿರೀಕ್ಷೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ