AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಬ್ ಅಗ್ರಿಗೇಟರ್‌ಗಳ ಮನಸೋಇಚ್ಛೆ ದರ ವಸೂಲಿಗೆ ಬ್ರೇಕ್: ಬೆಂಗಳೂರಲ್ಲಿ ಯೆಲ್ಲೋ ಬೋರ್ಡ್ ಟ್ಯಾಕ್ಸಿಗಳಿಗೂ ಫೇರ್ ಮೀಟರ್ ಕಡ್ಡಾಯ

ಬೆಂಗಳೂರಿನಲ್ಲಿ ಸಂಚರಿಸುವ ಎಲ್ಲ ಯೆಲ್ಲೋ ಬೋರ್ಡ್ ಕ್ಯಾಬ್‌ಗಳಿಗೆ ಫೇರ್ ಮೀಟರ್ ಕಡ್ಡಾಯಗೊಳಿಸಲಾಗಿದೆ. ಅಗ್ರಿಗೇಟರ್‌ ಕಂಪನಿಗಳು ಹಾಗೂ ಕ್ಯಾಬ್ ಮಾಲೀಕರು ಪ್ರಯಾಣಿಕರಿಂದ ಅನಿಯಮಿತ ದರ ವಸೂಲಿ ಮಾಡುವುದನ್ನು ತಡೆಯಲು ಈ ಆದೇಶ ಹೊರಡಿಸಲಾಗಿದೆ. ಹೊಸ ಕ್ಯಾಬ್‌ಗಳ ನೋಂದಣಿ ಮತ್ತು ಹಳೆಯ ಕ್ಯಾಬ್‌ಗಳ ಎಫ್‌ಸಿ (FC) ಗೆ ಫೇರ್ ಮೀಟರ್ ಅಗತ್ಯವಾಗಿದೆ.

ಕ್ಯಾಬ್ ಅಗ್ರಿಗೇಟರ್‌ಗಳ ಮನಸೋಇಚ್ಛೆ ದರ ವಸೂಲಿಗೆ ಬ್ರೇಕ್: ಬೆಂಗಳೂರಲ್ಲಿ ಯೆಲ್ಲೋ ಬೋರ್ಡ್ ಟ್ಯಾಕ್ಸಿಗಳಿಗೂ ಫೇರ್ ಮೀಟರ್ ಕಡ್ಡಾಯ
ಕ್ಯಾಬ್​ Image Credit source: tv9 kannada
ಕಿರಣ್​ ಸೂರ್ಯ
| Edited By: |

Updated on: Sep 06, 2026 | 9:40 PM

Share

ಬೆಂಗಳೂರು, ಸೆಪ್ಟೆಂಬರ್​ 06: ಬೆಂಗಳೂರಿನಲ್ಲಿ ಸಂಚಾರ ಮಾಡುವ ಆಟೋಗಳಿಗೆ ಫೇರ್ ಮೀಟರ್ ಕಡ್ಡಾಯ, ಆದರೆ ಇದೀಗ ಯೆಲ್ಲೋ ಕ್ಯಾಬ್ಗಳಿಗೂ ಫೇರ್ ಮೀಟರ್ ಕಡ್ಡಾಯಗೊಳಿಸಲಾಗಿದ್ದು, ಇದರಿಂದ ಕೆಲ ಕ್ಯಾಬ್ ಮಾಲೀಕರು ಹಾಗೂ ಅಗ್ರಿಗೇಟರ್ ಕಂಪನಿಗಳ ಕಳ್ಳಾಟಕ್ಕೆ ಬ್ರೇಕ್ ಬೀಳಲಿದೆ. ಈ ನಿಯಮಕ್ಕೆ ಸದ್ಯ ಸಿಲಿಕಾನ್ ಸಿಟಿ ಪ್ರಯಾಣಿಕರು ಫುಲ್ ಖುಷ್ ಆಗಿದ್ದಾರೆ.

‘ಒನ್ ಸಿಟಿ ಒನ್ ಫೇರ್’ ನಿಯಮ

ನಗರದಲ್ಲಿ ಕೆಲ ಕ್ಯಾಬ್ ಮಾಲೀಕರು ಹಾಗೂ ಅಗ್ರಿಗೇಟರ್ ಕಂಪನಿಗಳು ಬೆಳಿಗ್ಗೆ ಒಂದು ದರ, ಮಧ್ಯಾಹ್ನ ಒಂದು ದರ ಹಾಗೂ ಮಳೆ ಬಂದಾಗ ಮತ್ತೊಂದು ದರವೆಂದು ಸಮಯಕ್ಕೆ ತಕ್ಕಂತೆ ಪ್ರಯಾಣಿಕರಿಂದ ಸುಲಿಗೆ ಮಾಡುತ್ತಿದ್ದವು.

ಇದನ್ನೂ ಓದಿ: ಕ್ಯಾಬ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್

ಈ ಅನ್ಯಾಯ ತಡೆಯಲು ಸಾರಿಗೆ ಇಲಾಖೆ ಜಾರಿಗೆ ತಂದಿದ್ದ ‘ಒನ್ ಸಿಟಿ ಒನ್ ಫೇರ್’ ನಿಯಮವನ್ನು ಯಾವುದೇ ಕಂಪನಿಗಳು ಪಾಲಿಸದೆ ನಿಯಮ ಉಲ್ಲಂಘಿಸುತ್ತಿದ್ದ ಹಿನ್ನೆಲೆಯಲ್ಲಿ, ಸಾರಿಗೆ ಆಯುಕ್ತರ ಸೂಚನೆ ಮೇರೆಗೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ನಿರ್ಧಾರದಿಂದಾಗಿ ಕ್ಯಾಬ್ ಚಾಲಕರು ಹಾಗೂ ಪ್ರಯಾಣಿಕರಿಬ್ಬರಿಗೂ ನ್ಯಾಯಯುತ ದರ ದೊರೆಯಲಿದೆ ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮ ಸಂತಸ ವ್ಯಕ್ತಪಡಿಸಿದ್ದಾರೆ.

ಹೊಸ ವಾಹನಗಳ ನೋಂದಣಿ ಮತ್ತು ಎಫ್‌ಸಿಗೆ ಮೀಟರ್ ಕಡ್ಡಾಯ

ಹೊಸ ನಿಯಮಾವಳಿಗಳ ಪ್ರಕಾರ, ನಗರದಲ್ಲಿ ಸಂಚರಿಸುವ ಸಾಮಾನ್ಯ ಕ್ಯಾಬ್‌ಗಳು ಸೇರಿದಂತೆ ಏರ್‌ಪೋರ್ಟ್ ಟ್ಯಾಕ್ಸಿಗಳಿಗೂ ಫೇರ್ ಮೀಟರ್ ಅಳವಡಿಕೆ ಅನಿವಾರ್ಯವಾಗಿದೆ. ಒಂದು ವೇಳೆ ಕ್ಯಾಬ್‌ಗಳಲ್ಲಿ ಫೇರ್ ಮೀಟರ್ ಅಳವಡಿಸದಿದ್ದರೆ, ಹೊಸ ಯೆಲ್ಲೋ ಬೋರ್ಡ್ ವಾಹನಗಳ ನೋಂದಣಿ (ರಿಜಿಸ್ಟ್ರೇಷನ್) ಪ್ರಕ್ರಿಯೆ ನಡೆಯುವುದಿಲ್ಲ. ಅಷ್ಟೇ ಅಲ್ಲದೆ, ಹಳೆಯ ಯೆಲ್ಲೋ ಬೋರ್ಡ್ ಕ್ಯಾಬ್‌ಗಳ ಅರ್ಹತಾ ಪ್ರಮಾಣಪತ್ರ (ಫಿಟ್‌ನೆಸ್ ಸರ್ಟಿಫಿಕೇಟ್) ನವೀಕರಣ ಮಾಡಬೇಕಿದ್ದರೂ ಫೇರ್ ಮೀಟರ್ ಕಡ್ಡಾಯವಾಗಿ ಇರಲೇಬೇಕಾಗಿದೆ.

ನಿಟ್ಟುಸಿರು ಬಿಟ್ಟ ಪ್ರಯಾಣಿಕರು

ಸರ್ಕಾರದ ಈ ಕಟ್ಟುನಿಟ್ಟಿನ ಆದೇಶದಿಂದಾಗಿ ಓಲಾ, ಉಬರ್, ರ‍್ಯಾಪಿಡೋ ಹಾಗೂ ನಮ್ಮ ಯಾತ್ರಿ ಸೇರಿದಂತೆ ವಿವಿಧ ಆ್ಯಪ್ ಆಧಾರಿತ ಅಗ್ರಿಗೇಟರ್ ಸಂಸ್ಥೆಗಳು ಪ್ರಯಾಣಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುವುದಕ್ಕೆ ಬ್ರೇಕ್ ಬೀಳಲಿದೆ. ಸಂಸ್ಥೆಗಳ ಕಳ್ಳಾಟದಿಂದ ಬೇಸತ್ತಿದ್ದ ನಗರದ ಸಾರ್ವಜನಿಕರು ಈ ಕ್ರಮದಿಂದ ಫುಲ್ ಖುಷ್ ಆಗಿದ್ದು, ‘ಕ್ಯಾಬ್‌ಗಳಿಗೆ ಮೀಟರ್ ಅಳವಡಿಸುವುದರಿಂದ ಪ್ರಯಾಣಿಕರಿಗೆ ನ್ಯಾಯಯುತ ಹಾಗೂ ನಿಖರವಾದ ದರ ನಿಗದಿಯಾಗಲಿದೆ’ ಎಂದು ಪ್ರಯಾಣಿಕ ಚಂದ್ರಶೇಖರ್ ಸ್ವಾಗತಿಸಿದ್ದಾರೆ.

ಇದನ್ನೂ ಓದಿ: ದೇಶಾದ್ಯಂತ ಇಂದು ಓಲಾ, ಉಬರ್, ರ‍್ಯಾಪಿಡೋ ಮುಷ್ಕರ

ಈ ಹಿಂದಿನ ಆದೇಶಗಳಂತೆ ಕೇವಲ ಕಾಗದಕ್ಕೆ ಸೀಮಿತವಾಗದೆ, ನೂತನ ನಿಯಮವಾದರೂ ಅಗ್ರಿಗೇಟರ್ ಕಂಪನಿಗಳ ದರ ಸುಲಿಗೆಗೆ ಸಂಪೂರ್ಣ ಕಡಿವಾಣ ಹಾಕುವುದೇ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us