AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗರೇ ಗಮನಿಸಿ: ಈ ರಸ್ತೆಗಳಲ್ಲಿ ಇಂದು ಸಂಚಾರ ಬದಲಾವಣೆ

ಇಂದು (ನ.7) ಮಧ್ಯಾಹ್ನ 3 ಗಂಟೆಗೆ ಬೊಮ್ಮನಹಳ್ಳಿ ಜಂಕ್ಷನ್‌ನಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆಯಲಿರುವ ಕಾರಣ ಕೆಲವು ರಸ್ತೆಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಹೀಗಾಗಿ ಬೆಂಗಳೂರು ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದು, ವಾಹನ ಸವಾರರು ಸಹಕರಿಸಲು ಮನವಿ ಮಾಡಿದ್ದಾರೆ. ಆ ಕುರಿತ ಮಾಹಿತಿ ಇಲ್ಲಿದೆ.

ಬೆಂಗಳೂರಿಗರೇ ಗಮನಿಸಿ: ಈ ರಸ್ತೆಗಳಲ್ಲಿ ಇಂದು ಸಂಚಾರ ಬದಲಾವಣೆ
ಸಂಚಾರ ಸಲಹೆ
ಪ್ರಸನ್ನ ಹೆಗಡೆ
|

Updated on:Nov 07, 2025 | 9:30 AM

Share

ಬೆಂಗಳೂರು, ನವೆಂಬರ್​ 07: ಬೊಮ್ಮನಹಳ್ಳಿ ಮುಸ್ಲಿಂ ಯೂತ್ ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸುತ್ತಿದ್ದು, ಇಂದು (ನ.07) ಮಧ್ಯಾಹ್ನ 3 ಗಂಟೆಯಿಂದ ಮೆರವಣಿಗೆಯು ಬೊಮ್ಮನಹಳ್ಳಿ ಜಂಕ್ಷನ್‌ನಲ್ಲಿ ಸಾಗಲಿರುವ ಕಾರಣ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಬೆಂಗಳೂರು ಸಂಚಾರ ಪೊಲೀಸರು ಸೂಚಿಸಿದ್ದಾರೆ.

ಈದ್ ಮಿಲಾದ್ ಮೆರವಣಿಗೆ ಹಿನ್ನಲೆ ಹೊಸೂರು ರಸ್ತೆ ಬೊಮ್ಮನಹಳ್ಳಿ ಜಂಕ್ಷನ್, ರೂಪೇನ ಅಗ್ರಹಾರ, ಗಾರೇಭಾವಿಪಾಳ್ಯ ಜಂಕ್ಷನ್ ಮೂಲಕ ಬೆಂಗಳೂರು ನಗರದಿಂದ ಹೊರ ಹೋಗುವ ಮತ್ತು ಬೆಂಗಳೂರು ನಗರಕ್ಕೆ ಪ್ರವೇಶಿಸುವ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಮಧ್ಯಾಹ್ನ 3 ಗಂಟೆಯ ನಂತರ ಹೊಸೂರು ರಸ್ತೆ ಬೊಮ್ಮನಹಳ್ಳಿ ಜಂಕ್ಷನ್ ಮೂಲಕ ಸಂಚರಿಸುವ ಸಾರ್ವಜನಿಕರು ಬದಲಿ ಮಾರ್ಗವನ್ನು ಬಳಸಲು ಸೂಚಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ನಿಭಾಯಿಸಲು ‘ಕೋಬ್ರಾ ಬೀಟ್’! ಏನಿದು ಹೊಸ ವ್ಯವಸ್ಥೆ?

ಪರ್ಯಾಯ ಮಾರ್ಗ

  • ವಿಲ್ಸನ್‌ಗಾರ್ಡನ್, ಆಡುಗೋಡಿ, ಕಡೆಯಿಂದ ಬರುವ ವಾಹನಗಳು ಡೈರಿ ಸರ್ಕಲ್ ಮೂಲಕ ಬನ್ನೇರುಘಟ್ಟ ರಸ್ತೆಗೆ ಸಾಗಿ ಅಲ್ಲಿಂದ ನೈಸ್ ರೋಡ್ ಮೂಲಕ ಹೊಸೂರು ರಸ್ತೆಗೆ ಸಂಚರಿಸಬಹುದು
  • ಬನಶಂಕರಿಯಿಂದ ಕಡೆಯಿಂದ ಡಬಲ್ ಡೆಕ್ಕರ್ ಮೂಲಕ ಬರುವ ವಾಹನಗಳು ಜಯದೇವ ಜಂಕ್ಷನ್‌ನಲ್ಲಿ ಬಲ ತಿರುವುದು ಕಡೆದು ಬನ್ನೇರುಘಟ್ಟ ರಸ್ತೆ ಮೂಲಕ ಸಾಗಿ ನೈಸ್ ರೋಡ್ ಮೂಲಕ ಹೊಸೂರು ರಸ್ತೆಗೆ ಸಂಚಾರ
  • ಹೊರವರ್ತುಲ ರಸ್ತೆ ಮಾರತಹಳ್ಳಿ ಕಡೆಯಿಂದ ಬರುವ ವಾಹನಗಳು 27ನೇ ಮುಖ್ಯರಸ್ತೆ ಎಡ ತಿರುವು ಪಡೆದು ವೇಮನ ಜಂಕ್ಷನ್ ಮೂಲಕ ಸೋಮಸುಂದರ್‌ಪಾಳ್ಯ ಮಾರ್ಗವಾಗಿ ಕೂಡ್ಲುಗೆ ತೆರಳಿ ಹೊಸೂರು ಮುಖ್ಯ ರಸ್ತೆ
  • ಹೊಸೂರು ಕಡೆಯಿಂದ ಬೆಂಗಳೂರು ನಗರಕ್ಕೆ ಬರುವ ವಾಹನಗಳು ಎಲೆಕ್ಟ್ರಾನಿಕ್‌ಸಿಟಿ ಎಲಿವೇಟೆಡ್ ಪ್ರೈಓವರ್ ಮೂಲಕ ಸಂಚರಿಸಬಹುದು

ಮೆರವಣಿಗೆ ಮಾರ್ಗ

ಸಾವಿರಾರು ಜನ ಮದೀನ ನಗರದ ಮೆಕ್ಕಾ ಮಸೀದಿಯ ಬಳಿ ಸೇರಿ, ಅಲ್ಲಿಂದ 17ರಿಂದ 20 ಸ್ತಬ್ದ ಚಿತ್ರ ಒಳಗೊಂಡ ವಾಹನಗಳೊಂದಿಗೆ ಮೆರವಣಿಗೆ ಸಾಗಲಿದ್ದಾರೆ. ಮಂಗಮ್ಮನಪಾಳ್ಯ ಮುಖ್ಯರಸ್ತೆಯಿಂದ ಹೊರಟು ಹೊಸೂರು ರಸ್ತೆ ಸರ್ವಿಸ್ ರಸ್ತೆ ಮಾರ್ಗವಾಗಿ ಬಂದು ಮಂಗಮ್ಮಪಾಳ್ಯ ಬಸ್ ನಿಲ್ದಾಣದ ಬಳಿಯ ಹೊಸೂರು ಮುಖ್ಯರಸ್ತೆಯನ್ನು ಮೆರವಣಿಗೆ ತಲುಪಲಿದೆ. ನಂತರ 21ನೇ ಪಿಲ್ಲರ್ ಬಳಿ ಯೂ ಟರ್ನ್ ಪಡೆದು ಬೊಮ್ಮನಹಳ್ಳಿ ಜಂಕ್ಷನ್‌ಗೆ ತಲುಪಿ ,ಅಲ್ಲಿಂದ ಬೇಗೂರು ರಸ್ತೆಯ ಜಾಮೀಯ ಮಸೀದಿ ಹಿಂಭಾಗದ ಉರ್ದು ಶಾಲೆ ತಲುಪಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:28 am, Fri, 7 November 25