Eid Milad Un Nabi 2023: ಈದ್ ಮಿಲಾದ್ ಹಬ್ಬದ ಮಹತ್ವ, ಆಚರಣೆಗಳ ಬಗ್ಗೆ ಇಲ್ಲಿದೆ ಮಾಹಿತಿ

ಮೌಲಿದ್ ಮತ್ತು ನಬಿದ್ ಎಂದೂ ಕರೆಯಲ್ಪಡುವ ಈದ್ ಮಿಲಾದ್- ಉನ್- ನಬಿ ಮುಸ್ಲಿಮರಿಗೆ ಮಹತ್ವದ ಹಬ್ಬವಾಗಿದ್ದು, ಈ ದಿನ ಪ್ರವಾದಿ ಮೊಹಮ್ಮದ್ ಅವರ ಜನ್ಮ ವಾರ್ಷಿಕೋತ್ಸವವನ್ನು ನೆನಪಿಸುತ್ತದೆ. ರಬಿ ಉಲ್ ಅವ್ವಾಲ್ ನ 12ನೇ ದಿನದಂದು ಆಚರಿಸಲಾಗುವ ಇದನ್ನು ವಿಶ್ವಾದ್ಯಂತ ಬಹಳ ಉತ್ಸಾಹ ಮತ್ತು ಸಂತೋಷದಿಂದ ಆಚರಿಸಲಾಗುತ್ತದೆ. ಹಬ್ಬ ಯಾವಾಗ? ಮಹತ್ವ ಮತ್ತು ಆಚರಣೆಗಳ ಬಗ್ಗೆ ಇಲ್ಲಿದೆ ಮಾಹಿತಿ.

Eid Milad Un Nabi 2023: ಈದ್ ಮಿಲಾದ್ ಹಬ್ಬದ ಮಹತ್ವ, ಆಚರಣೆಗಳ ಬಗ್ಗೆ ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 28, 2023 | 1:06 PM

ಪವಿತ್ರ ಇಸ್ಲಾಮಿಕ್ ಹಬ್ಬವಾದ ಈದ್ ಮಿಲಾದ್ ನ್ನು ಪ್ರಪಂಚದಾದ್ಯಂತದ ಮುಸ್ಲಿಮರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಚರಿಸಲು ಸಿದ್ಧರಾಗುತ್ತಿದ್ದಾರೆ. ಪ್ರವಾದಿ ಮೊಹಮ್ಮದರ ಜನ್ಮದಿನವನ್ನು ಈದ್ ಮಿಲಾದ್ ಹಬ್ಬವಾಗಿ ಮುಸ್ಲಿಮರು ಆಚರಿಸುತ್ತಾರೆ. ಸೆಪ್ಟೆಂಬರ್ 16 ರಿಂದ ಶುರುವಾದ ಆಚರಣೆ ಸೆಪ್ಟೆಂಬರ್ 27 ಮತ್ತು 28ರಂದು ಅಂತ್ಯಗೊಳ್ಳುತ್ತದೆ. ಈ ದಿನವನ್ನು ಮಾವ್ಲಿದ್ ಮತ್ತು ನಬಿದ್ ಎಂದೂ ಕರೆಯಲಾಗುತ್ತದೆ. ಈ ದಿನವು ಪ್ರತಿ ವರ್ಷ ರಬಿ ಉಲ್ ಅವಾಲ್ ಸಮಯದಲ್ಲಿ ಬರುತ್ತದೆ. ಈ ವರ್ಷ, ಈದ್ ಮಿಲಾದ್ ಹಬ್ಬವನ್ನು ಸೆಪ್ಟೆಂಬರ್ 28, 2023 ರಂದು ಆಚರಿಸಲಾಗುತ್ತದೆ. ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಂತಹ ಇತರ ದೇಶಗಳು ಸೆಪ್ಟೆಂಬರ್ 28 ರಂದು ಈದ್ ಮಿಲಾದ್- ಉನ್- ನಬಿಯನ್ನು ಆಚರಿಸಲಿವೆ. ಸೌದಿ ಅರೇಬಿಯಾದಲ್ಲಿ ಮಾತ್ರ ಈದ್ ಎ ಮಿಲಾದ್ ಅನ್ನು ಸೆಪ್ಟೆಂಬರ್ 27 ರಂದು ಆಚರಿಸಲಾಗುತ್ತದೆ.

ಈದ್- ಎ- ಮಿಲಾದ್ ಮಹತ್ವ:

ಈದ್- ಎ- ಮಿಲಾದ್ ಮುಸ್ಲಿಂ ಸಮುದಾಯದ ಜನರಲ್ಲಿ ಹೆಚ್ಚಿನ ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ದಿನವನ್ನು ಪ್ರಪಂಚದಾದ್ಯಂತದ ಎಲ್ಲಾ ಮುಸ್ಲಿಮರು ಬಹಳ ಉತ್ಸಾಹ ಮತ್ತು ಸಂತೋಷದಿಂದ ಆಚರಿಸುತ್ತಾರೆ. ಈದ್ ಮಿಲಾದ್ ಉನ್ ನಬಿಯನ್ನು ಇಸ್ಲಾಮಿಕ್ ಕ್ಯಾಲೆಂಡರ್ ನ ಮೂರನೇ ತಿಂಗಳಾದ ರಬಿ ಉಲ್ ಅವ್ವಾಲ್ ನ 12 ನೇ ದಿನದಂದು ಆಚರಿಸಲಾಗುತ್ತದೆ. ಈ ದಿನವು ಪ್ರವಾದಿ ಮೊಹಮ್ಮದ್ ಅವರ ಜನ್ಮದಿನವನ್ನು ಸೂಚಿಸುತ್ತದೆ. ಈ ದಿನವು ಪವಿತ್ರ ಪ್ರವಾದಿಯ ದಯೆ, ಸಹಾನುಭೂತಿ ಮತ್ತು ಬೋಧನೆಗಳನ್ನು ನೆನಪಿಸುವುದರಿಂದ ಈ ದಿನವನ್ನು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗಿದೆ. ಈ ಹಬ್ಬವನ್ನು ಶಿಯಾ ಮತ್ತು ಸುನ್ನಿ ಮುಸ್ಲಿಮರು ವಿಭಿನ್ನ ದಿನಾಂಕಗಳಲ್ಲಿ ಆಚರಿಸುತ್ತಾರೆ. ಸುನ್ನಿ ಮುಸ್ಲಿಮರು ಇಸ್ಲಾಮಿಕ್ ಧರ್ಮದ 12 ನೇ ದಿನದಂದು ಈ ದಿನವನ್ನು ಆಚರಿಸಿದರೆ, ಶಿಯಾ ಮುಸ್ಲಿಮರು ರಬಿ ಉಲ್ ಅವ್ವಾಲ್ ನ 17 ನೇ ದಿನದಂದು ಈ ದಿನವನ್ನು ಆಚರಿಸುತ್ತಾರೆ.

ಈದ್ ಮಿಲಾದ್ ಉನ್ ನಬಿಯನ್ನು ಹೇಗೆ ಆಚರಿಸುತ್ತಾರೆ?

ಜನರು ಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ತಯಾರಿಯನ್ನು ಪ್ರಾರಂಭಿಸುತ್ತಾರೆ. ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸುಂದರ ವರ್ಣರಂಜಿತ ದೀಪಗಳು ಮತ್ತು ಧ್ವಜಗಳಿಂದ ಅಲಂಕರಿಸುತ್ತಾರೆ. ಅಲ್ಲದೆ ಈ ದಿನವನ್ನು ಬಹಳ ಆಡಂಭರದಿಂದ ಆಚರಿಸುತ್ತಾರೆ, ಹಸಿರು ಬಣ್ಣವು ಇಸ್ಲಾಂ ಅನ್ನು ಸೂಚಿಸುವುದರಿಂದ ಅವರು ತಮ್ಮ ಕೈಯಲ್ಲಿ ಹಸಿರು ಬ್ಯಾಂಡ್ಗಳನ್ನು ಕಟ್ಟುತ್ತಾರೆ. ಹೊಸ ಬಟ್ಟೆಗಳನ್ನು ಧರಿಸುವುದು, ಸಿಹಿ ತಿಂಡಿಗಳನ್ನು ವಿತರಿಸುವುದು ಮತ್ತು ಮಸೀದಿಗೆ ಭೇಟಿ ನೀಡುವುದು ಈ ದಿನದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಮುಸ್ಲಿಂ ಜನರು ಈ ದಿನ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ ಮತ್ತು ಅಲ್ಲಾಹನ ಆಶೀರ್ವಾದವನ್ನು ಪಡೆಯುತ್ತಾರೆ. ಮಹಿಳೆಯರು ಶೀರ್ ಖುರ್ಮಾ ಮತ್ತು ಸೇವಾಯನ್ ನಂತಹ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸುತ್ತಾರೆ. ಜೊತೆಗೆ ತಮ್ಮ ಸಂಬಂಧಿಕರನ್ನು ಮನೆಗೆ ಆಹ್ವಾನಿಸಿ ಅವರೊಂದಿಗೆ ಈ ದಿನವನ್ನು ಆಚರಿಸುತ್ತಾರೆ. ಕೆಲವರು ಅಲ್ಲಾಹನನ್ನು ಪೂಜಿಸಲು ಮತ್ತು ಆಶೀರ್ವಾದ ಪಡೆಯಲು ಹಾಜಿ ಅಲಿ ದರ್ಗಾ, ಜಮಾ ಮಜ್ಜಿದ್, ನಿಜಾಮುದ್ದೀನ್ ಔಲಿಯಾ, ಅಜ್ಮೀರ್ ಶರೀಫ್ ನಂತಹ ಪ್ರಮುಖ ಮತ್ತು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ.

ಇದನ್ನೂ ಓದಿ:ಈದ್ ಮಿಲಾದ್ ಉನ್ ನಬಿ ದಿನದ ಮಹತ್ವ ಮತ್ತು ಆಚರಣೆ ಹೇಗೆ?

ಈ ಪವಿತ್ರ ದಿನದಂದು ದಾನ ಮಾಡುವುದು ಹೆಚ್ಚು ಲಾಭದಾಯಕವೆಂದು ಪರಿಗಣಿಸಲಾಗಿದೆ. ಪ್ರವಾದಿ ಮುಹಮ್ಮದ್ ದಯೆ ಮತ್ತು ಮಾನವೀಯತೆಯಲ್ಲಿ ನಂಬಿಕೆ ಇಟ್ಟಿದ್ದರು ಹಾಗಾಗಿ ಅಲ್ಲಾಹನಿಗೆ ನಿಜವಾಗಿಯೂ ಸಮರ್ಪಿತರಾಗಿರುವ ಜನರು, ದೇಣಿಗೆಗಳನ್ನು ನೀಡುತ್ತಾರೆ ಮತ್ತು ಅಗತ್ಯವಿರುವ ಬಡ ಜನರಿಗೆ ದಾನ ಮಾಡುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ