Soaked Cashew Benefits: ಹಾಲಿನಲ್ಲಿ ನೆನೆಸಿದ ಗೋಡಂಬಿ ತಿನ್ನಬೇಕು, ತೂಕ ಹೆಚ್ಚಿಸಲು ಇದು ಉತ್ತಮ

ಗೋಡಂಬಿಯಲ್ಲಿ ಫೈಬರ್, ಮೆಗ್ನೇಸಿಯಂ, ಮ್ಯಾಂಗನೀಸ್, ಪ್ರೋಟೀನ್, ಕಬ್ಬಿಣ, ವಿಟಮಿನ್ ಕೆ, ವಿಟಮಿನ್ ಬಿ 6 ಮುಂತಾದ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದ್ದು, ಇದನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಅದರಲ್ಲೂ ಹಾಲಿನಲ್ಲಿ ನೆನೆಸಿದ ಗೋಡಂಬಿಯನ್ನು  ತಿನ್ನುವುದರಿಂದ ಬಹಳಷ್ಟು  ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

Soaked Cashew Benefits: ಹಾಲಿನಲ್ಲಿ ನೆನೆಸಿದ ಗೋಡಂಬಿ ತಿನ್ನಬೇಕು, ತೂಕ ಹೆಚ್ಚಿಸಲು ಇದು ಉತ್ತಮ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 27, 2023 | 6:32 PM

ಗೋಡಂಬಿಯ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.  ಏಕೆಂದರೆ ಗೋಡಂಬಿಯು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಫೈಬರ್, ಮೆಗ್ನೇಸಿಯಂ, ಮ್ಯಾಂಗನೀಸ್, ಪ್ರೋಟೀನ್, ಕಬ್ಬಿಣ, ರಂಜಕ, ಸತು, ತಾಮ್ರ, ವಿಟಮಿನ್ ಕೆ, ವಿಟಮಿನ್ ಬಿ 6 ಮುಂತಾದ ಪೋಷಕಾಂಶಗಳು ಗೋಡಂಬಿಯಲ್ಲಿ ಕಂಡುಬರುತ್ತದೆ.  ನೀವು ಗೋಡಂಬಿಯನ್ನು ಹಲವು ರೀತಿಯಲ್ಲಿ ಸೇವಿಸಿರಬಹುದು. ಆದರೆ ನೀವು ಎಂದಾದರೂ ಹಾಲಿನಲ್ಲಿ ನೆನೆಸಿದ ಗೋಡಂಬಿಯನ್ನು ಸೇವಿಸಿದ್ದೀರಾ? ಹಾಲಿನಲ್ಲಿ ನೆನೆಸಿದ ಗೋಡಂಬಿಯನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೌದು ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು ಮೂಳೆಗಳನ್ನು ಬಲಗೊಳಿಸುವವರೆಗೆ  ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗಾದರೆ ಹಾಲಿನ ಜತೆಗೆ ನೆನೆಸಿದ ಗೋಡಂಬಿ ತಿನ್ನುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ತಿಳಿಯೋಣ.

ಹಾಲಿನಲ್ಲಿ ನೆನೆಸಿದ ಗೋಡಂಬಿಯನ್ನು ತಿನ್ನುವುದರಿಂದ ದೊರೆಯುವ ಪ್ರಯೋಜನಗಳು:

ಚರ್ಮದ ಆರೋಗ್ಯಕ್ಕೆ ಒಳ್ಳೆಯದು:

ಹಾಲಿನಲ್ಲಿ ನೆನೆಸಿದ ಗೋಡಂಬಿಯನ್ನು ಸೇವಿಸುವುದು ಚರ್ಮದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಏಕೆಂದರೆ ಹಾಲಿನಲ್ಲಿ ನೆನೆಸಿದ ಗೋಡಂಬಿಯಲ್ಲಿ ವಿಟಮಿನ್ ಹೇರಳವಾಗಿದ್ದು, ಇದು ತ್ವಚೆಯನ್ನು ಆರೋಗ್ಯಕರವಾಗಿಡಲು ಮತ್ತು ಚರ್ಮ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.  ಅಲ್ಲದೆ ಹಾಲಿನಲ್ಲಿ ನೆನೆಸಿದ ಗೋಡಂಬಿ ತಿನ್ನುವುದರಿಂದ ಮೊಡವೆಗಳು, ಮುಖದಲ್ಲಿ ಕಾಣಿಸಿಕೊಳ್ಳುವ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ಸಹ ಹೋಗಲಾಡಿಬಹುದು.

ಮಲಬದ್ಧತೆಯಿಂದ ಮುಕ್ತಿ ನೀಡುತ್ತದೆ:

ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ ಬಹಳ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ನಿಮಗೂ ಮಲಬದ್ಧತೆ ಸಮಸ್ಯೆ ಇದ್ದರೆ ಹಾಲಿನಲ್ಲಿ ನೆನೆಸಿದ ಗೋಡಂಬಿಯನ್ನು ಸೇವಿಸಲು ಪ್ರಾರಂಭಿಸಿ. ಗೋಡಂಬಿಯಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಅಂಶ ಕಂಡುಬರುತ್ತದೆ, ಇದು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

ತೂಕ ಹೆಚ್ಚಿಸಲು ಸಹಕಾರಿ:

ನೀವು ತುಂಬಾ ತೆಳ್ಳಗಿದ್ದರೆ ಮತ್ತು ತೂಕವನ್ನು ಹೆಚ್ಚಿಸಲು ಬಯಸಿದರೆ ಹಾಲಿನಲ್ಲಿ ನೆನೆಸಿದ ಗೋಡಂಬಿಯನ್ನು ತಿನ್ನುವ ಮೂಲಕ ತ್ವರಿತವಾಗಿ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಗೋಡಂಬಿಯು ಆರೋಗ್ಯಕರ ಕೊಬ್ಬು ಮತ್ತು ಆರೋಗ್ಯಕರ ಕ್ಯಾಲೋರಿಗಳನ್ನು ಹೊಂದಿದ್ದು, ಇದು ತೂಕವನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ:

ಹಾಲಿನಲ್ಲಿ ನೆನೆಸಿದ ಗೋಡಂಬಿಯನ್ನು ಪ್ರತಿದಿನ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಲು ಮತ್ತು ಗೋಡಂಬಿ ಎರಡರಲ್ಲೂ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿದೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗೂ ಇದರ ನಿಯಮಿತ ಸೇವನೆಯಿಂದ  ನೀವು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಯೂ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಸೇಬು ಹಣ್ಣಿನ ಸಿಪ್ಪೆಯಿಂದ ತ್ವಚೆಯ ಕಾಂತಿ ಹೆಚ್ಚಿಸಿ

ಮೂಳೆಗಳನ್ನು ಬಲವಾಗಿಡಲು ಸಹಕಾರಿ:

ನೀವು ರಾತ್ರಿಯಿಡಿ ಹಾಲಿನಲ್ಲಿ ನೆನೆಸಿದ ಗೋಡಂಬಿಯನ್ನು ಸೇವಿಸುವ ಮೂಲಕ ಮೂಳೆಗಳನ್ನು ಬಲಪಡಿಸಬಹುದು. ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಇರುತ್ತದೆ. ಹಾಗೂ ಗೋಡಂಬಿಯಲ್ಲಿ ವಿಟಮಿನ್ ಕೆ, ವಿಟಮಿನ್ ಬಿ6, ಮೆಗ್ನೇಸಿಯಂ ಮತ್ತು ಮ್ಯಾಂಗನೀಸ್ ನಂತಹ ಪೋಷಕಾಂಶಗಳು ಕಂಡುಬರುತ್ತವೆ. ಈ ಎಲ್ಲಾ ಜೀವಸತ್ವಗಳು ಮತ್ತು ಖನಿಜಗಳು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದಲ್ಲದೆ ಇದು ಕೀಲು ನೋವಿನಿಂದಲೂ ಪರಿಹಾರವನ್ನು ನೀಡುತ್ತದೆ.

ಹಾಲಿನಲ್ಲಿ ನೆನೆಸಿದ ಗೋಡಂಬಿಯನ್ನು ಹೇಗೆ ತಿನ್ನಬೇಕು:

ಹಾಲಿನಲ್ಲಿ ನೆನೆಸಿದ ಗೋಡಂಬಿಯನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಅದಕ್ಕಾಗಿ ನೀವು 3 ರಿಂದ 5 ಗೋಡಂಬಿಯನ್ನು ಒಂದು ಲೋಟ ಹಾಲಿನಲ್ಲಿ ರಾತ್ರಿಯಿಡಿ ನೆನೆಸಿಡಿ. ಮತ್ತು ಬೆಳಗ್ಗೆ ಆ ಹಾಲನ್ನು ಚೆನ್ನಾಗಿ ಕುದಿಸಿ  ನಂತರ ಅದರಲ್ಲಿನ ಗೋಡಂಬಿ ತಿನ್ನಿರಿ ಹಾಗೂ ಹಾಲನ್ನು ಕೂಡಾ ಕುಡಿಯಿರಿ. ಹೀಗೆ ಪ್ರತಿದಿನ ಇದನ್ನು ಸೇವಿಸುವ ಮೂಲಕ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:29 pm, Wed, 27 September 23

ರಜೆ ಮುಗಿಸಿ ಬೆಂಗಳೂರಿನತ್ತ ಜನ: ನೆಲಮಂಗಲ ಬಳಿ ಫುಲ್ ಟ್ರಾಫಿಕ್ ಜಾಮ್
ರಜೆ ಮುಗಿಸಿ ಬೆಂಗಳೂರಿನತ್ತ ಜನ: ನೆಲಮಂಗಲ ಬಳಿ ಫುಲ್ ಟ್ರಾಫಿಕ್ ಜಾಮ್
ವಿಚಾರಣೆ ನಂತರ ಮಾತಾಡದೆ ಕಾರಲ್ಲಿ ಹೊರಟುಹೋದ ಮಲ್ಲಿಕಾರ್ಜುನ ಸ್ವಾಮಿ
ವಿಚಾರಣೆ ನಂತರ ಮಾತಾಡದೆ ಕಾರಲ್ಲಿ ಹೊರಟುಹೋದ ಮಲ್ಲಿಕಾರ್ಜುನ ಸ್ವಾಮಿ
ಜಯನಗರ ಶಾಸಕರು ಬೆಂಗಳೂರಿನ ಆಧೋಗತಿಯನ್ನು ತೋರಿಸಬೇಕು: ಡಿಕೆಶಿ ಸವಾಲ್
ಜಯನಗರ ಶಾಸಕರು ಬೆಂಗಳೂರಿನ ಆಧೋಗತಿಯನ್ನು ತೋರಿಸಬೇಕು: ಡಿಕೆಶಿ ಸವಾಲ್
ಬಿಗ್ ಬಾಸ್ ಮನೆಗೆ ಕಾಲಿಡುತ್ತಲೇ ವಿಶೇಷ ಅಧಿಕಾರ ಪಡೆದ ರಜತ್, ಶೋಭಾ ಶೆಟ್ಟಿ
ಬಿಗ್ ಬಾಸ್ ಮನೆಗೆ ಕಾಲಿಡುತ್ತಲೇ ವಿಶೇಷ ಅಧಿಕಾರ ಪಡೆದ ರಜತ್, ಶೋಭಾ ಶೆಟ್ಟಿ
ಗೋದಾವರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಿಸಿದ ಪತ್ರಕರ್ತರು
ಗೋದಾವರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಿಸಿದ ಪತ್ರಕರ್ತರು
ನನ್ನಂತೆ ಬಸವರಾಜ ಬೊಮ್ಮಾಯಿ ಸಹ ಮಧುಮೇಹದಿಂದ ಬಳಲುತ್ತಿದ್ದಾರೆ: ಸಿದ್ದರಾಮಯ್ಯ
ನನ್ನಂತೆ ಬಸವರಾಜ ಬೊಮ್ಮಾಯಿ ಸಹ ಮಧುಮೇಹದಿಂದ ಬಳಲುತ್ತಿದ್ದಾರೆ: ಸಿದ್ದರಾಮಯ್ಯ
ಉಗ್ರಂ ಮಂಜು-ಮೋಕ್ಷಿತಾ ನಡುವೆ ದುಷ್ಮನಿ; ತೊಡೆ ತಟ್ಟಿದ ತ್ರಿವಿಕ್ರಮ್
ಉಗ್ರಂ ಮಂಜು-ಮೋಕ್ಷಿತಾ ನಡುವೆ ದುಷ್ಮನಿ; ತೊಡೆ ತಟ್ಟಿದ ತ್ರಿವಿಕ್ರಮ್
ಕೋವಿಡ್ ಹಗರಣ: ಕೆಲ ಅಂತೆ-ಕಂತೆಗಳಿಗೆ ತೆರೆ ಎಳೆದ ಡಾ ಸಿಎನ್​ ಮಂಜುನಾಥ್
ಕೋವಿಡ್ ಹಗರಣ: ಕೆಲ ಅಂತೆ-ಕಂತೆಗಳಿಗೆ ತೆರೆ ಎಳೆದ ಡಾ ಸಿಎನ್​ ಮಂಜುನಾಥ್
ನಮ್ಮ ಸರ್ಕಾರದ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ: ಚಲುವರಾಯಸ್ವಾಮಿ
ನಮ್ಮ ಸರ್ಕಾರದ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ: ಚಲುವರಾಯಸ್ವಾಮಿ
ಬಾಗಲಕೋಟೆ: ಸ್ನೇಹಿತನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ವಿದೇಶಿಗರು
ಬಾಗಲಕೋಟೆ: ಸ್ನೇಹಿತನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ವಿದೇಶಿಗರು