ಬೆಂಗಳೂರು, ಜನವರಿ 13: ಮದ್ಯಪಾನ ಮಾಡಿ ವಾಹನ ಚಾಲನೆ ಮತ್ತು ಅತಿವೇಗ ವಾಹನ ಚಲಾಯಿಸುವವರ ವಿರುದ್ಧ ಬೆಂಗಳೂರು ನಗರ ಸಂಚಾರ ಪೊಲೀಸರು (Bengaluru Traffic Police) ಸಮರ ಸಾರಿದಂತಿದೆ. ಜ. 6ರಿಂದ 12 ರವರೆಗೆ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ನಗರದ 50 ಸಂಚಾರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಜೊತೆಗೆ 30,4000 ರೂ ದಂಡ ಸಂಗ್ರಹಿಸಲಾಗಿದೆ.
ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗವು ಜ. 6 ರಿಂದ 12 ರವರೆಗೆ ಮದ್ಯಪಾನಮಾಡಿ ವಾಹನ ಚಲಾಯಿಸುತ್ತಿದ್ದ ವಾಹನ ಚಾಲಕರು ಮತ್ತು ಸವಾರರ ವಿರುದ್ಧ ಮತ್ತು ಅತಿವೇಗ ವಾಹನ ಚಲಾಯಿಸುವವರ ವಿರುದ್ಧ ನಗರದ 50 ಸಂಚಾರ ಪೊಲೀಸ್ ಠಾಣೆಗಳಲ್ಲಿ ವಿಶೇಷ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ವಿಶೇಷ ಕಾರ್ಯಾಚರಣೆಯಲ್ಲಿ ದಾಖಲು ಮಾಡಿರುವ ಪ್ರಕರಣಗಳ ವಿವರ ಈ ಕೆಳಗಿನಂತಿದೆ.
ಬೆಂಗಳೂರು ನಗರದಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವ ಮತ್ತು ಅತಿವೇಗ ವಾಹನ ಚಲಾಯಿಸುವವರ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ರಸ್ತೆ ಸುರಕ್ಷತೆಗಾಗಿ ಇಂತಹ ಕಾರ್ಯಾಚರಣೆಗಳನ್ನು ಮುಂದಿನ ದಿನಗಳಲ್ಲಿಯೂ ಸಹ ಹಮ್ಮಿಕೊಳ್ಳುವುದಾಗಿ ಬೆಂಗಳೂರು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.
Special drive Weekly Over Speed and Drunk & Drive Press note pic.twitter.com/pjoxTBmDHE
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) January 13, 2025
ಇನ್ನು ಇತ್ತೀಚೆಗೆ ಸಂಚಾರ ಪೂರ್ವ ವಿಭಾಗದಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವ ಚಾಲಕರು ಮತ್ತು ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು 16,853 ಜನರನ್ನು ತಪಾಸಣೆಗೊಳಪಡಿಸಿದ್ದು, 178 ಮಂದಿ ಮದ್ಯಪಾನ ಮಾಡಿರುವುದು ಧೃಡಪಟ್ಟಿತ್ತು. ವಾಹನ ಸವಾರರ ಡಿಎಸ್ಗಳನ್ನು ಆರ್ಟಿಓ ಕಛೇರಿಗೆ ಅಮಾನತು ಮಾಡಲು ತಿಳಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.