ಬೆಂಗಳೂರಿನಲ್ಲಿ ಇಂದಿನಿಂದ ಡ್ರಂಕ್ ಅಂಡ್ ಡ್ರೈವ್ ತಪಾಸಣೆ; ಒಂದೂವರೆ ವರ್ಷದ ನಂತರ ಆಲ್ಕೋಮೀಟರ್ ಬಳಕೆ
Bengaluru: 1 ಆಲ್ಕೋಮೀಟರ್ನಲ್ಲಿ ಒಬ್ಬರಿಗೆ ಡ್ರಂಕ್ ಅಂಡ್ ಡ್ರೈವ್ ಟೆಸ್ಟ್ ಮಾಡಲಾಗುತ್ತದೆ. ಒಮ್ಮೆ ಬಳಸಿದ ನಂತರ ಸ್ಯಾನಿಟೈಸ್ ಮಾಡಿ ಅದನ್ನು ಮರುಬಳಕೆ ಮಾಡಲಾಗುತ್ತದೆ. 48 ಗಂಟೆಗಳ ನಂತರ ಆಲ್ಕೋಮೀಟರ್ ಮರು ಬರುಬಳಕೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಬೆಂಗಳೂರು: ನಗರದಲ್ಲಿ ಇಂದಿನಿಂದ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡಲಾಗುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸಂಚಾರಿ ಪೊಲೀಸರಿಂದ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಶನಿವಾರದಿಂದ (ಸೆಪ್ಟೆಂಬರ್ 25) ಆರಂಭವಾಗಲಿದೆ. ಒಂದೂವರೆ ವರ್ಷದ ನಂತರ ಆಲ್ಕೋಮೀಟರ್ ಬಳಕೆ ಮಾಡಲಾಗುತ್ತಿದೆ. ಹೊಸ ಆಲ್ಕೋಮೀಟರ್ ಮೂಲಕ ಡ್ರಂಕ್ ಅಂಡ್ ಡ್ರೈವ್ ಟೆಸ್ಟ್ ಮಾಡಲಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.
ಕೊರೊನಾ ಕಾರಣದಿಂದ ಒಂದೂವರೆ ವರ್ಷದಿಂದ ಈ ತಪಾಸಣೆ ಸ್ಥಗಿತ ಮಾಡಲಾಗಿತ್ತು. ಬೆಂಗಳೂರಿನಲ್ಲಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಿಲ್ಲಿಸಲಾಗಿತ್ತು. ಆದರೆ, ಇದೀಗ ಮತ್ತೆ ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಸಜ್ಜಾಗಿದ್ದಾರೆ. ಇಂದು ರಾತ್ರಿಯಿಂದಲೇ ರಸ್ತೆಗಿಳಿದು ಡ್ರಂಕ್ ಅಂಡ್ ಡ್ರೈವ್ ಟೆಸ್ಟ್ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಪ್ರತಿ ಠಾಣೆಗೆ ಇಲಾಖೆಯು ತಲಾ 10 ಆಲ್ಕೋಮೀಟರ್ ನೀಡಿದೆ. 1 ಆಲ್ಕೋಮೀಟರ್ನಲ್ಲಿ ಒಬ್ಬರಿಗೆ ಡ್ರಂಕ್ ಅಂಡ್ ಡ್ರೈವ್ ಟೆಸ್ಟ್ ಮಾಡಲಾಗುತ್ತದೆ. ಒಮ್ಮೆ ಬಳಸಿದ ನಂತರ ಸ್ಯಾನಿಟೈಸ್ ಮಾಡಿ ಅದನ್ನು ಮರುಬಳಕೆ ಮಾಡಲಾಗುತ್ತದೆ. 48 ಗಂಟೆಗಳ ನಂತರ ಆಲ್ಕೋಮೀಟರ್ ಮರು ಬರುಬಳಕೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಡಾ. ಬಿ.ಆರ್ ರವಿಕಾಂತೇಗೌಡ ಹೇಳಿಕೆ ಈ ಬಗ್ಗೆ ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ಹೇಳಿಕೆ ನೀಡಿದ್ದಾರೆ. ಮಾರ್ಚ್ 2020ರ ಕೊನೆಯ ವಾರ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಿಲ್ಲಿಸಲಾಗಿತ್ತು. ತಜ್ಞರ ಸಲಹೆಯಂತೆ ತಾತ್ಕಾಲಿಕವಾಗಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಿಲ್ಲಿಸಲಾಗಿತ್ತು. ಇದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಘಟನೆಗಳು ನಡೆಯುತ್ತಿವೆ. ಇತ್ತೀಚಿಗೆ ಕೆಲ ಅಪಘಾತಗಳಾಗಿರುವುದನ್ನ ನಾವು ಗಮನಿಸಿದ್ದೇವೆ. ದೇಶದ ಕೆಲ ಮಹಾನಗರಗಳಲ್ಲಿ ಕೊವಿಡ್ 2ನೇ ಅಲೆ ಬಳಿಕ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಶುರುವಾಗಿದೆ. ನಾವೂ ಸಹ ತಜ್ಞರ ಸಲಹೆ ಪಡೆದು ತಪಾಸಣೆ ಆರಂಭಿಸಿದ್ದೇವೆ. ಕಳೆದ 2 ವಾರ ಕೂಡಾ ಆಲ್ಕೋ ಮೀಟರ್ ರಹಿತವಾಗಿ ತಪಾಸಣೆ ಮಾಡಲಾಗಿದೆ. ಅನುಮಾನಿತರನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದಿನಿಂದ ಆಲ್ಕೋಮೀಟರ್ ಬಳಸಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಟ್ರಾಫಿಕ್‌ನಲ್ಲಿ ಸಿಲುಕಿ ಆಂಬುಲೆನ್ಸ್ ಪರದಾಟ; ಆಂಬುಲೆನ್ಸ್ಗೂ ದಾರಿ ಮಾಡಿಕೊಡದ್ದಕ್ಕೆ ಪೋಷಕರ ಆಕ್ರೋಶ
Published On - 5:26 pm, Sat, 25 September 21