Uber Price Hike: ಬೆಂಗಳೂರಿನಲ್ಲಿನ್ನು ಕ್ಯಾಬ್ ಪ್ರಯಾಣ ದುಬಾರಿ; ಉಬರ್​ನಿಂದ ಶೇ. 10ರಷ್ಟು ಬೆಲೆ ಏರಿಕೆ

| Updated By: ಸುಷ್ಮಾ ಚಕ್ರೆ

Updated on: Apr 21, 2022 | 2:15 PM

ಉಬರ್ ಬೆನ್ನಲ್ಲೇ ಓಲಾ ಕೂಡ ತನ್ನ ಪ್ರಯಾಣದ ದರಗಳನ್ನು ಪರಿಷ್ಕರಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಓಲಾದಿಂದ ಅಧಿಕೃತ ಹೇಳಿಕೆ ಪ್ರಕಟವಾಗಿಲ್ಲ.

Uber Price Hike: ಬೆಂಗಳೂರಿನಲ್ಲಿನ್ನು ಕ್ಯಾಬ್ ಪ್ರಯಾಣ ದುಬಾರಿ; ಉಬರ್​ನಿಂದ ಶೇ. 10ರಷ್ಟು ಬೆಲೆ ಏರಿಕೆ
ಉಬರ್
Follow us on

ಬೆಂಗಳೂರು: ಈ ಟ್ರಾಫಿಕ್​ನಲ್ಲಿ ಗಾಡಿ ಓಡಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ (Bangalore Traffic) ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ಸ್ವಂತ ವಾಹನಗಳಿಗಿಂತಲೂ ಆಟೋ, ಕ್ಯಾಬ್​ಗಳ ಮೇಲೆ ಅವಲಂಬಿತರಾದವರೇ ಹೆಚ್ಚು. ಆದರೆ, ಇನ್ನುಮುಂದೆ ಬೆಂಗಳೂರಿನಲ್ಲಿ ಕ್ಯಾಬ್ ಪ್ರಯಾಣ ದುಬಾರಿಯಾಗಲಿದೆ. ಏರುತ್ತಿರುವ ಪೆಟ್ರೋಲ್ (Petrol Price), ಡೀಸೆಲ್ ಬೆಲೆಯನ್ನು (Diesel Price) ನಿಭಾಯಿಸಲು ತನ್ನ ಚಾಲಕ-ಪಾಲುದಾರರಿಗೆ ಸಹಾಯ ಮಾಡಲು ಉಬರ್ (Uber Price) ಟ್ರಿಪ್ ದರವನ್ನು ಹೆಚ್ಚಿಸಿದೆ.

ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಕೇಂದ್ರ ಕಾರ್ಯಾಚರಣೆಯ ಮುಖ್ಯಸ್ಥ ನಿತೀಶ್ ಭೂಷಣ್ ಈ ಬಗ್ಗೆ ಹೇಳಿಕೆ ನೀಡಿದ್ದು, ನಮ್ಮ ಕ್ಯಾಬ್​ಗಳ ಚಾಲಕರು ಇಂಧನದ ಬೆಲೆಗಳ ಏರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ನಾವು ಅವರ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟು, ಉಬರ್ ರೈಡ್​ನ ಬೆಲೆ ಏರಿಕೆ ಮಾಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ನಾವು ಬೆಂಗಳೂರಿನಲ್ಲಿ ಉಬರ್ ದರವನ್ನು 10% ಹೆಚ್ಚಿಸಿದ್ದೇವೆ. ಮುಂಬರುವ ವಾರಗಳಲ್ಲಿ ನಾವು ಇಂಧನ ಬೆಲೆ ಚಲನೆಯನ್ನು ಟ್ರ್ಯಾಕ್ ಮಾಡುವುದನ್ನು ಮುಂದುವರಿಸುತ್ತೇವೆ. ಅಗತ್ಯವಿದ್ದರೆ ಮುಂದೆ ಮತ್ತೆ ಬೆಲೆಯೇರಿಕೆ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಉಬರ್ ಬೆನ್ನಲ್ಲೇ ಓಲಾ ಕೂಡ ತನ್ನ ಪ್ರಯಾಣದ ದರಗಳನ್ನು ಪರಿಷ್ಕರಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಓಲಾದಿಂದ ಅಧಿಕೃತ ಹೇಳಿಕೆ ಪ್ರಕಟವಾಗಿಲ್ಲ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 112 ರೂ. ತಲುಪಿದೆ. ಡೀಸೆಲ್ ದರ ಲೀಟರ್‌ಗೆ 95 ರೂ. ದಾಟುವ ಸನ್ನಾಹದಲ್ಲಿದೆ. ಸಾರಿಗೆ ಇಲಾಖೆಯ ದರ ರಚನೆಯ ಪ್ರಕಾರ, ಪ್ರಯಾಣಿಕರು ಮೊದಲ 4 ಕಿಮೀಗೆ ಸಣ್ಣ ಕ್ಯಾಬ್‌ಗಳಿಗೆ ಕನಿಷ್ಠ 75 ರೂ ಮತ್ತು ಐಷಾರಾಮಿ ಟ್ಯಾಕ್ಸಿಗಳಿಗೆ 150 ರೂ. ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: GST: ಹೊಸ ವರ್ಷದ ಆರಂಭದಲ್ಲೇ ಶಾಕಿಂಗ್ ನ್ಯೂಸ್: ಜ. 1 ರಿಂದ ಓಲಾ, ಉಬರ್‌, ಸ್ವಿಗ್ಗಿ, ಜೊಮ್ಯಾಟೋ ಸೇವೆ ದುಬಾರಿ

ಅಮೆರಿಕದಲ್ಲಿ ಉಬರ್​ ಚಾಲಕನಾಗಿರುವ ಅಫ್ಘಾನ್ ಮಾಜಿ ಹಣಕಾಸು ಸಚಿವ; ಜೀವನೋಪಾಯಕ್ಕಾಗಿ ಈ ಕೆಲಸ

Published On - 1:58 pm, Thu, 21 April 22