ಬೆಂಗಳೂರು: ದೇಶಾದ್ಯಂತ ದೊಡ್ಡ ಕಿಡಿ ಹೊತ್ತಿಸಿರೋ ಹಿಜಾಬ್(Hijab) ಬೆಂಕಿಯ ಬಿಸಿ ಇಷ್ಟು ದಿನದವರೆಗೆ ಬೆಂಗಳೂರಿಗೆ ತಟ್ಟಿರಲಿಲ್ಲ. ರಾಜಧಾನಿಯಲ್ಲಿ ಹಿಜಾಬ್ ಜ್ವಾಲೆ ಆವರಿಸದಂತೆ ಎಲ್ಲಾ ರೀತಿ ಎಚ್ಚರಿಕೆಯನ್ನೂ ವಹಿಸಲಾಗಿತ್ತು. ಆದ್ರೆ ನಿನ್ನೆ ರಾಜಧಾನಿಗೂ ಈ ಹಿಜಾಬ್ ವಿವಾದ ಎಂಟ್ರಿ ಕೊಟ್ಟಿತ್ತು. ಸದ್ಯ ಈಗ ವಿದ್ಯಾ ಸಾಗರ ಶಾಲಾ ವಿವಾದಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಶಾಲಾ ಆಡಳಿತ ಮಂಡಳಿ ಮಾಲೀಕರಾದ ಡಾ. ರಾಜು ಸ್ಟೋಟಕ ಸಂಗತಿಯೊಂದನ್ನು ಬಯಲು ಮಾಡಿದ್ದಾರೆ.
ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದ ಹಿನ್ನೆಲೆ ಹಿಜಾಬ್ ಆಗಲಿ, ಕೇಸರಿ ಶಾಲನ್ನಾಗಲಿ ಶಾಲೆಗೆ ಧರಿಸಿ ಆಗಮಿಸುವಂತಿಲ್ಲ. ಆದ್ರೆ, ಚಂದ್ರಲೇಔಟ್ನ ಈ ವಿದ್ಯಾಸಾಗರ ಶಾಲೆಗೆ ಕೆಲ ಮಕ್ಕಳು ಹಿಜಾಬ್ ಧರಿಸಿ ಬಂದಿದ್ದರಿಂದ ಶಿಕ್ಷಕಿ ಶಶಿಕಲಾ ಅನ್ನೋರು ಹಿಜಾಬ್ ತೆಗೆಯುವಂತೆ ಹೇಳಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಪೋಷಕರು ಎಂದು ಹೇಳುತ್ತ ಕೆಲವರು ಪ್ರಿನ್ಸಿಪಾಲ್ ಕಚೇರಿಗೆ ನುಗ್ಗಿ ಶಿಕ್ಷಕಿ ವಿರುದ್ಧ ಹರಿಹಾಯ್ದರು ಶಾಲೆಯ ಪ್ರಿನ್ಸಿಪಾಲ್ ಜೊತೆ ವಾಗ್ವಾದ ನಡೆಸಿದ್ದರು. ಆದ್ರೆ ಘಟನೆ ಬಗ್ಗೆ ಮಾತನಾಡಿರುವ ಶಾಲಾ ಆಡಳಿತ ಮಂಡಳಿ ಮಾಲೀಕರಾದ ಡಾ. ರಾಜು ಘಟನೆ ಸಂಬಂಧ ಮಾತನಾಡಿದ್ದಾರೆ.
ಕೆಲವರು ಉದ್ದೇಶಪೂರ್ವಕವಾಗಿಯೇ ನಿನ್ನೆ ಗಲಾಟೆ ಮಾಡಿದ್ದಾರೆ. ಚಂದ್ರಾಲೇಔಟ್ ವಿದ್ಯಾಸಾಗರ ಗಲಾಟೆ ಹಿಂದೆ ಕಾಣದ ಕೈಗಳ ಕೈವಾಡ ಇದೆ. ನಿನ್ನೆಯ ಗಲಾಟೆಯಲ್ಲಿ ನಮ್ಮ ಶಾಲೆಯ ಪೋಷಕರ ಹೆಚ್ಚು ಇರಲಿಲ್ಲ. ನಮ್ಮ ಶಾಲೆಯ ಪೋಷಕರೇ ಅಲ್ಲದವರು ನಿನ್ನೆ ಗಲಾಟೆ ಮಾಡಿದ್ದಾರೆ. ನಮ್ಮ ಶಾಲೆಯ ಗಲಾಟೆಯಲ್ಲಿ ಕೆಲವರು ಪ್ರಚೋದನೆ ನೀಡಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಿದವರು ನಮ್ಮ ಶಾಲೆಯ ಪೋಷಕರಲ್ಲ ಕೆಲವರು ನಿನ್ನೆ ಶಾಲೆಯ ಮುಂದೆ ಅನಾವಶ್ಯಕವಾಗಿ ಗಲಾಟೆ ಮಾಡಿದ್ದಾರೆ. ಶಿಕ್ಷಕಿ ಶಶಿಕಲಾ ಅವರದ್ದು ತಪ್ಪಿಲ್ಲ. ಹಿಜಾಬ್ ಬಗ್ಗೆ ಶಿಕ್ಷಕಿ ಶಶಿಕಲಾ ಮಾತನಾಡಿಲ್ಲ. ಯಾರೋ ಉದ್ದೇಶ ಪೂರ್ವಕವಾಗಿ ಗಲಾಟೆ ಮಾಡಿದ್ದಾರೆ. ಶಾಲೆ ಮುಂದೆ ಗಲಾಟೆ ಮಾಡಿದ ಕೆಲವರ ವಿಡಿಯೋ ಮಾಡಿಕೊಂಡಿದ್ದೇವೆ. ಪೊಷಕರ ಹೊರತಾಗಿ ಗಲಾಟೆ ಮಾಡಿದವರ ಮಾಹಿತಿ ಕಲೆ ಹಾಕ್ತೀದ್ದೀವಿ. ಯಾಕೆ ಗಲಾಟೆ ಮಾಡಿದ್ದಾರೆ? ಯಾರು ಯಾವ ಉದ್ದೇಶ ಎಲ್ಲ ಮಾಹಿತಿ ಪಡೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಎಬಿಜಿ ಶಿಪ್‌ಯಾರ್ಡ್ ಒಂದು ಹಗರಣ ಎಂದು ನಾವು ಮೊದಲೇ ಎಚ್ಚರಿಸಿದ್ದೆವು: ಕಾಂಗ್ರೆಸ್
Published On - 1:39 pm, Sun, 13 February 22