ಬೆಂಗಳೂರು: ಆರ್‌ಆರ್‌ನಗರದ ಒಬಿಸಿ ವಸತಿ ನಿಲಯದಲ್ಲಿ ಬಾಲಕಿಯರಿಂದಲೇ ಶೌಚಾಲಯ ಸ್ವಚ್ಛಗೊಳಿಸಿದ ವಾರ್ಡನ್
ಬೆಂಗಳೂರಿನ ಆರ್‌ಆರ್‌ನಗರದಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಹಾಸ್ಟೆಲ್‌ನ ವಾರ್ಡನ್‌ನಿಂದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿ ಅವರಿಂದ ಶೌಚಾಲಯ ಸ್ವಚ್ಛಗೊಳಿಸಲಾಗಿದೆ.
ಬೆಂಗಳೂರು:ಆರ್‌ಆರ್‌ನಗರದಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಪರಿಸ್ಥಿತಿ ಹೇಳತೀರದು.ಹಾಸ್ಟೆಲ್ ವಾರ್ಡ್ನ್ನಿಂದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿ ಅವರಿಂದ ಶೌಚಾಲಯ ಸ್ವಚ್ಛಗೊಳಿಸಲಾಗಿದೆ ಈ ಕುರಿತು ಡಿಎಚ್‌ನೊಂದಿಗೆ ಮಾತನಾಡಿದ ವಿದ್ಯಾರ್ಥಿಗಳು, ಶೌಚಾಲಯಗಳನ್ನು ಸ್ವಚ್ಛಗೊಳಿಸುವಂತೆ ಅವಾಚ್ಯವಾಗಿ ನಿಂದಿಸುತ್ತಾರೆ. ಅಧಿಕಾರಿಗಳು ಅಡುಗೆಗಾರರನ್ನು ನೇಮಿಸಿದ್ದರೂ ನಮ್ಮ ಆಹಾರವನ್ನು ನಾವೇ ಬೇಯಿಸಿಕೊಳ್ಳುವಂತೆ ಮಾಡಲಾಗಿದೆ. ವಾರ್ಡನ್ ಹುಡುಗಿಯರನ್ನು ಅವಮಾನಿಸುತ್ತಾನೆ, ಜೊತೆಗೆ ರಜೆಯಲ್ಲೂ ಮನೆಗೆ ತೆರಳಲು ಅನುಮತಿ ನಿರಾಕರಿಸಲಾಗಿದೆ. ತಮ್ಮ ಮಕ್ಕಳ ಯೋಗಕ್ಷೇಮ ವಿಚಾರಿಸಲು ವಾರ್ಡನ್‌ಗೆ ಕರೆ ಮಾಡುವ ಪಾಲಕರಿಗೆ ಅಸಭ್ಯವಾಗಿ ಮಾತನಾಡುತ್ತಾರೆ. ನಾವು ಮನೆಯಿಂದ ದೂರದಲ್ಲಿದ್ದು ನಮ್ಮ ಪೋಷಕರು ಚಿಂತಿತರಾಗಿದ್ದಾರೆ ಎಂದು ವಿದ್ಯಾರ್ಥಿಗಳು ಅಳಲನ್ನ ತೋಡಿಕೊಂಡಿದ್ದಾರೆ.
ಇನ್ನು ಹೆಣ್ಣುಮಕ್ಕಳಿಗೆ ಸಹಾಯ ಮಾಡಲು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ತಲುಪಿದ್ದೇವೆ. “ನಾವು ಅವರಿಗೆ ಪತ್ರವನ್ನು ಕೂಡ ಸಲ್ಲಿಸಿದ್ದೇವೆ, ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಹುಡುಗಿಯರಿಗೆ ಸಹಾಯ ಮಾಡುವ ಬದಲು, ಅವರ ಪ್ರವೇಶವನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದರು,” ಎಂದು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಸದಸ್ಯ ನರೇಂದ್ರ ಎನ್ ಆರೋಪಿಸಿದರು.
ಇನ್ನು ಈ ಕುರಿತು ಟ್ವೀಟ್ ಮಾಡಿರುವ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಅವರು ಹಾಸ್ಟೆಲ್‌ನ ದುಸ್ಥಿತಿ ಬಗ್ಗೆ ತಿಳಿದು ಆಘಾತವಾಯಿತು. ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ನಾನು ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದೆ, ಆದರೆ ಯಾರೂ ಪ್ರತಿಕ್ರಿಯಿಸಲಿಲ್ಲ. ಇದರ ಕುರಿತು ಕ್ರಮ ಕೈಗೊಳ್ಳುವಂತೆ ಸಚಿವರನ್ನು ಸಂಪರ್ಕಿಸಿದ್ದೇನೆ,” ಎಂದು ಡಿಎಚ್‌ಗೆ ತಿಳಿಸಿದರು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:32 pm, Tue, 3 January 23