Bengaluru Water Crisis: ವಾರಕ್ಕೊಮ್ಮೆ ಸ್ನಾನ, ಆರ್ಡರ್ ಮಾಡಿ ಊಟ; ಬೆಂಗಳೂರು ನಿವಾಸಿಗಳ ಗೋಳು ಒಂದಾ ಎರಡಾ!

ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ನೀರಿನ ಸಮಸ್ಯೆ ಬಗ್ಗೆ ಬೆಂಗಳೂರು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ತಿಂಗಳಿಗೆ ಐದು ಬಾರಿ ಮಾತ್ರ ಸ್ನಾನ, ಅಡುಗೆ ಮಾಡಿದರೆ ಪಾತ್ರೆ ತೊಳೆಯಲು ನೀರು ಬೇಕೆಂದು ಆರ್ಡರ್ ಮಾಡಿ ಊಟ-ತಿಂಡಿ, ಕುಡಿಯುವ ನೀರಿಲ್ಲವೆಂದು ಸಂಸ್ಕರಿಸಿದ ನೀರನ್ನೇ ಬಳಕೆ ಮಾಡುವಂತಹ ಸ್ಥಿತಿ ಬೆಂಗಳೂರಿನಲ್ಲಿದೆ.

Bengaluru Water Crisis: ವಾರಕ್ಕೊಮ್ಮೆ ಸ್ನಾನ, ಆರ್ಡರ್ ಮಾಡಿ ಊಟ; ಬೆಂಗಳೂರು ನಿವಾಸಿಗಳ ಗೋಳು ಒಂದಾ ಎರಡಾ!
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on: Mar 13, 2024 | 11:24 AM

ಬೆಂಗಳೂರು, ಮಾರ್ಚ್​.13: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭೀಕರ ಬರ ಆವರಿಸಿದೆ. ಹನಿ ನೀರಿಗಾಗಿಯೂ ಜನ ಪರದಾಡುತ್ತಿದ್ದಾರೆ (Drinking Water Crisis). ಕುಡಿಯಲು ಅಲ್ಲ ತೊಳೆಯಲು ಕೂಡ ನೀರಿಲ್ಲ. ದೈನಂದಿನ ಕಾರ್ಯಗಳಿಗೂ ಸಮಸ್ಯೆ ಎದುರಾಗಿದೆ. ಬೆಂಗಳೂರಿನ ಕೆಲ ನಿವಾಸಿಗಳು ನೀರಿಲ್ಲದೆ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನ ಬಿಚ್ಚಿ ಅಳಲು ತೋಡಿಕೊಂಡಿದ್ದಾರೆ. ತಿಂಗಳಿಗೆ ಐದು ಬಾರಿ ಮಾತ್ರ ಸ್ನಾನ, ಅಡುಗೆ ಮಾಡಿದರೆ ಪಾತ್ರೆ ತೊಳೆಯಲು ನೀರು (Water) ಬೇಕೆಂದು ಆರ್ಡರ್ ಮಾಡಿ ಊಟ-ತಿಂಡಿ, ಕುಡಿಯುವ ನೀರಿಲ್ಲವೆಂದು ಸಂಸ್ಕರಿಸಿದ ನೀರನ್ನೇ ಬಳಕೆ, ಹೀಗೆ ಒಂದಾ ಎರಡಾ ನೀರಿಲ್ಲದ ಕಾರಣ ಬೆಂಗಳೂರಿನ ಬಹುತೇಕ ಏರಿಯಾದ ಜನರು ನರಕ ಅನುಭವಿಸುತ್ತಿದ್ದಾರೆ.

ಬಾಬುಸಾಪಾಳ್ಯದ ನಿವಾಸಿಗಳು ತಮ್ಮ ದೈನಂದಿನ ಬಳಕೆಗಾಗಿ ನೀರಿನ ಟ್ಯಾಂಕರ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಇದರಿಂದಾಗಿ ಕಳೆದೆರಡು ತಿಂಗಳಿಂದ ತೀವ್ರ ಆರ್ಥಿಕ ಹೊಡೆತ ಬಿದ್ದಿದೆ. “ನಮಗೆ ಪ್ರತಿನಿತ್ಯ ನಾಲ್ಕು ಟ್ಯಾಂಕರ್‌ ನೀರು ಬೇಕಾಗುತ್ತದೆ. ಆದರೆ ನಮಗೆ ಒಂದು ಅಥವಾ ಎರಡು ಟ್ಯಾಂಕರ್ ನೀರು ಮಾತ್ರ ಸಿಗುತ್ತಿದೆ. ಕಳೆದ ಎರಡು-ಮೂರು ತಿಂಗಳಿಂದ ನಾವು ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ” ಎಂದು ನಿವಾಸಿಯೊಬ್ಬರು ಹೇಳಿದರು.

ಟ್ಯಾಂಕರ್​ಗಳ ಮೇಲೆ ಸರ್ಕಾರ ವಿಧಿಸಿರುವ ಆದೇಶ ಪ್ರಯೋಜನವಾಗಿದೆಯೇ ಎಂಬ ಪ್ರಶ್ನೆಗೆ ಇಲ್ಲಿನ ನಿವಾಸಿಯೊಬ್ಬರು, ‘ದರ ಸ್ಥಿರತೆ ಕಂಡರೂ ಸಮಸ್ಯೆ ದೊಡ್ಡದಾಗಿಯೇ ಉಳಿದಿದೆ, ಬೇಡಿಕೆ ಹೆಚ್ಚಿರುವುದರಿಂದ ಸಕಾಲಕ್ಕೆ ಟ್ಯಾಂಕರ್‌ಗಳು ಸಿಗುತ್ತಿಲ್ಲ ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: ಒಂದೆಡೆ ನಲ್ಲಿ ನೀರು ಬರ್ತಿಲ್ಲ, ಮತ್ತೊಂದೆಡೆ ನೀರು ಬರುವ ಬೋರ್ ವೆಲ್ ಮೋಟಾರ್​ ಕದಿಯುತ್ತಿರುವ ಖದೀಮರು; ಜನ ಹೈರಾಣ

ಈ ಪ್ರದೇಶದ ಅಪಾರ್ಟ್‌ಮೆಂಟ್‌ನ ನಿವಾಸಿ ಮಹಿಳೆಯೊಬ್ಬರು ನೀರಿನ ಸಮಸ್ಯೆಯ ಬಗ್ಗೆ ಮಾತನಾಡಿದ್ದು “ನಮಗೆ ಮಗು ಇದೆ, ತುಂಬಾ ಕಷ್ಟ, ಟ್ಯಾಂಕರ್‌ಗಳು ಬರುತ್ತಿಲ್ಲ, ಸರ್ಕಾರವು ಬೆಲೆಗಳನ್ನು ಕಡಿಮೆ ಮಾಡಿದೆ, ಆದರೆ ಅವು ಬರುತ್ತಿಲ್ಲ, ಅವರು ಬಂದರೂ ನೀರು ಬರುತ್ತಿಲ್ಲ. ನೀರಿನ ಸಮಸ್ಯೆಗೆ ಯಾವಾಗ ಪರಿಹಾರ ಸಿಗುತ್ತದೆ, ನಾವು ಯಾವಾಗ ಸಾಮಾನ್ಯ ಜೀವನಕ್ಕೆ ಮರಳುತ್ತೇವೆ ಎಂದು ನನಗೆ ತಿಳಿದಿಲ್ಲ ಎಂದರು.”

ಮುಂಗಾರು ಮಳೆ ಬಂದ ನಂತರ ಈ ಪರಿಸ್ಥಿತಿ ಸರಿಯಾಗುವ ನಿರೀಕ್ಷೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನಿವಾಸಿಯೊಬ್ಬರು, ಸರ್ಕಾರಗಳು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವುದರಲ್ಲಿ ಗಮನಹರಿಸುತ್ತಿವೆ “ಅವರು ಜನರ ಒಟ್ಟಾರೆ ಯೋಗಕ್ಷೇಮವನ್ನು ಪರಿಗಣಿಸಲಿಲ್ಲ. ಅಪಾರ್ಟ್‌ಮೆಂಟ್‌ಗಳು ಮತ್ತು ರಸ್ತೆಗಳನ್ನು ನಿರ್ಮಿಸುವತ್ತ ಗಮನ ಹರಿಸಲಾಗಿದೆ, ಆದರೆ ನಾವು ಅಂತರ್ಜಲ ಮಟ್ಟಕ್ಕೆ ಕೆಲಸ ಮಾಡಬೇಕಾಗಿದೆ. ಅದನ್ನು ಎಂದಿಗೂ ಮಾಡಲಾಗಿಲ್ಲ. ನಾನು 15 ವರ್ಷಗಳಿಂದ ಇಲ್ಲಿದ್ದೇನೆ. ನಾನು ಯಾವುದೇ ಸರ್ಕಾರದಿಂದ ಇಂತಹ ಕ್ರಮಗಳನ್ನು ನೋಡಿಲ್ಲ ಎಂದು ಅವರು ಹೇಳಿದರು, ಜನರು ಕುಡಿಯುವ ನೀರಿಗಾಗಿ ಕಿಲೋಮೀಟರ್ ಉದ್ದದ ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದರು. ಇನ್ನು ಮತ್ತೋರ್ವ ನಿವಾಸಿ ಮಾತನಾಡಿ, ಕಳೆದ ಒಂದು ತಿಂಗಳಿನಿಂದ 5 ಬಾರಿ ಸ್ನಾನ ಮಾಡಿದ್ದೇನೆ ಎಂದು ಅಳಲು ತೋಡಿಕೊಂಡರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ