ಕ್ಷಣಕ್ಷಣಕ್ಕೂ ಬದಲಾಗ್ತಿದೆ ಬೆಂಗಳೂರು ವಾತಾವರಣ: ಇನ್ನೆರಡು ದಿನ ಇರಲಿದೆ ಭಾರಿ ಚಳಿ!
Bengaluru Weather: ಬೆಂಗಳೂರು ಕಳೆದ ಎರಡು ವಾರದಿಂದ ಕೂಲ್ ಸಿಟಿಯಾಗಿ ಮಾರ್ಪಟ್ಟಿದೆ. ನಗರದಲ್ಲಿ ಸತತ ಹಲವು ದಿನಗಳಿಂದ ಜಿಟಿ ಮಳೆ ಚಳಿ, ಸದಾ ಮೋಡಕವಿದ ವಾತವರಣದಿಂದ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ. ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ರಾಜಧಾನಿಯ ವಾತಾವರಣ ಮಕ್ಕಳಲ್ಲಿ ಅನಾರೋಗ್ಯಕ್ಕೆ ಕಾರಣವಾಗುವ ಆತಂಕ ಸೃಷ್ಟಿಸಿದೆ.

ಬೆಂಗಳೂರು, ಡಿಸೆಂಬರ್ 6: ಕಳೆದ ಹಲವು ದಿನಗಳಿಂದ ಬೆಂಗಳೂರಿನಲ್ಲಿ (Bengaluru) ಸೂರ್ಯನ ದರ್ಶನವಾಗುತ್ತಿಲ್ಲ. ಸದಾ ಮೋಡಮುಸಕಿದ ವಾತವರಣದ (Weather Forecast) ಜತೆಗೆ ಚಳಿ ಇದೆ. ಅಗ್ಗೊಮ್ಮೆ ಈಗೊಮ್ಮ ತುಂತುರು ಮಳೆಯೂ ಆಗುತ್ತಿದೆ. ಒಮ್ಮೊಮ್ಮೆ ಕ್ಷಣ ಕಾಲ ಸೂರ್ಯ ದರ್ಶನವಾಗುತ್ತದೆ ಅಷ್ಟೆ. ಕ್ಷಣಕ್ಷಣಕ್ಕೂ ನಗರದ ವಾತಾವರಣ ಬದಲಾವಣೆಯಾಗುತ್ತಿದ್ದು, ಮನೆಯಿಂದ ಹೊರಬರಲು ಜನರು ಬೇಸರಿಸುವಂತಾಗಿದೆ. ಸೈಕ್ಲೋನ್ ಪರಿಣಾಮ ತಗ್ಗಿದರೂ ಚಳಿ ಮತ್ತು ಮಳೆ ಮುಂದುವರದಿದೆ. ವಾತವರಣದಲ್ಲಿ ಕಡಿಮೆ ತಾಪಮಾನ ಹಿನ್ನಲೆ ಒತ್ತಡ ಕಡಿಮೆಯಾಗಿ ರಾಜಧಾನಿಯಲ್ಲಿ ಶುಕ್ರವಾರವೂ ಮೋಡಮುಸಿಕದ ವಾತವರಣ ಹಾಗೂ ತುಂತರು ಮಳೆ ಕಂಡುಬಂದಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಉತ್ತರ ಒಳನಾಡಿನಲ್ಲಿ ಕನಿಷ್ಠ ಉಷ್ಣಾಂಶ 7-19 ಡಿಗ್ರಿ ಸೆಲ್ಸಿಯಸ್ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಉಷ್ಣಾಂಶ 18-20 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ದಕ್ಷಿನ ಒಳನಾಡಿನ ಜಿಲ್ಲೆಗಳಲ್ಲಿ ತಂತುರು ಮಳೆಯಾಗಿದ್ದು, ಇಂದಿನಿಂದ 4 ದಿನಗಳ ಕಾಲ ರಾಜ್ಯದಲ್ಲಿ ಒಣಹವೆ ಮುಂದುವರೆಯಲಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಕನಿಷ್ಠ ಉಷ್ಣಾಂಶ 17-18 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಮಾನ ಇಲಾಖೆ ವಿಜ್ಞಾನಿ ಸಿಎಸ್ ಪಾಟೀಲ್ ಮುನ್ಸೂಚನೆ ನೀಡಿದ್ದಾರೆ.
ಬೆಂಗಳೂರು ವಾತಾವರಣ: ಮಕ್ಕಳಲ್ಲಿ ಆರೋಗ್ಯ ಸಮಸ್ಯೆ
ಸದಾ ಚಳಿ ಹಾಗೂ ಮೋಡಮುಸಕಿದ ವಾತವರಣದಿಂದ ಮಕ್ಕಳಲ್ಲಿ ಕೆಮ್ಮು ಜ್ವರ ಉಸಿರಾಟದ ತೊಂದರೆ, ವಾಂತಿ, ಬೇಧಿ, ಕಂಡು ಬರುತ್ತಿದೆ. ಮಕ್ಕಳು ಮತ್ತು ವೃದ್ಧರು ಎಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಮಕ್ಕಳಿಗೆ ಕಾಯಿಸಿದ ನೀರು ಕುಡಿಯಲು, ಬಿಸಿಯಾದ ಊಟ ನೀಡಲು ಹಾಗೂ ಮೈಮುಚ್ಚುವ ಬೆಚ್ಚನೆಯ ಊಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಕೆಸಿ ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಮೋಹನ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಹವಾಮಾನ: ಕರಾವಳಿಯಲ್ಲಿ ಮೋಡ ಕವಿದ ವಾತಾವರಣ, ಉಳಿದೆಡೆ ಒಣ ಹವೆ
ಒಟ್ಟಿನಲ್ಲಿ ಚಂಡಮಾರತದ ಪರಿಣಾಮ ತಗ್ಗಿದೂ ಚಳಿಯ ವಾತವರಣ ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ ಸಿಟಿ ಜನರು ಮಕ್ಕಳ ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿ ವಹಿಸಬೇಕಿದೆ.



