ಬೆಂಗಳೂರಿಗರೇ ಗಮನಿಸಿ: ಪೂರ್ವ, ದಕ್ಷಿಣ ವಲಯಗಳ ಈ ಭಾಗಗಳಲ್ಲಿ ನಾಳೆ ನೀರು ಸರಬರಾಜು ವ್ಯತ್ಯಯ

ಕಾವೇರಿ 5ನೇ ಹಂತದ ಯೋಜನೆಯಡಿ EMF ಮೀಟರ್‌ಗಳ ಅಳವಡಿಕೆ ಕಾಮಗಾರಿಯಿಂದ ಬೆಂಗಳೂರಿನ ಪೂರ್ವ ಮತ್ತು ದಕ್ಷಿಣ ವಲಯಗಳಲ್ಲಿ ಫೆಬ್ರವರಿ 26 ರಂದು 24 ಗಂಟೆಗಳ ಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಬೆಳಿಗ್ಗೆ 6 ರಿಂದ ಪಂಪಿಂಗ್ ಸ್ಥಗಿತಗೊಳ್ಳಲಿದ್ದು, ನಿವಾಸಿಗಳು ಸಹಕರಿಸುವಂತೆ ಜಲಮಂಡಳಿ ಮನವಿ ಮಾಡಿದೆ. ಮರುಪ್ರಾರಂಭದ ನಂತರವೂ ನೀರು ಮನೆಗಳಿಗೆ ತಲುಪಲು 3-6 ಗಂಟೆಗಳು ಬೇಕಾಗಬಹುದು. ಹೀಗಾಗಿ ಉಂಟಾಗಲಿರುವ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸೋದಾಗಿಯೂ ತಿಳಿಸಿದೆ.

ಬೆಂಗಳೂರಿಗರೇ ಗಮನಿಸಿ: ಪೂರ್ವ, ದಕ್ಷಿಣ ವಲಯಗಳ ಈ ಭಾಗಗಳಲ್ಲಿ ನಾಳೆ ನೀರು ಸರಬರಾಜು ವ್ಯತ್ಯಯ
ಸಾಂದರ್ಭಿಕ ಚಿತ್ರ
Image Credit source: Google

Updated on: Feb 25, 2026 | 3:58 PM

ಬೆಂಗಳೂರು, ಫೆಬ್ರವರಿ 25: ಕಾವೇರಿ 5ನೇ ಹಂತದ ಯೋಜನೆಯಡಿ ಹೊಸ EMF ಮೀಟರ್‌ಗಳನ್ನು ಅಳವಡಿಸುವ ಕಾಮಗಾರಿಯ ಹಿನ್ನೆಲೆ ಫೆಪ್ರವರಿ 26ರ ಗುರುವಾರ (ನಾಳೆ) ಬೆಂಗಳೂರಿನ ಪೂರ್ವ ಮತ್ತು ದಕ್ಷಿಣ ವಲಯಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕಾಮಗಾರಿ ಹಿನ್ನೆಲೆ ಪಂಪಿಂಗ್​​ ಕಾರ್ಯ ನಡೆಯದ ಕಾರಣ ಈ ಭಾಗದ ನಿವಾಸಿಗಳು 24 ಗಂಟೆಗಳ ನೀರು ಪೂರೈಕೆ ವ್ಯತ್ಯಯಕ್ಕೆ ಸಿದ್ಧರಾಗಬೇಕಾಗಿದೆ. ಈ ಕಾರ್ಯದಲ್ಲಿ ಮಂಡಳಿಯೊಂದಿಗೆ ಸಹಕರಿಸಬೇಕು ಎಂದು ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಸಾರ್ವಜನಿಕರನ್ನು ಆಗ್ರಹಿಸಿದ್ದು,
ಅನಾನುಕೂಲತೆಗಾಗಿ ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ.

ಎಲ್ಲೆಲ್ಲಿ ನೀರು ಸರಬರಾಜಲ್ಲಿ ವ್ಯತ್ಯಯ?


ಪೂರ್ವ ಬೆಂಗಳೂರು (ಮಹದೇವಪುರ ವಲಯ ಹಾಗೂ ಸುತ್ತಮುತ್ತ):

  • ವೈಟ್‌ಫೀಲ್ಡ್
  • ಕಡುಗೋಡಿ
  • ಹೂಡಿ
  • ಗರುಡಾಚಾರ್​​ಪಾಳ್ಯ
  • ದೊಡ್ಡನೆಕ್ಕುಂದಿ
  • ಮುನ್ನೇಕೊಳಲ (ಮಾರತಹಳ್ಳಿ ಪ್ರದೇಶ)
  • ನಲ್ಲೂರುಹಳ್ಳಿ
  • ಸಿದ್ದಾಪುರ
  • ನಾಗೊಂಡನಹಳ್ಳಿ
  • ರಾಮಗೊಂದನಹಳ್ಳಿ
  • ಚನ್ನಸಂದ್ರ

ದಕ್ಷಿಣ ಬೆಂಗಳೂರು:

  • ಬನಶಂಕರಿ (ವಿವಿಧ ಹಂತಗಳು)
  • ಕುಮಾರಸ್ವಾಮಿ ಲೇಔಟ್
  • ಪೂರ್ಣಪ್ರಜ್ಞ ಲೇಔಟ್
  • ಅಂಜನಾಪುರ
  • ಗೊಟ್ಟಿಗೆರೆ
  • ಬೇಗೂರು
  • ಕಲ್ಲಹಳ್ಳಿ
  • ಕುಡ್ಲು
  • ಕೊಡಿಚಿಕ್ಕನಹಳ್ಳಿ

ಮಾಹಿತಿ ಪ್ರಕಾರ ಗುರುವಾರ ಬೆಳಿಗ್ಗೆ 6 ಗಂಟೆಗೆ ಪಂಪ್​​ ಕಾರ್ಯ ಸ್ಥಗಿತವಾಗಲಿದ್ದು, ಶುಕ್ರವಾರ ಬೆಳಗ್ಗೆ 6 ಗಂಟೆಗೆ ಮರುಪ್ರಾರಂಭ ನಡೆಯಲಿದೆ. ಆ ಬಳಿಕ ಮನೆಗಳಿಗೆ ನೀರು ತಲುಪಲು ಹಾಗೂ ಒತ್ತಡ ಸಾಮಾನ್ಯಗೊಳ್ಳಲು ಇನ್ನೂ 3–6 ಗಂಟೆಗಳು ಹಿಡಿಯಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಅಗತ್ಯ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಮತ್ತು ಅನಗತ್ಯವಾಗಿ ನೀರಿನ ಬಳಕೆಯನ್ನು ಮಾಡದಂತೆ ಸೂಚಿಸಲಾಗಿದೆ. ಮುಂಬರುವ ಬೇಸಿಗೆಯಲ್ಲಿ ನೀರಿನ ಅಭಾವವನ್ನು ಸಮರ್ಥವಾಗಿ ಎದುರಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಮಗ್ರ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪಾರಂಪರಿಕ ನೀರು ಪೂರೈಕೆ ವ್ಯವಸ್ಥೆಯಿಂದ ಹೊರಬಂದು, ತಂತ್ರಜ್ಞಾನ ಆಧಾರಿತ ಹಾಗೂ ನಾಗರಿಕ ಸ್ನೇಹಿ ಹೆಜ್ಜೆ ಇಟ್ಟಿದೆ ಎಂದೂ ಜಲಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us