Crime News: ಬೆಂಗಳೂರಿನಲ್ಲಿ ಸ್ಕೂಟರ್​ನಿಂದ ಆಯತಪ್ಪಿ ಚರಂಡಿಗೆ ಬಿದ್ದು ಯುವತಿ ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: Sep 11, 2022 | 2:04 PM

ಸೌಪರ್ಣಿಕ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಮಹಿಳೆ ನಾಪತ್ತೆಯಾಗಿರುವಂತಹ ಘಟನೆ ಜಿಲ್ಲೆಯ ಬೈಂದೂರು ತಾಲೂಕಿ‌ನ ಕೊಲ್ಲೂರನಲ್ಲಿ ನಡೆದಿದೆ.

Crime News: ಬೆಂಗಳೂರಿನಲ್ಲಿ ಸ್ಕೂಟರ್​ನಿಂದ ಆಯತಪ್ಪಿ ಚರಂಡಿಗೆ ಬಿದ್ದು ಯುವತಿ ಸಾವು
ತಾರಾ ಬಡಾಯಿಕ್​(23) ಮೃತ ಯುವತಿ.
Follow us on

ಬೆಂಗಳೂರು: ಸ್ಕೂಟರ್​ನಿಂದ ಆಯತಪ್ಪಿ ಚರಂಡಿಗೆ ಬಿದ್ದು ಯುವತಿ ಸಾವನ್ನಪ್ಪಿರುವಂತಹ ಘಟನೆ ಹೆಚ್​ಬಿಆರ್​ ಲೇಔಟ್​​ನ ಅಶ್ವತ್ಥ್​ ನಗರದಲ್ಲಿ ನಡೆದಿದೆ. ತಾರಾ ಬಡಾಯಿಕ್​(23) ಮೃತ ಯುವತಿ. ತಡರಾತ್ರಿ ಸ್ಕೂಟರ್​​ನಲ್ಲಿ ತೆರಳುತ್ತಿದ್ದಾಗ ದುರ್ಘಟನೆ ನಡೆದಿದೆ. ಡ್ರೈನೇಜ್​ ತೆರೆದಿದ್ದ ಕಾರಣ ನೇರವಾಗಿ ಡ್ರೈನೇಜ್​ಗೆ ಬಿದ್ದಿದ್ದಾರೆ. ಬಳಿಕ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ.  ತಾರಾ ಜೊತೆ ತೆರಳುತ್ತಿದ್ದ ಮತ್ತೊಬ್ಬರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸೌಪರ್ಣಿಕಾ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಮಹಿಳೆ ನಾಪತ್ತೆ:

ಉಡುಪಿ: ಸೌಪರ್ಣಿಕ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಮಹಿಳೆ ನಾಪತ್ತೆಯಾಗಿರುವಂತಹ ಘಟನೆ ಜಿಲ್ಲೆಯ ಬೈಂದೂರು ತಾಲೂಕಿ‌ನ ಕೊಲ್ಲೂರನಲ್ಲಿ ನಡೆದಿದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಕೇರಳದ ಮೂಲದ ಮಹಿಳೆ ಆಗಮಿಸಿದ್ದರು.
ಚಾಂದಿ ಶೇಖರ (41) ನದಿಯಲ್ಲಿ ನಾಪತ್ತೆಯಾದ ಮಹಿಳೆ. ಸ್ನಾನಕ್ಕೆ ಸೌಪರ್ಣಿಕಾ ನದಿಗೆ ಮಹಿಳೆ ತೆರಳಿದ್ದಾಳೆ. ನಾಪತ್ತೆಯಾದ ಮಹಿಳೆಯ ಶೋಧ ಕಾರ್ಯ ಆರಂಭವಾಗಿದ್ದು, ಸ್ಥಳೀಯ ಅಗ್ನಿಶಾಮಕ ದಳ ಮತ್ತು ಪೋಲಿಸರಿಂದ ಕಾರ್ಯಚರಣೆ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೊಲ್ಲೂರು ಪೊಲೀಸ್​ರು, ಒಣಂ ಹಬ್ಬದ ರಜೆಯಲ್ಲಿ ದೇವಳಕ್ಕೆ ಮಹಿಳೆ ಕುಟುಂಬ ಆಗಮಿಸಿದ್ದಾರೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮಳೆಗೆ ಗೋಡೆ ಕುಸಿದು ಗಾಯಗೊಂಡಿದ್ದ ಮಹಿಳೆ ಸಾವು

ಬೆಳಗಾವಿ: ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಗೆ ಬೆಳಗಾವಿಯಲ್ಲಿ ಮತ್ತೊಂದು ಬಲಿಯಾಗಿದೆ. ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಮಹಿಳೆ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಹೂಲಿಕಟ್ಟಿ ಗ್ರಾಮದ ಗಂಗವ್ವ ರಾಮಣ್ಣ ಮೂಲಿಮನಿ‌ (55) ಮೃತ ಮಹಿಳೆ. ಇಂದು ಬೆಳಗ್ಗೆ ‌4 ಗಂಟೆಗೆ ಮನೆ ಗೋಡೆ ಕುಸಿದು ಮಹಿಳೆಗೆ ಗಂಭೀರ ಗಾಯವಾಗಿತ್ತು. ಸ್ಥಳೀಯರು ತಕ್ಷಣವೇ ಗಂಗವ್ವರನ್ನು ಆಸ್ಪತ್ರೆ ದಾಖಲು ಮಾಡಿದ್ದರು. ಚಿಕಿತ್ಸೆ ‌ಫಲಿಸದೇ ಗಂಗವ್ವ ರಾಮಣ್ಣ ಮೂಲಿಮನಿ‌ ಸಾವನ್ನಪ್ಪಿದ್ದಾರೆ. ಗ್ರಾಮಕ್ಕೆ ಹಿರಿಯ ಅಧಿಕಾರಿಗಳ ಭೇಟಿ, ಸವದತ್ತಿ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.

ಮಲಪ್ರಭಾ ನದಿಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆ

ಬಾಗಲಕೋಟೆ: ಮಲಪ್ರಭಾ ನದಿಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಪಟ್ಟದಕಲ್ಲು ಗ್ರಾಮದ ಬಳಿ ಮಲಪ್ರಭಾ ನದಿಯಲ್ಲಿ ನಡೆದಿದೆ. ನದಿಯಲ್ಲಿ ಮುಳುಗುತ್ತಿರುವ ವಿಡಿಯೋ ಸೆರೆ ಹಿಡಿಯಲಾಗಿದೆ. ಮುಳುಗುವ ವೇಳೆ ಈಜಾಡಿ ಮೇಲೇಳಲು ಯತ್ನಿಸಿದ್ದು, ಕೊನೆಗೆ ಮೇಲೆ ಬರಲು ಆಗದೇ ವ್ಯಕ್ತಿ ಮುಳುಗಿದ್ದಾನೆ. ಕೈ ಬಡಿಯುತ್ತಾ ನೀರಲ್ಲಿ ಈಜೋಕೆ ಯತ್ನ ವಿಫಲ. ಸೇತುವೆ ಮೇಲೆ ನಿಂತು ಜನರು ವಿಡಿಯೋ ಮಾಡಿದ್ದಾರೆ. ವ್ಯಕ್ತಿ ಯಾರೆಂದು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಬಾದಾಮಿ ಠಾಣೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.