AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಶಾನಿಯ ಆಸೆಯಿಂದ ಬೆತ್ತಲೆಯಾದ ಬೆಂಗಳೂರಿನ ಯುವಕ: ಖಾತೆಯಿಂದ ಹೋಯಿತು ಲಕ್ಷ ಲಕ್ಷ ಹಣ!

ಬೆಂಗಳೂರಿನ ಯುವಕರು ಡೇಟಿಂಗ್ ಅಪ್ಲಿಕೇಶನ್‌ಗಳ ಮೂಲಕ ನಡೆಯುವ ವಂಚನೆಗಳ ಬಗ್ಗೆ ಎಚ್ಚರದಿಂದಿರಬೇಕು. ಇತ್ತೀಚೆಗೆ, AI ಪ್ರೊಫೈಲ್ ಬಳಸಿಕೊಂಡು ಯುವಕನೊಬ್ಬ ₹1.5 ಲಕ್ಷ ಕಳೆದುಕೊಂಡಿದ್ದಾನೆ. ವಿವಸ್ತ್ರಗೊಳಿಸಿದ ವಿಡಿಯೋಗಳನ್ನು ಬಳಸಿ ಬ್ಲಾಕ್‌ಮೇಲ್ ಮಾಡಲಾಗುತ್ತಿದೆ. ಇಂತಹ ಮೋಸದ ಜಾಲಗಳಿಂದ ನಿಮ್ಮ ಹಣ ಮತ್ತು ಗೌರವವನ್ನು ಉಳಿಸಿಕೊಳ್ಳಲು ಜಾಗರೂಕರಾಗಿರಿ.

ಇಶಾನಿಯ ಆಸೆಯಿಂದ ಬೆತ್ತಲೆಯಾದ ಬೆಂಗಳೂರಿನ ಯುವಕ: ಖಾತೆಯಿಂದ ಹೋಯಿತು ಲಕ್ಷ ಲಕ್ಷ ಹಣ!
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Jan 11, 2026 | 12:04 PM

Share

ಬೆಂಗಳೂರು, ಜ.11: ಬೆಂಗಳೂರಿನ (Bengaluru) ಯುವಕರೇ ಎಚ್ಚರ… ಹುಡುಗಿ ಚೆನ್ನಾಗಿದ್ದಾಳೆ ಎಂದು ಫೋನ್​​​​ ಎತ್ತಿದ್ರೆ, ಎಕೌಂಟ್​​​ನಲ್ಲಿದ್ದ ಹಣ ಖಾಲಿಯಾಗುವುದು ಖಂಡಿತ. ಇಂತಹ ಮೋಸದ ಜಾಲದಿಂದ ಅದೆಷ್ಟೋ ಯುವಕರು ಬೆತ್ತಲೆ ಆಗಿರುವ ಪ್ರಕರಣಗಳು ಆಗ್ಗಾಗೆ ಬೆಳಕಿಗೆ ಬರುತ್ತಿದೆ. ಇದೀಗ ಬೆಂಗಳೂರಿನಲ್ಲಿ ಇಂತಹದೇ ಘಟನೆಯೊಂದು ನಡೆದಿದೆ. ಕರ್ನಾಟಕದಲ್ಲಿ ಡೇಟಿಂಗ್ ಅಪ್ಲಿಕೇಶನ್‌ಗಳಿಂದ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಯುವಕನೊಬ್ಬ ಡೇಟಿಂಗ್ ಅಪ್ಲಿಕೇಶನ್‌ ಡೌನ್​​ಲೋಡ್​​ ಮಾಡಿಕೊಂಡು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಳಸಿ ರಚಿಸಲಾದ “ಇಶಾನಿ” ಹೆಸರಿನ ಪ್ರೊಫೈಲ್​​ನಿಂದ ಬಂದ​​​​ ರಿಕ್ವೆಸ್ಟ್​​ಗೆ ಕ್ಲಿಕ್ ಮಾಡಿದ್ದಾನೆ. ಈ “ಇಶಾನಿ” ಎಂಬ ಎಐ ಹುಡುಗಿ, ಯುವಕನನ್ನು ವಿವಸ್ತ್ರಗೊಳಿಸಿ, ಆ ವಿಡಿಯೋವನ್ನು ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಇದರಿಂದ ಭಯಗೊಂಡ ಯುವಕ ನಕಲಿ ಖಾತೆಗೆ ಒಟ್ಟು 1.5 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದಾನೆ.

ಈಜಿಪುರದ ಈ ಯುವಕ, ಖಾಸಗಿ ಸಂಸ್ಥೆಯಲ್ಲಿ ಕ್ಲೌಡ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಜನವರಿ 5 ರಂದು ಡೇಟಿಂಗ್ ಅಪ್ಲಿಕೇಶನ್ ಆ್ಯಪ್​​​ನಲ್ಲಿ ಪ್ರೊಫೈಲ್ ರಚಿಸಿದ ತಕ್ಷಣ ಇಶಾನಿ ಎಂಬ ಯುವತಿಯಿಂದ ರಿಕ್ವೆಸ್ಟ್ ಬಂದಿದೆ. ಇಬ್ಬರು ಕೂಡ ಏಕಾಂತವಾಗಿ ಮಾತನಾಡಲು ಶುರು ಮಾಡಿದ್ದರು. ಖಾಸಗಿ ವಿಚಾರಗಳನ್ನು ಹಂಚಿಕೊಂಡಿದ್ದರು. ನಂತರ ಈ ಇಬ್ಬರು ಕೂಡ ಮೊಬೈಲ್​​ ನಂಬರ್​​ ಶೇರ್​​ ಮಾಡಿಕೊಂಡು ಅಲ್ಲಿಯೂ ಮಾತನಾಡಲು ಶುರು ಮಾಡಿಕೊಂಡಿದ್ದರು ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಅದೇ ದಿನ ಈ ಯುವಕನಿಗೆ ಯುವತಿ ಕಡೆಯಿಂದ ವಿಡಿಯೋ ಕಾಲ್​​ ಬಂದಿದೆ. ಬಟ್ಟೆಯನ್ನು ಬೆಚ್ಚಿ, ಆತನ ಮುಂದೆ ಬೆತ್ತಲೆಯಾಗಿದ್ದಾಳೆ. ನೀನು ಬಟ್ಟೆ ಬಿಚ್ಚು ಎಂದು ಹೇಳಿ, ಅವನನ್ನು ಬೆತ್ತಲೆ ಮಾಡಿದ್ದಾಳೆ. ಆತನ ಕೂಡ ಹುಡುಗಿಯ ತೆವಲಿನಲ್ಲಿ ಬಟ್ಟೆಯನ್ನು ಬಿಚ್ಚಿದ್ದಾನೆ. ವಿಡಿಯೋ ಕರೆ ಕೊನೆಗೊಳ್ಳುತ್ತದೆ. ಅಲ್ಲಿಯವರೆಗೆ ತಾನು ಮತ್ತು ಆಕೆ ಬೆತ್ತಲೆ ಆಗಿರುವ ವಿಡಿಯೋ ರೆಕಾರ್ಡ್​​ ಆಗಿದೆ ಎಂಬುದು ಆತನಿಗೆ ತಿಳಿದಿರುವುದಿಲ್ಲ. ಸ್ವಲ್ಪ ಸಮಯದ ನಂತರ, ಟೆಕ್ಕಿಗೆ ವೀಡಿಯೊ ಕರೆಯ ಸಮಯದಲ್ಲಿ ಸೆರೆಹಿಡಿಯಲಾದ ತನ್ನ ಖಾಸಗಿ ಚಿತ್ರಗಳ ಬಗ್ಗೆ ಸಂದೇಶ ಬಂದಿದೆ. ಈ ವೇಳೆ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಒಂದು ವೇಳೆ ಹಣ ನೀಡದಿದ್ದರೆ ಈ ವಿಡಿಯೋವನ್ನು ನಿನ್ನ ಸ್ನೇಹಿತರು, ಕುಟುಂಬಕ್ಕೆ ಕಳುಹಿಸಿವೆ. ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಳ್ಳುವೆ ಎಂದು ಹೇಳಿದ್ದಾಳೆ. ಇದರಿಂದ ಭಯಗೊಂಡ ಯುವಕ ಮೊದಲು 60 ಸಾವಿರ ಹಾಗೂ ನಂತರ 93,000 ರೂ.ಗಳನ್ನು ಕಳುಹಿಸಿದ್ದಾನೆ. ಇಷ್ಟು ಹಣ ನೀಡಿದ ನಂತರವೂ ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ ನಟಿ, ಉದ್ಯಮಿ ನಂಟಿನ ಕೇಸ್​ಗೆ ಬಿಗ್​​ ಟ್ವಿಸ್ಟ್: ಮಹತ್ವದ ಸಾಕ್ಷ್ಯ ಲಭ್ಯ

ಇದರಿಂದ ಬೇಸತ್ತು ಯುವಕ ತನ್ನ ಸ್ನೇಹಿತನಿಗೆ ಎಲ್ಲ ವಿಷಯ ಹೇಳಿದ್ದಾನೆ. ನಂತರ ಪೊಲೀಸರಿಗೆ ದೂರು ನೀಡಿದ್ದಾನೆ. ಅವರ ದೂರಿನ ಆಧಾರದ ಮೇಲೆ, ಕೇಂದ್ರ ಸೈಬರ್ ಅಪರಾಧ ಪೊಲೀಸ್ ಠಾಣೆಯು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ವಿಭಾಗಗಳು ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 308 (ಸುಲಿಗೆ) ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇನ್ನು ಈ ವಂಚನೆಗಾಗಿ ಎಐ ವಿಡಿಯೋವನ್ನು ಬಳಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಡೇಟಿಂಗ್ ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿದ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಆನ್‌ಲೈನ್‌ನಲ್ಲಿ ಅಪರಿಚಿತರೊಂದಿಗೆ ಸಂವಹನ ನಡೆಸುವಾಗ ಬಳಕೆದಾರರು ಜಾಗರೂಕರಾಗಿರಬೇಕು ಎಂದು ಈ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ