ಬೆಂಗಳೂರಿಗೆ ನಿರಾಶೆ: ನಮ್ಮ ಮೆಟ್ರೋ ಹಳದಿ ಮಾರ್ಗ ವರ್ಷದ ಅಂತ್ಯಕ್ಕೆ ಕಾರ್ಯಾರಂಭ !

ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಪರೀಕ್ಷೆಯು ಮುಂದಿನ ದಿನಗಳಲ್ಲಿ ನಡೆಯಲಿದೆ. ಇಂದು ಮತ್ತು ನಾಳೆ (ಮಾ. 7 ಮತ್ತು 8) ರಂದು ಸಿಗ್ನಲಿಂಗ್​ ಪರೀಕ್ಷೆ ನಡೆಯಲಿದೆ. 19.5 ಕಿಮೀ ನಮ್ಮ ಮೆಟ್ರೋ ಹಳದಿ ಮಾರ್ಗ ಆರ್​ವಿ ರೋಡ್​ನಿಂದ ಬೊಮ್ಮಸಂದ್ರ ನಡುವೆ ಸಂಪರ್ಕ ಕಲ್ಪಿಸುತ್ತದೆ.

ಬೆಂಗಳೂರಿಗೆ ನಿರಾಶೆ: ನಮ್ಮ ಮೆಟ್ರೋ ಹಳದಿ ಮಾರ್ಗ ವರ್ಷದ ಅಂತ್ಯಕ್ಕೆ ಕಾರ್ಯಾರಂಭ !
ನಮ್ಮ ಮೆಟ್ರೋ
Follow us
ವಿವೇಕ ಬಿರಾದಾರ
|

Updated on: Mar 07, 2024 | 11:25 AM

ಬೆಂಗಳೂರು, ಮಾರ್ಚ್​ 07: ಬಹು ನಿರೀಕ್ಷಿತ ನಮ್ಮ ಮೆಟ್ರೋ (Namma Metro) ಹಳದಿ ಮಾರ್ಗ (Yellow Line) ತಡವಾಗಿ ಕಾರ್ಯಾರಂಭ ಮಾಡಲಿದೆ. ಈ ವರ್ಷದ ಅಂತ್ಯದ ವೇಳೆಗೆ ಹಳದಿ ಮಾರ್ಗ ಕಾರ್ಯಾರಂಭವಾಗಲಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ಇಂಡಿಯಾ.ಕಾಮ್​ ವರದಿ ಮಾಡಿದೆ. ಹಳದಿ ಮಾರ್ಗ ಕಾರ್ಯಾರಂಭಕ್ಕೆ 2024ರ ಜುಲೈ ಡೆಡ್​​ ಲೈನ್​ ನೀಡಲಾಗಿತ್ತು. ಆದರೆ ಇನ್ನು ಹಲವು ಸುತ್ತಿನ ಪರೀಕ್ಷೆಗಳು ಆಗಬೇಕಾದ ಹಿನ್ನೆಲೆಯಲ್ಲಿ ಮತ್ತು ಕಾರ್ಯಾರಂಭಕ್ಕೆ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಹಳದಿ ಮಾರ್ಗ ಕಾರ್ಯ ತಡವಾಗಿ ಆರಂಭವಾಗಲಿದೆ.

ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಪರೀಕ್ಷೆಯು ಮುಂದಿನ ದಿನಗಳಲ್ಲಿ ನಡೆಯಲಿದೆ. ಇಂದು ಮತ್ತು ನಾಳೆ (ಮಾ. 7 ಮತ್ತು 8) ರಂದು ಸಿಗ್ನಲಿಂಗ್​ ಪರೀಕ್ಷೆ ನಡೆಯಲಿದೆ. 19.5 ಕಿಮೀ ನಮ್ಮ ಮೆಟ್ರೋ ಹಳದಿ ಮಾರ್ಗ ಆರ್​ವಿ ರೋಡ್​ನಿಂದ ಬೊಮ್ಮಸಂದ್ರ ನಡುವೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗ ಪ್ರಮುಖ ಸ್ಥಳಗಳಾದ ಸಿಲ್ಕ್​ ಬೋರ್ಡ್​​ ಜಂಕ್ಷನ್​, ಇಲೆಕ್ಟ್ರಾನಿಕ್​ ಸಿಟಿ ಮತ್ತು ಜಯದೇವ ಆಸ್ಪತ್ರೆ ಮೂಲಕ ಹಾದು ಹೋಗುತ್ತದೆ.

​ಸದ್ಯ ಬೊಮ್ಮಸಂದ್ರ ಮತ್ತು ಸಿಲ್ಕ್​ ಬೋರ್ಡ್ ಮಧ್ಯೆ​ ಮಾತ್ರ ಹಳದಿ ಮಾರ್ಗದ ಮೆಟ್ರೋ ಟ್ರೈಲ್​ ರನ್ ನಡೆಸಲಾಗುತ್ತದೆ. ಮುಂದಿನ ದಿನಗಳಲ್ಲಿ ಅಂದರೆ ಎಪ್ರಿಲ್​​ ಮಧ್ಯ ಭಾಗದಲ್ಲಿ ಸಂಪೂರ್ಣ ಮಾರ್ಗದಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಬಿಎಂಆರ್​ಸಿಎಲ್​ನ ಪ್ರಾಜೆಕ್ಟ್ ಮ್ಯಾನೇಜರ್ ಜಿತೇಂದ್ರ ಝಾ ತಿಳಿಸಿದ್ದಾರೆ.

ಫೆಬ್ರವರಿ 2020 ರಲ್ಲಿ, ಚೀನಾದ ಸರ್ಕಾರಿ ಸ್ವಾಮ್ಯದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್ ಸುಮಾರು ನಾಲ್ಕು ವರ್ಷಗಳಲ್ಲಿ BMRCL ಗೆ 216 ಕೋಚ್‌ಗಳನ್ನು (36 ರೈಲು ಸೆಟ್‌ಗಳು) ಪೂರೈಸುವ ಒಪ್ಪಂದವನ್ನು ಪಡೆದಿದೆ. ಈ ರೈಲುಸೆಟ್‌ಗಳಲ್ಲಿ 21 ಪರ್ಪಲ್ ಮತ್ತು ಗ್ರೀನ್ ಲೈನ್‌ಗಳಲ್ಲಿ ಮತ್ತು ಉಳಿದವುಗಳನ್ನು ಹಳದಿ ಲೈನ್‌ನಲ್ಲಿ ನಿಯೋಜನೆಗೊಂಡಿವೆ.

ಇದನ್ನೂ ಓದಿ: Namma Metro: ಹೇಗಿದೆ ನೋಡಿ ಮೊದಲ ಚಾಲಕ ರಹಿತ ನಮ್ಮ ಮೆಟ್ರೋ ರೈಲು

ಮೈಸೂರು ರಸ್ತೆಯ ಚಲ್ಲಘಟ್ಟದಿಂದ ಬಿಡದಿ ತನಕ ವಿಸ್ತರಣೆ

ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿರುವುದನ್ನ ಕಂಡ ಬಿಎಂಆರ್​ಸಿಎಲ್, ಬಿಡದಿ ಸೇರಿ ಬೆಂಗಳೂರು ನಗರದಾಚೆಯ ಸಪ್ತ ಊರುಗಳಿಗೆ ಮೆಟ್ರೋ ಸಂಪರ್ಕ ಕಲ್ಪಿಸಲು ಮುಂದಾಗಿದೆ. ಹೀಗಾಗಿ 118 ಕಿ.ಮೀ ಉದ್ದದ ನಾಲ್ಕನೇ ಹಂತದ ಮೆಟ್ರೋ ಸಂಪರ್ಕದ ಕಾರ್ಯ ಸಾಧ್ಯತೆಯ ಅಧ್ಯಯನ ವರದಿಗಾಗಿ ಇತ್ತೀಚೆಗೆ ಟೆಂಡರ್ ಆಹ್ವಾನಿಸಿತ್ತು.

ಮೈಸೂರು ರಸ್ತೆಯ ಚಲ್ಲಘಟ್ಟದಿಂದ ಬಿಡದಿ ತನಕ 15 ಕಿಲೋ ಮೀಟರ್ ವಿಸ್ತರಣೆಗೆ ಪ್ಲಾನ್. ಜೊತೆಗೆ ಕನಕಪುರ ರಸ್ತೆಯ ರೇಷ್ಮೆ ಸಂಸ್ಥೆಯಿಂದ ಹಾರೋಹಳ್ಳಿ ತನಕ‌ 24 ಕಿಲೋ ಮೀಟರ್, ಹಾಗೂ ಬೊಮ್ಮಸಂದ್ರದಿಂದ ಅತ್ತಿಬೆಲೆಗೆ 11 ಕಿಲೋ ಮೀಟರ್ ಮೆಟ್ರೋ ರೈಲು ಸೇವೆ ಕಲ್ಪಿಸಲು ಅಧ್ಯಯನ ನಡೆಸಲಾಗುತ್ತೆ.‌ ಹಾಗೆಯೇ, ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರ ತನಕ‌ 32.15 ಕಿಲೋ ಮೀಟರ್, ಜೊತೆಗೆ ಸರ್ಜಾಪುರದಿಂದ ಹೆಬ್ಬಾಳ ತನಕ‌ 37 ಕಿಲೋ ಮೀಟರ್, ಹೊಸಹಳ್ಳಿ ಮೆಟ್ರೋ ನಿಲ್ದಾಣದಿಂದ ಕಡಬಗೆರೆಗೆ 12.5 ಕಿಲೋ ಮೀಟರ್, ಹಾಗೂ ಕಾಳೇನ ಅಗ್ರಹಾರದಿಂದ ಆನೇಕಲ್‌, ಅತ್ತಿಬೆಲೆ, ಸರ್ಜಾಪುರ, ವರ್ತೂರು ಮಾರ್ಗವಾಗಿ ಕಾಡುಗೋಡಿ ಟ್ರೀ ಪಾರ್ಕ್‌ವರೆಗೆ 68 ಕಿಲೋ‌ಮೀಟರ್ ರೈಲು ಮಾರ್ಗ ನಿರ್ಮಿಸಲು ಕಾರ್ಯ ಸಾಧ್ಯತಾ ವರದಿ ತಯಾರಿಸಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್