Sign In

By signing in or creating an account, you agree with Associated Broadcasting Company's Terms & Conditions and Privacy Policy.

Rakesh Bhatt: ಅಮೆರಿಕದ ಡಿಎನ್​ಸಿ ಸಮಾವೇಶದಲ್ಲಿ ಬೆಂಗಳೂರಿನ ಪಂಡಿತ ರಾಕೇಶ್​ ಭಟ್ ಅವರಿಂದ ವೇದ ಮಂತ್ರ ಘೋಷ

ಅಮೆರಿಕದಲ್ಲಿ ನಡೆದ ಡಿಎನ್​ಸಿ ಸಮಾವೇಶದಲ್ಲಿ ಬೆಂಗಳೂರು ಮೂಲದ ರಾಕೇಶ್​ ಭಟ್​ ಅವರಿಂದ ವೇದ ಮಂತ್ರ ಘೋಷ ಮೊಳಗಿತು. ಪಠಣದ ನಂತರ ರಾಕೇಶ್ ಭಟ್ ವೇದ ಮಂತ್ರವನ್ನು ಅನುವಾದಿಸಿದರು. ಅವರು ಸಂಸ್ಕೃತದಲ್ಲಿ ಶ್ಲೋಕಗಳನ್ನು ಪಠಿಸಿದರು ಮತ್ತು ನಂತರ ಅವರ ಇಂಗ್ಲಿಷ್ ಅನುವಾದ ಮಾಡಿದರು.

Rakesh Bhatt: ಅಮೆರಿಕದ ಡಿಎನ್​ಸಿ ಸಮಾವೇಶದಲ್ಲಿ ಬೆಂಗಳೂರಿನ ಪಂಡಿತ ರಾಕೇಶ್​ ಭಟ್ ಅವರಿಂದ ವೇದ ಮಂತ್ರ ಘೋಷ
ರಾಕೇಶ್​ ಭಟ್
Follow us
ನಯನಾ ರಾಜೀವ್
|

Updated on:Aug 22, 2024 | 11:22 AM

ಚಿಕಾಗೋದಲ್ಲಿ ನಡೆಯುತ್ತಿರುವ ಡೆಮಾಕ್ರೆಟಿಕ್ ನ್ಯಾಷನಲ್ ಸಮಾವೇಶದ ಮೂರನೇ ದಿನದಂದು ವೇದ ಮಂತ್ರ ಘೋಷ ಮೊಳಗಿತು. ಬೆಂಗಳೂರಿನ ಪ್ರತಿಷ್ಠಿತ ಅರ್ಚಕ ಪಂಡಿತ ರಾಕೇಶ್​ ಭಟ್(Rakesh Bhatt) ಅವರು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು.

ಪಠಣದ ನಂತರ ರಾಕೇಶ್ ಭಟ್ ವೇದ ಮಂತ್ರವನ್ನು ಅನುವಾದಿಸಿದರು. ಅವರು ಸಂಸ್ಕೃತದಲ್ಲಿ ಶ್ಲೋಕಗಳನ್ನು ಪಠಿಸಿದರು ಮತ್ತು ನಂತರ ಅವರ ಇಂಗ್ಲಿಷ್ ಅನುವಾದ ಮಾಡಿದರು. ನಮ್ಮಲ್ಲಿ ಭಿನ್ನಾಭಿಪ್ರಾಯಗಳಿರಬಹುದು, ಆದರೆ ರಾಷ್ಟ್ರದ ವಿಷಯಕ್ಕೆ ಬಂದಾಗ ನಾವು ಒಗ್ಗಟ್ಟಾಗಿರಬೇಕು ಮತ್ತು ಇದು ಎಲ್ಲರಿಗೂ ನ್ಯಾಯದ ಕಡೆಗೆ ನಮ್ಮನ್ನು ಕರೆದೊಯ್ಯುತ್ತದೆ ಎಂದರು.

ರಾಕೇಶ್ ಭಟ್ ಸಾಂಪ್ರದಾಯಿಕ ಮಾಧ್ವ ಬ್ರಾಹ್ಮಣ ಕುಟುಂಬದಿಂದ ಬಂದವರು. ರಾಕೇಶ್ ಭಟ್ ಬೆಂಗಳೂರಿನ ನಿವಾಸಿಯಾಗಿದ್ದು, ನಂತರ ಅವರು ಅಮೆರಿಕಕ್ಕೆ ತೆರಳಿದ್ದರು. ರಾಕೇಶ್ ಭಟ್ ಅವರು ತಮ್ಮ ಗುರುಗಳಾದ ಉಡುಪಿ ಅಷ್ಟಮಠದ ಶ್ರೀ ಪೇಜಾವರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ, ಅಲ್ಲಿ ಅವರು ತಂತ್ರಸಾರ (ಮಧ್ವ) ಆಗಮಗಳು ಮತ್ತು ಋಗ್ವೇದವನ್ನು ಅಧ್ಯಯನ ಮಾಡಿದ್ದಾರೆ.

ಮತ್ತಷ್ಟು ಓದಿ: ಡೆಮಾಕ್ರೆಟಿಕ್ ಸಮಾವೇಶದಲ್ಲಿ ವೇದಿಕೆ ಮೇಲೆ ಕಣ್ಣೀರು ಹಾಕಿದ ಅಮೆರಿಕ ಮಾಜಿ ಅಧ್ಯಕ್ಷ ಜೋ ಬೈಡನ್

ರಾಕೇಶ್ ಭಟ್ ಅವರು ಸಂಸ್ಕೃತ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ. ರಾಕೇಶ್ ಭಟ್ ಅವರು ಬೆಂಗಳೂರಿನ ಜಯಚಾಮರಾಜೇಂದ್ರ ಕಾಲೇಜು ಮತ್ತು ಆಸ್ಟೀನ್ ಕಾಲೇಜಿನಲ್ಲಿ ಓದಿದ್ದಾರೆ.

ಜುಲೈ 2013 ರಲ್ಲಿ ಶ್ರೀ ಶಿವ ವಿಷ್ಣು ಮಂದಿರದಲ್ಲಿ (SSVT) ನೇಮಕಗೊಳ್ಳುವ ಮೊದಲು, ರಾಕೇಶ್ ಭಟ್ ಅವರು ಉಡುಪಿ ಅಷ್ಟಮಠದಲ್ಲಿ ಕೆಲಸ ಮಾಡಿದರು ಮತ್ತು ಸೇಲಂ ರಾಘವೇಂದ್ರ ಸ್ವಾಮಿ ಕೊಯಿಲ್ ಮತ್ತು ಬದರಿನಾಥದಲ್ಲಿ ತಾತ್ಕಾಲಿಕ ಪಾತ್ರಗಳನ್ನು ನಿರ್ವಹಿಸಿದರು.

ತಮಿಳು, ತೆಲುಗು, ಕನ್ನಡ, ಹಿಂದಿ, ಇಂಗ್ಲಿಷ್, ತುಳು ಮತ್ತು ಸಂಸ್ಕೃತ ಭಾಷೆಗಳಲ್ಲಿ ರಾಕೇಶ್ ಭಟ್ ಅವರ ಪ್ರಾವೀಣ್ಯತೆಯು ವಿಭಿನ್ನ ಸಂಸ್ಕೃತಿಗಳು ಮತ್ತು ಧರ್ಮಗಳ ಬಗ್ಗೆ ಅವರ ವ್ಯಾಪಕ ಜ್ಞಾನವನ್ನು ಪ್ರತಿಬಿಂಬಿಸುತ್ತದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಿಸಲು ಡಿಎನ್​ಸಿಯನ್ನು ಆಯೋಜಿಸಲಾಗಿದೆ.

ಬೆಂಗಳೂರಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:18 am, Thu, 22 August 24