ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ; ನಿಮ್ಮ ಏರಿಯಾದಲ್ಲೂ ಪವರ್ ಕಟ್ ಇದೆಯಾ? ಇಲ್ಲಿದೆ ಮಾಹಿತಿ

ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ; ನಿಮ್ಮ ಏರಿಯಾದಲ್ಲೂ ಪವರ್ ಕಟ್ ಇದೆಯಾ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ

Power Cut in Bengaluru: ಬೆಂಗಳೂರು ನಗರದ ವಿವಿಧೆಡೆ ಇಂದು ಅಂದರೆ ಜನವರಿ 10ರ ಸೋಮವಾರದಂದು ನಿರ್ವಹಣೆ ಮತ್ತು ಇತರ ಕಾರಣಗಳಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಕುರಿತ ಮಾಹಿತಿ ಇಲ್ಲಿದೆ.

TV9kannada Web Team

| Edited By: shivaprasad.hs

Jan 10, 2022 | 6:00 AM

ಬೆಂಗಳೂರು: ನಗರದಲ್ಲಿ ಇಂದು ಅಂದರೆ ಜನವರಿ 10ರ ಸೋಮವಾರದಂದು ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಈ ಕುರಿತು ಮಾಹಿತಿ ನೀಡಿದ್ದು, ನಿರ್ವಹಣೆ ಮತ್ತು ಇತರ ಕಾರಣಗಳಿಂದಾಗಿ ವಿದ್ಯುತ್ ಕಡಿತ ಉಂಟಾಗಲಿದೆ ಎಂದಿದೆ. ಯಾವ ಯಾವ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬ ಮಾಹಿತಿ ಇಲ್ಲಿದೆ. ಇಂದು (ಸೋಮವಾರ, ಜ.10) ಬೆಂಗಳೂರು ದಕ್ಷಿಣ ವಲಯದ ಪೊಲೀಸ್ ಕ್ವಾರ್ಟರ್ಸ್, ಯೂನಿಟಿ ಬಿಲ್ಡಿಂಗ್, ಟೌನ್ ಹಾಲ್, ರವೀಂದ್ರ ಕಲಾಕ್ಷೇತ್ರ, ಜರಗನಹಳ್ಳಿ, ಕೃಷ್ಣ ದೇವರಾಯ ನಗರ, ಬಿಕಿಸಿಪುರ, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ಟೀಚರ್ಸ್ ಕಾಲೋನಿ, ಕನಕ ಲೇಔಟ್, ಗೌಡನಪಾಳ್ಯ, ಸಮೃದ್ಧಿ ಲೇಔಟ್, ವಿಟ್ಲ ನಗರ, ವಸಂತ ನಗರ, ಸಾರಾ ವಲ್ಲಬ ನಗರ, ವಸಂತಪುರ ಮುಖ್ಯ ರಸ್ತೆ, ಜೆಪಿ ನಗರ 6ನೇ ಹಂತ, ಪುಟ್ಟೇನಹಳ್ಳಿ, ಕಿಮ್ಸ್ ಕಾಲೇಜು ಸುತ್ತಮುತ್ತ, ಬನಶಂಕರಿ 2ನೇ ಹಂತ, ಚನ್ನಮ್ಮನಕೆರೆ ಅಚ್ಚುಕಟ್ಟು, ಜೆಪಿ ನಗರ 2ನೇ ಹಂತ, ಜೆಪಿ ನಗರ 3ನೇ ಹಂತ, ಜೆಪಿ ನಗರ 4ನೇ ಹಂತ, ಜೆಪಿ ನಗರ 5ನೇ ಹಂತ, ಡಾಲರ್ಸ್ ಲೇಔಟ್, ದೊರೆಸಾನಿ ಪಾಳ್ಯ, ಕತ್ರಿಗುಪ್ಪೆ ಮುಖ್ಯ ರಸ್ತೆ, ಕತ್ರಿಗುಪ್ಪೆ ಗ್ರಾಮ ಪ್ರದೇಶ, ಐಟಿಪಿಎಲ್ ಮುಖ್ಯರಸ್ತೆ, ಬೇಗೂರು ಮುಖ್ಯರಸ್ತೆ, ಬಿಟಿಎಂ 4ನೇ ಹಂತ, ಬಿಡಿಎ ಮೊದಲ ಹಂತ, ಬಿಡಿಎ 8ನೇ ಹಂತ, ಎಂಎಸ್ ರಾಮ್ಹೈ ನಗರ, ಸುರಭಿ ನಗರ, ಸಿಂಗಸಂದ್ರ, ಕಸವನಹಳ್ಳಿ ಮುಖ್ಯರಸ್ತೆಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರು ಪಶ್ಚಿಮ ವಲಯದ ಹನುಮಂತನಗರ, ಚನ್ನಸಂದ್ರ, ಗಂಗೊಂಡನ ಹಳ್ಳಿ, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಭೂಮಿಕಾ ಲೇಔಟ್, ಬಿಎಚ್‌ಇಎಲ್ ಲೇಔಟ್, ಹರ್ಷಾ ಲೇಔಟ್, ವಿದ್ಯಾಪೀಠ ರಸ್ತೆ, ಡಿ ಗ್ರೂಪ್ ಲೇಔಟ್, ಅಂದ್ರಹಳ್ಳಿ ಮುಖ್ಯರಸ್ತೆ, ಗಾಂಧಿ ನಗರ, ದುಬಾಸಿಪಾಳ್ಯ, ದ್ವಾರಕಬಸ ರೋಡ್ ಹಾಗೂ ಬಿಡಿಎ ಕಾಲೋನಿಯಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು ಪೂರ್ವ ವಲಯದ ಉದಯ್ ನಗರ, ಕಸ್ತೂರಿ ನಗರ, ಎ ನಾರಾಯಣಪುರ, ಕೆಜಿ ಪುರ ಮುಖ್ಯ ರಸ್ತೆ, ಎಚ್‌ಆರ್‌ಬಿಆರ್ ಲೇಔಟ್ 2 ನೇ ಬ್ಲಾಕ್, ಗೋವಿಂದಪುರ, ಬೈರಪ್ಪ ಲೇಔಟ್, ಗೋವಿಂದಪುರ ಗ್ರಾಮ, ವಿಎಚ್‌ಬಿಸಿಎಸ್ ಲೇಔಟ್, ಬೈರತಿ, ಬೈರತಿ ಗ್ರಾಮ ಕನಕಶ್ರೀ ಲೇಔಟ್, ನಾಗನಹಳ್ಳಿ, ನಾಗನಹಳ್ಳಿ ಮುಖ್ಯರಸ್ತೆ, ನಾಗನಹಳ್ಳಿ ಮುಖ್ಯರಸ್ತೆ, ನಾಗನಹಳ್ಳಿ, ನಾಗನಹಳ್ಳಿ ಮುಖ್ಯರಸ್ತೆ. ಮತ್ತು ಭಟ್ಟರಹಳ್ಳಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಉತ್ತರ ವಲಯದಲ್ಲಿ ಬೆಳಗ್ಗೆ 9.30ರಿಂದ ಸಂಜೆ 6ರವರೆಗೆ ವಿದ್ಯುತ್ ಕಡಿತವಾಗಲಿದೆ. ಈ ಪ್ರದೇಶಗಳಲ್ಲಿ ರಾಜಾಜಿನಗರ, ನೀಲಗಿರಿ ಪಾಪಣ್ಣ ಬ್ಲಾಕ್, ಬಿಇಎಲ್ ಸೌತ್ ಕಾಲೋನಿ, ಬಿಇಎಲ್ ನಾರ್ತ್ ಕಾಲೋನಿ, ಕೆನರಾ ಬ್ಯಾಂಕ್ ಲೇಔಟ್ ಭಾಗ, ಕೆಂಪೇಗೌಡ ನಗರ, ಯಲಹಂಕ ಓಲ್ಡ್ ಟೌನ್, ಶೇಟಿಹಳ್ಳಿ, ಮಲ್ಲಸಂದ್ರ, ಟಿ ದಾಸರಹಳ್ಳಿ, ನೃಪತುಂಗ ರಸ್ತೆ, ಕಲ್ಯಾಣ ನಗರ ಸುತ್ತಮುತ್ತ, ಮಹಾಲಕ್ಷ್ಮಿ ಪುರಂ ನಂದಿನಿ ಲೇಔಟ್ ಸೇರಿವೆ.

ಜನವರಿ 11ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ: ಬೆಂಗಳೂರು ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್‌ ಕಡಿತವಾಗಲಿದೆ. ಅದರಲ್ಲಿ ರಾಮಯ್ಯ ಕಾಂಪ್ಲೆಕ್ಸ್ ಸ್ವಾಮಿ ವಿವೇಕಾನಂದ ರಸ್ತೆ, ಕೆಜಿ ಪುರ ಮುಖ್ಯ ರಸ್ತೆ, ಎನ್‌ಸಿ ಕಾಲೋನಿ, ಪಿಕೆ ಕಾಲೋನಿ, ಬಾಣಸವಾಡಿ ಮುಖ್ಯ ರಸ್ತೆ, ಎಚ್‌ಆರ್‌ಬಿಆರ್ ಲೇಔಟ್ 3ನೇ ಬ್ಲಾಕ್, ದೊಡ್ಡ ಬಾಣಸವಾಡಿ, ಆರ್‌ಎಂ ನಗರ ಮುಖ್ಯ ರಸ್ತೆ, ಬಾಣಸವಾಡಿ, ವಾಜಿದ್ ಲೇಔಟ್, ನಾರಾಯಣಪುರ, ಕಾವೇರಿ ಲೇಔಟ್, ನಾಗವಾರ, ಎಂ. ರಾಮಯ್ಯ ಉತ್ತರ ನಗರ, ಕೆ ನಾರಾಯಣಪುರ, ಭುವನೇಶ್ವರಿ ನಗರ, ದಾಸರಹಳ್ಳಿ ಕಾಲೋನಿ, ದಾಸರಹಳ್ಳಿ ಗ್ರಾಮ, ವರ್ತೂರು ಮುಖ್ಯ ರಸ್ತೆ, ಕೊಡಿಗೇಹಳ್ಳಿ ಮತ್ತು ಹೂಡಿ ಪ್ರದೇಶಗಳು ಸೇರಿವೆ.

ಬೆಂಗಳೂರು ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ನಂಜಪ್ಪ ವೃತ್ತ, ಬಿಕಿಸಿಪುರ, ಇಸ್ರೋ ಲೇಔಟ್, ವಿಟ್ಲ ನಗರ, ಕುಮಾರಸ್ವಾಮಿ ಲೇಔಟ್, ಗೌಡನಪಾಳ್ಯ, ಸಿದ್ದಾಪುರ, ಸೋಮೇಶ್ವರನಗರ, ಜೆ.ಪಿ.ನಗರ 1ನೇ ಹಂತ, ಶಾಕಾಂಬರಿ ನಗರ, ಸಾರಕ್ಕಿ ಮಾರುಕಟ್ಟೆ, ಲಕ್ಷ್ಮಿ ನಗರ, ಚುಂಚಘಟ್ಟ ಮುಖ್ಯರಸ್ತೆ, ರಾಜೀವ್ ಗಾಂಧಿ ರಸ್ತೆ, ರಾಜೀವ್ ನಗರ, ಜೆ.ಪಿ.ನಗರ 5ನೇ ಹಂತ, ವಿನಾಯಕನಗರ, ಭುವನೇಶ್ವರಿ ನಗರ, ಕಾವೇರಿ ನಗರ, ವಿವೇಕಾನಂದ ನಗರ, ಕತ್ರಿಗುಪ್ಪೆ ಮುಖ್ಯರಸ್ತೆ, ಕತ್ರಿಗುಪ್ಪೆ ಪೂರ್ವ, ಬನಶಂಕರಿ 3ನೇ ಹಂತ, ಮುನೇಶ್ವರ ನಗರ, ಕದಿರೇನಹಳ್ಳಿ, ಉತ್ತರಹಳ್ಳಿ ಮುಖ್ಯರಸ್ತೆ, ಮಾರತಹಳ್ಳಿ, ಕಾವೇರಿ ಲೇಔಟ್, ಸಿ ಬಾಲಾಜಿ ಟೆಂಪಲ್ ಲೇಔಟ್, ವಿನಾಯಕ ದೇವಸ್ಥಾನ ರಸ್ತೆ ಥಿಯೇಟರ್ ರಸ್ತೆ, ಐಟಿಪಿಎಲ್ ಮುಖ್ಯರಸ್ತೆ, ಹೊಂಗಸಂದ್ರ, ಬೇಗೂರು ಮುಖ್ಯರಸ್ತೆ, ಬಿಡಿಎ 2ನೇ ಹಂತ ಮತ್ತು ಜುನ್ನಸಂದ್ರ ಮುಖ್ಯರಸ್ತೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬಾಧಿತ ಪ್ರದೇಶಗಳಲ್ಲಿ ಆವಲಹಳ್ಳಿ, ಬಿಎಚ್‌ಇಎಲ್ ಲೇಔಟ್, ದೊಡ್ಡಬೆಲೆ ರಸ್ತೆ, ಬಿಎಚ್‌ಇಎಲ್ ಲೇಔಟ್, ಕೃಷ್ಣ ಗಾರ್ಡನ್, ಅಂದ್ರಹಳ್ಳಿ, ಮುನಿನಗರ, ಸುಂಕದಕಟ್ಟೆ, ಗಾಂಧಿ ನಗರ, ಬಿಡಿಎ ಏರಿಯಾ ಬ್ಲಾಕ್ -1, ಭುವನೇಶ್ವರ ನಗರ, ದೊಡ್ಡಬಸ್ತಿ ಮುಖ್ಯರಸ್ತೆ, ಕುವೆಂಪು ಮುಖ್ಯರಸ್ತೆ, ಜಿಕೆ ಗಲ್ಲಿ ರಸ್ತೆ ಮತ್ತು ಗಂಗಾನಗರ ಸೇರಿವೆ.

ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಈ ಪ್ರದೇಶಗಳಲ್ಲಿ ಜೆಪಿ ಪಾರ್ಕ್, ಎಚ್‌ಎಂಟಿ ಲೇಔಟ್, ನ್ಯೂ ಬಿಇಎಲ್ ರಸ್ತೆ, ಅಬ್ಬಿಗೆರೆ ರಸ್ತೆ, ಜಜುರಿಯಾ ಕಾಲೋನಿ, ಪೆರಿಯಾರ್ ನಗರ, ಡಿಜೆ ಹಳ್ಳಿ, ಕೆಎಚ್‌ಬಿ ಕ್ವಾರ್ಟರ್ಸ್, ಹೆಗ್ಡೆ ನಗರ, ಆರ್‌ಟಿ ನಗರ, ಭೂಪಸಂದ್ರ, ಶೇಟಿಹಳ್ಳಿ, ಮಲ್ಲಸಂದ್ರ, ಹೆಸರಘಟ್ಟ ಮುಖ್ಯರಸ್ತೆ, ಭುವನೇಶ್ವರಿ ನಗರ, ಟಿ ದಾಸರಹಳ್ಳಿ ಮಹಾಲಕ್ಷ್ಮಿ ಪುರಂ, ಲಕ್ಷ್ಮಿ ದೇವಿ ನಗರ ಸ್ಲಂ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸೇರಿವೆ.

ಇದನ್ನೂ ಓದಿ:

ಕೊವಿಡ್ ನಿರ್ಬಂಧಗಳನ್ನು ಪರಿಷ್ಕರಿಸಿದ ಮಹಾರಾಷ್ಟ್ರ; ಶೇ 50 ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿವೆ ಬ್ಯೂಟಿ ಸಲೂನ್‌, ಜಿಮ್‌ಗಳು

Viral Video: ‘ನೀರಿದ್ದರೆ ಮಾತ್ರ ಜೀವನ!’; ಜಲಶಕ್ತಿ ಸಚಿವಾಲಯ ಹಂಚಿಕೊಂಡ ವಿಶೇಷ ವಿಡಿಯೋ ನೋಡಿ

Follow us on

Related Stories

Most Read Stories

Click on your DTH Provider to Add TV9 Kannada