ಬೆಸ್ಕಾಂನಿಂದ ಗುಡ್ ನ್ಯೂಸ್: ಬೆಂಗಳೂರಿನಲ್ಲಿ ಕಡಿಮೆಯಾಗಲಿದೆ ಪವರ್ ಕಟ್

ಕಂಬದ ಮೂಲಕ ಜೋತುಬೀಳುವ ವಿದ್ಯುತ್ ತಂತಿಗಳನ್ನು ನೆಲದಡಿಗೆ ಅಳವಡಿಸುವ ಬೆಸ್ಕಾಂನ ಮೊದಲ ಮತ್ತು ಎರಡನೇ ಹಂತದ ಕಾಮಗಾರಿಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿವೆ. 

ಬೆಸ್ಕಾಂನಿಂದ ಗುಡ್ ನ್ಯೂಸ್: ಬೆಂಗಳೂರಿನಲ್ಲಿ ಕಡಿಮೆಯಾಗಲಿದೆ ಪವರ್ ಕಟ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 15, 2022 | 11:33 AM

ಬೆಂಗಳೂರು: ನಗರದ ಹಲವೆಡೆ ಪವರ್​ ಕಟ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಷ್ಟು ದಿನ ಪವರ್​ ಕಟ್ ಅನುಭವಿಸಿದ ರಾಜಾಜಿನಗರ, ಇಂದಿರಾನಗರ, ಹೆಬ್ಬಾಳ, ರಾಜರಾಜೇಶ್ವರಿ ನಗರ, ಶಿವಾಜಿನಗರ ಮತ್ತು ಹೆಬ್ಬಾಳ ಪ್ರದೇಶಗಳಲ್ಲಿ ಪರಿಸ್ಥಿತಿ ಇದೀಗ ಸುಧಾರಿಸಿದೆ. ಕಂಬದ ಮೂಲಕ ಜೋತುಬೀಳುವ ವಿದ್ಯುತ್ ತಂತಿಗಳನ್ನು ನೆಲದಡಿಗೆ ಅಳವಡಿಸುವ ಬೆಸ್ಕಾಂನ ಮೊದಲ ಮತ್ತು ಎರಡನೇ ಹಂತದ ಕಾಮಗಾರಿಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿವೆ. ಅಕ್ಟೋಬರ್ 2021ರ ಹೊತ್ತಿಗೆ ಎರಡೂ ಹಂತದ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಒಂದಾದ ಮೇಲೆ ಒಂದರಂತೆ ಹಲವು ಅಡೆತಡೆಗಳು ಎದುರಾದ ಕಾರಣ ಕಾಮಗಾರಿ ತಡವಾಯಿತು. ರಸ್ತೆಗಳಲ್ಲಿ ಕಾಮಗಾರಿ ನಿರ್ವಹಿಸಲು ಮತ್ತು ರಸ್ತೆ ಅಗೆಯಲು ಅನುಮತಿ ಪಡೆದುಕೊಳ್ಳುವ ವಿಚಾರದಲ್ಲಿ ಒಂದಾದ ಮೇಲೆ ಒಂದರಂತೆ ಸಮಸ್ಯೆಗಳು ಎದುರಾದವು.

ರಸ್ತೆ ಅಗೆಯಲು ಅನುಮತಿ ಪಡೆದುಕೊಂಡ ನಂತರ ವಿವಿಧ ಸಂಸ್ಥೆಗಳಿಗೆ ಸೇರಿದ ಸ್ವತ್ತುಗಳಿಗೆ ಹಾನಿಯುಂಟು ಮಾಡುವುದಿಲ್ಲ ಎಂದು ಅವುಗಳಿಂದ ಅನುಮೋದನೆ ಪಡೆದುಕೊಳ್ಳಬೇಕಿತ್ತು. ಹೀಗಾಗಿ ಕಾಮಗಾರಿ ಆರಂಭವಾಗುವುದು ತಡವಾಯಿತು ಎನ್ನುವ ಬೆಸ್ಕಾಂನ ಹಿರಿಯ ಅಧಿಕಾರಿಯೊಬ್ಬರ ಹೇಳಿಕೆಯನ್ನು ‘ಡೆಕ್ಕನ್ ಹೆರಾಲ್ಡ್’ ದಿನಪತ್ರಿಕೆ ಪ್ರತಿಕ್ರಿಯಿಸಿದರು.

ಪರೀಕ್ಷೆಗಳು ಆರಂಭವಾದ ಹಿನ್ನೆಲೆಯಲ್ಲಿ ಲೋಡ್ ಶೆಡಿಂಗ್​ಗೆ ವಿರೋಧ ವ್ಯಕ್ತವಾದ ಕಾರಣ ಸುಮಾರು ಒಂದು ತಿಂಗಳು ಕಾಮಗಾರಿಯ ವೇಗಕ್ಕೆ ಕಡಿವಾಣ ಬಿದ್ದಿತ್ತು. ಪರೀಕ್ಷೆ ಅವಧಿಯಲ್ಲಿ ಮಕ್ಕಳ ಓದಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಬೆಸ್ಕಾಂ ಸಾಮಾನ್ಯವಾಗಿ ಪವರ್​ ಕಟ್ ಮಾಡುವುದಿಲ್ಲ. ಪರೀಕ್ಷೆ ಮುಗಿದ ನಂತರ ಮತ್ತೆ ಕಾಮಗಾರಿಯನ್ನು ಬೆಸ್ಕಾಂ ಆರಂಭಿಸಿತು.

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಜೂನ್ ತಿಂಗಳಿನಿಂದ ಮಳೆ ಬಿರುಸಾಗಲಿದೆ. ವಿದ್ಯುತ್ ವಿತರಣಾ ಜಾಲ ಸುಧಾರಿಸುವ ಎರಡೂ ಹಂತಗಳ ಕಾಮಗಾರಿಯನ್ನು ಮುಂಗಾರು ಆರಂಭವಾಗುವುದರೊಳಗೆ ಮುಗಿಸುವುದು ಬೆಸ್ಕಾಂನ ಗುರಿಯಾಗಿದೆ. ಆಗಸ್ಟ್ 2022ರ ಒಳಗೆ ಮುಗಿಸಬೇಕು ಎಂದುಕೊಂಡಿದ್ದ 3 ಮತ್ತು 4ನೇ ಹಂತದ ಕಾಮಗಾರಿಗಳೂ ಸುಮಾರು 6 ತಿಂಗಳು ತಡವಾಗುವ ಸಾಧ್ಯತೆಯಿದೆ. ಮುಕ್ಕಾಲು ಪಾಲು ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರ ಸಂಪೂರ್ಣಗೊಳ್ಳಲಿದೆ.

ಕಂಬದ ಮೇಲೆ ನೇತಾಡುವ ವಿದ್ಯುತ್ ತಂತಿಗಳನ್ನು ನೆಲದಡಿ ಅಳವಡಿಸುವುದರಿಂದ ಹಲವು ಲಾಭಗಳಿವೆ. ವಿದ್ಯುತ್ ತಂತಿಗಳು ತುಂಡಾಗಿ ವಿದ್ಯುತ್ ಕಡಿತಗೊಳ್ಳುವುದು, ಮರಗಳ ಕೊಂಬೆಗಳು ಬಿದ್ದು ಕಂಗಳು ಉರುಳುವುದು ಸೇರಿದಂತೆ ಹಲವು ಕಾರಣಗಳಿಂದ ಆಗುತ್ತಿದ್ದ ಅನಾಹುತಗಳು ತಪ್ಪಲಿದೆ. ಇದರ ಜೊತೆಗೆ ವಿದ್ಯುತ್ ಸಂಬಂಧಿತ ಅಪಘಾತಗಳ ಪ್ರಮಾಣವೂ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Bescom: ಹಳೆಯ ಟ್ರಾನ್ಸ್​ಫಾರ್ಮರ್​ಗಳನ್ನ ತಪಾಸಣೆ ಮಾಡಲು ಸೂಚನೆ ನೀಡಿರುವ ಬೆಸ್ಕಾಂ

ಇದನ್ನೂ ಓದಿ: ಬಿಡಬ್ಲ್ಯೂಎಸ್ಎಸ್​ಬಿ ಹಾಗೂ ಬೆಸ್ಕಾಂ ವಿರುದ್ಧ 13 ಎಫ್ ಐಆರ್ ದಾಖಲಿಸಲು ಬಿಬಿಎಂಪಿ ತೀರ್ಮಾನ

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್