ಈ ವಾರದ ಅಂತ್ಯಕ್ಕೆ ಬಿಡಬ್ಲ್ಯೂಎಸ್ಎಸ್​ಬಿ ಹಾಗೂ ಬೆಸ್ಕಾಂ ವಿರುದ್ಧ 13 ಎಫ್ ಐಆರ್ ದಾಖಲಿಸಲು ಬಿಬಿಎಂಪಿ ತೀರ್ಮಾನ

ಕಂಡ‌ ಕಂಡಲ್ಲಿ ಅನುಮತಿ ಇಲ್ಲದೆ ಬೆಸ್ಕಾಂ ಹಾಗೂ ಬಿಡಬ್ಲ್ಯೂಎಸ್ಎಸ್ಬಿ ಇಲಾಖೆಗಳು ಬಿಬಿಎಂಪಿ ರಸ್ತೆಗಳನ್ನ ಅಗೆಯುತ್ತಿದ್ದು ರಸ್ತೆಗಳಲ್ಲಿ ಗುಂಡಿ ನಿರ್ಮಾಣವಾಗಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ಪಾಲಿಕೆ ಪತ್ರ ಬರೆದಿದ್ದು ಅನುಮತಿ ಇಲ್ಲದೇ ರಸ್ತೆ ಅಗೆದರೆ FIR ದಾಖಲಿಸಲು ಮನವಿ ಮಾಡಿಕೊಂಡಿದೆ.

ಈ ವಾರದ ಅಂತ್ಯಕ್ಕೆ ಬಿಡಬ್ಲ್ಯೂಎಸ್ಎಸ್​ಬಿ ಹಾಗೂ ಬೆಸ್ಕಾಂ ವಿರುದ್ಧ 13 ಎಫ್ ಐಆರ್ ದಾಖಲಿಸಲು ಬಿಬಿಎಂಪಿ ತೀರ್ಮಾನ
ಬಿಬಿಎಂಪಿ
Follow us
TV9 Web
| Updated By: ಆಯೇಷಾ ಬಾನು

Updated on: Feb 03, 2022 | 9:18 AM

ಬೆಂಗಳೂರು: ನಗರದಲ್ಲಿ ಅನುಮತಿ ಪಡೆಯದೆ ರಸ್ತೆ ಅಗೆದ ಹಿನ್ನೆಲೆ ಬಿಡಬ್ಲ್ಯೂಎಸ್ಎಸ್ಬಿ (BWSSB), ಬೆಸ್ಕಾಂ(BESCOM) ವಿರುದ್ಧ ವಾರಾಂತ್ಯಕ್ಕೆ ವಿವಿಧೆಡೆ 13 FIR ದಾಖಲಿಸಲು ಬಿಬಿಎಂಪಿ ತೀರ್ಮಾನಿಸಿದೆ. ಕಂಡ‌ ಕಂಡಲ್ಲಿ ಅನುಮತಿ ಇಲ್ಲದೆ ಬೆಸ್ಕಾಂ ಹಾಗೂ ಬಿಡಬ್ಲ್ಯೂಎಸ್ಎಸ್ಬಿ ಇಲಾಖೆಗಳು ಬಿಬಿಎಂಪಿ ರಸ್ತೆಗಳನ್ನ ಅಗೆಯುತ್ತಿದ್ದು ರಸ್ತೆಗಳಲ್ಲಿ ಗುಂಡಿ ನಿರ್ಮಾಣವಾಗಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ಪಾಲಿಕೆ ಪತ್ರ ಬರೆದಿದ್ದು ಅನುಮತಿ ಇಲ್ಲದೇ ರಸ್ತೆ ಅಗೆದರೆ FIR ದಾಖಲಿಸಲು ಮನವಿ ಮಾಡಿಕೊಂಡಿದೆ.

ಯಾರೇ ರಸ್ತೆ ಅಗೆದ್ರೂ ಬೋರ್ಡ್ ಹಾಕುವುದು ಕಡ್ಡಾಯ. Utility service provider ಸಂಬಂಧಿತ ಸ್ಪಷ್ಟ ಮಾಹಿತಿ ಇರುವ ಬೋರ್ಡ್ ಹಾಕಬೇಕು ಎಂದು ಬಿಬಿಎಂಪಿ ಸೂಚಿಸಿದೆ. ಇನ್ನು ರಸ್ತೆ ಹಾಗೂ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಅಭಿಯಂತಕರು ಇತ್ತೀಚೆಗೆ ರಸ್ತೆ ಗುಂಡಿಗೆ ಮಹಿಳೆ ಬಲಿ ಹಿನ್ನೆಲೆಯಲ್ಲಿ ಪತ್ರ ಬರೆದಿದ್ದರು. ಅಂಜನಾನಗರ ಮುಖ್ಯ ರಸ್ತೆಯಲ್ಲಿ ಜಲಮಂಡಳಿ ರಸ್ತೆ ಅಗೆದು ದುರಸ್ತಿ ಕಾರ್ಯ ಮಾಡಿರಲಿಲ್ಲ. ಸಾರ್ವಜನಿಕವಾಗಿ ಪಾಲಿಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಸ್ಥಳೀಯ ಆರ್ಆರ್ ನಗರ ಇಇ ಸಹ ಅಮಾನತು ಮಾಡಲಾಗಿತ್ತು. ಈಗ ಪಾಲಿಕೆಯಿಂದ ಬೇರೆ ಇಲಾಖೆಗಳಿಗೆ ಎಚ್ಚರಿಕೆ ನೀಡುವ ಪರ್ವ ಶುರುವಾಗಿದೆ. ಈ ವಾರದ ಅಂತ್ಯಕ್ಕೆ ನಗರದ 13 ಕಡೆ BESCOM, BWSSB ವಿರುದ್ಧ ಕೇಸ್ ದಾಖಲಿಸಲು ತೀರ್ಮಾನಿಸಲಾಗಿದೆ.

ಅನುಮತಿ ಪಡೆಯದೆ ರಸ್ತೆ ಅಗೆದರೆ ಬೀಳುತ್ತೆ FIRಇನ್ಮುಂದೆ ಯಾರೆ ರಸ್ತೆ ಅಗೆಯಬೇಕಾದ್ರು ಬಿಬಿಎಂಪಿ(BBMP) ಅನುಮತಿ ಪಡೆಯಬೇಕಾಗಿರುವುದು ಕಡ್ಡಾಯ. ಏಕೆಂದರೆ ಅನುಮತಿ ಪಡೆಯದೆ ರಸ್ತೆ ಅಗೆದರೆ FIR ಪ್ರಕರಣ ದಾಖಲಿಸುವಂತೆ ಬಿಬಿಎಂಪಿ ಸೂಚಿಸಿದೆ. ಬೆಸ್ಕಾಂ,(BESCOM) ಜಲಮಂಡಳಿ(Bangalore Water Supply and Sewerage Board) ಕೂಡ ಬಿಬಿಎಂಪಿ ಅನುಮತಿ ಪಡೆಯಬೇಕು. ಇಲ್ಲ ಅಂದ್ರೆ ಕೇಸ್ ಪಕ್ಕ. ಪೋಲಿಸ್ ಠಾಣೆಯಲ್ಲಿ ಬೆಸ್ಕಾ, ಜಲಮಂಡಳಿ ವಿರುದ್ಧ ದೂರು ದಾಖಲಿಸಲು ಎಂಜಿನಿಯರ್ಗಳಿಗೆ ಪಾಲಿಕೆ ಸೂಚಿಸಿದೆ.

ನಗರದಲ್ಲಿ ದಿನದಿಂದ ದಿನಕ್ಕೆ ರಸ್ತೆ ಗುಂಡಿಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಪಾಲಿಕೆ ವ್ಯಾಪ್ತಿಯಲ್ಲಿ ಅನೇಕ ಕಡೆ ಅನುಮತಿ ಪಡೆಯದೇ ಬೇಕಾಬಿಟ್ಟಿಯಾಗಿ ರಸ್ತೆ ಅಗೆದು ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ. ಹೀಗಾಗಿ ಇನ್ಮುಂದೆ ಜಲಮಂಡಳಿ, ಬೆಸ್ಕಾಂ ರಸ್ತೆ ಅಗೆದು ಕೆಲಸ ಆರಂಭಿಸಲು ಬಿಬಿಎಂಪಿ ಅನುಮತಿ ತೆಗೆದುಕೊಳ್ಳಬೇಕು. ಕಾಮಗಾರಿ ಮುಗಿದ ಬಳಿಕ ಕೆಲಸ ಪೂರ್ಣವಾದ ಬಗ್ಗೆ ಪ್ರಮಾಣ ಪತ್ರವನ್ನ ಬಿಬಿಎಂಪಿಗೆ ನೀಡಬೇಕು ಎಂದು ಖಡಕ್ ಆಗಿ ಸೂಚಿಸಿದೆ. ಪಾಲಿಕೆ ಅನುಮತಿ ಪಡೆಯದೇ ಕೆಲವು ಕಡೆ ಬೆಸ್ಕಾಂ ಒಎಸ್ ಸಿ ಕೇಬಲ್ ಅಳವಡಿಸುತ್ತಿದ್ದು ಅಗೆದ ನೆಲವನ್ನ ಸರಿಯಾಗಿ ಮುಚ್ಚುತ್ತಿಲ್ಲ. ಅಲ್ಲದೆ ಬಿಬಿಎಂಪಿಯ 110 ಹಳ್ಳಿಗಳಲ್ಲಿ ರಸ್ತೆ ಅಗೆಯಲಾಗಿದೆ. ಜಲಮಂಡಳಿ ರಸ್ತೆ ಅಗೆದು ಮತ್ತೆ ದುರಸ್ತಿ ಮಾಡಿಲ್ಲ. ಹೀಗಾಗಿ ರಸ್ತೆ ಗುಂಡಿಗೆ ಜನರು ಬಲಿಯಾಗುತ್ತಿದ್ದಾರೆ. ಪ್ರತಿ ಬಾರಿಯೂ ಬಿಬಿಎಂಪಿಯನ್ನೇ ದೂರಲಾಗುತ್ತಿದೆ. ಹೀಗಾಗಿ ಬೆಸ್ಕಾಂ, ಜಲಮಂಡಳಿ ವಿರುದ್ಧ ಕ್ರಮಕ್ಕೆ ಚಿಂತನೆ ನಡೆಸಿದ್ದು ಪ್ರಕರಣ ದಾಖಲಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದೆ.

ಇದನ್ನೂ ಓದಿ: Recruitment: ತುಮಕೂರು ಜಿಲ್ಲೆಯಲ್ಲಿ ಪುರುಷ ಡಿಪ್ಲೊಮಾದಾರರಿಗೆ ಉದ್ಯೋಗಕ್ಕಾಗಿ ನೇರ ಸಂದರ್ಶನ