
ಇನ್ನು ಮುಂದೆ ನಿಯಮಗಳನ್ನು ನಿರ್ಲಕ್ಷಿಸಿವವರಿಗೆ ಮತ್ತಷ್ಟು ಫಜೀತಿ ಎದುರಾಗಲಿದೆ. ವಾಹನ ಸವಾರನೊಬ್ಬ 5ಕ್ಕೂ ಹೆಚ್ಚು ಬಾರಿ ನಿಯಮಗಳನ್ನು ಉಲ್ಲಂಘಿಸಿ ದಂಡ ಪಾವತಿಸದೆ ತಪ್ಪಿಸಿಕೊಂಡಿದ್ದರೆ, ಪೊಲೀಸರು ಅವನ ಮನೆಗೆ ಹೋಗಿ ಪೆನಾಲ್ಟಿಯನ್ನು ವಸೂಲಿ ಮಾಡಲು ನಿರ್ಧರಿಸಿದ್ದಾರೆ. ಸದರಿ ಪದ್ಧತಿಯನ್ನು ಕೆ.ಆರ್ ಪುರಂ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ಜಾರಿಗೊಳಿಸಲಾಗಿದೆ.
ನಿಯಮ ಉಲ್ಲಂಘಿಸಿದ ವಾಹನ ಸವಾರರ ಮನೆಗಳಿಗೆ ತೆರಳಿ ಇದುವರೆಗೆ ಅವರಿಂದ ರೂ. 3 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಇದೇ ವ್ಯಾಪ್ತಿಯಲ್ಲಿ ಓಡಾಡುವ ಓರ್ವ ಬೈಕ್ ಸವಾರನಿಂದ 32 ಸಾವಿರ ರೂ. ದಂಡ ವಸೂಲಿ ಮಾಡಿರುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಅವನ ವಿರುದ್ಧ 61 ಕೇಸ್ಗಳು ದಾಖಲಾಗಿದ್ದವಂತೆ.
ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್ ರವಿಕಾಂತೇಗೌಡ ಅವರ ನಿರ್ದೇಶನದ ಮೇರೆಗೆ ದಂಡ ವಸೂಲಿ ಮಾಡಲಾಗುತ್ತಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.