ಬೆಂಗಳೂರು ಭುವನೇಶ್ವರ ವಿಶೇಷ ರೈಲು ಟ್ರಿಪ್ ವಿಸ್ತರಣೆ: ಇಲ್ಲಿದೆ ವೇಳಾಪಟ್ಟಿ

Bhubaneswar Bangalore Special Train: ಬೆಂಗಳೂರಿನಿಂದ ಒಡಿಶಾದ ಭುವನೇಶ್ವರಕ್ಕೆ ತೆರಳುವ ಪ್ರಯಾಣಿಕರಿಗೆ ನೈರುತ್ಯ ರೈಲ್ವೆ ಶುಭಸುದ್ದಿ ನೀಡಿದೆ. ಯಶವಂತಪುರ ಭುವನೇಶ್ವರ ವೀಕ್ಲಿ ಸ್ಪೆಷಲ್ ಟ್ರೈನ್ ರೈಲಿನ ಟ್ರಿಪ್ ವಿಸ್ತರಣೆ ಮಾಡಲಾಗಿದೆ. ಈ ವಿಚಾರವಾಗಿ ರೈಲ್ವೆ ಇಲಾಖೆ ಮಾಹಿತಿ ಹಂಚಿಕೊಂಡಿದ್ದು, ವಿವರವಾದ ವೇಳಾಪಟ್ಟಿ ಇಲ್ಲಿದೆ.

ಬೆಂಗಳೂರು ಭುವನೇಶ್ವರ ವಿಶೇಷ ರೈಲು ಟ್ರಿಪ್ ವಿಸ್ತರಣೆ: ಇಲ್ಲಿದೆ ವೇಳಾಪಟ್ಟಿ
ಸಾಂದರ್ಭಿಕ ಚಿತ್ರ

Updated on: Feb 22, 2025 | 4:25 PM

ಬೆಂಗಳೂರು, ಫೆಬ್ರವರಿ 22: ಭುವನೇಶ್ವರ ಮತ್ತು ಬೆಂಗಳೂರಿನ ಯಶವಂತಪುರ ನಡುವಿನ ವೀಕ್ಲಿ ಸ್ಪೆಷಲ್ ಟ್ರೈನನ್ನು ರೈಲ್ವೆ ಒಂಬತ್ತು ಟ್ರಿಪ್‌ಗಳಿಗೆ ವಿಸ್ತರಿಸಿದೆ. ರೈಲು ಸಂಖ್ಯೆ 02811 ಭುವನೇಶ್ವರ – ಯಶವಂತಪುರ ಸಾಪ್ತಾಹಿಕ ವಿಶೇಷ ರೈಲು ಮಾರ್ಚ್ 1, 8, 15, 22, 29, ಏಪ್ರಿಲ್ 5, 12, 19 ಮತ್ತು 26 ರಂದು ಸಂಜೆ 7.15 ಕ್ಕೆ ಭುವನೇಶ್ವರದಿಂದ ಹೊರಟು ಮೂರನೇ ದಿನ ಬೆಳಿಗ್ಗೆ 12.15 ಕ್ಕೆ ಯಶವಂತಪುರ ತಲುಪಲಿದೆ.

ರೈಲು ಸಂಖ್ಯೆ 02812 ಯಶವಂತಪುರ-ಭುವನೇಶ್ವರ ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಮಾರ್ಚ್ 3, 10, 17, 24, 31, ಏಪ್ರಿಲ್ 7, 14, 21 ಮತ್ತು 28 ರಂದು ಬೆಳಿಗ್ಗೆ 4.30 ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 6 ಗಂಟೆಗೆ ಭುವನೇಶ್ವರ ತಲುಪಲಿದೆ ಎಂದು ರೈಲ್ವೆ ತಿಳಿಸಿದೆ.

ಮೈಸೂರು-ತಾಳಗುಪ್ಪ ರೈಲಿಗೆ ಇನ್ನೆರಡು ನಿಲುಗಡೆ


ಮೈಸೂರು-ತಾಳಗುಪ್ಪ ಮಾರ್ಗದ ಪ್ರಯಾಣಿಕರ ಅನುಕೂಲಕ್ಕಾಗಿ, ಕೆಲವು ರೈಲುಗಳಿಗೆ ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆಯ ಅವಕಾಶವನ್ನು ಮುಂದುವರಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಜತೆಗೆ ರೈಲುಗಳ ವಿವರವನ್ನು ಟ್ವೀಟ್ ಮೂಲಕ ತಿಳಿಸಿದೆ.

ರೈಲು ಸಂಖ್ಯೆ 16227/16228 ಮೈಸೂರು-ತಾಳಗುಪ್ಪ-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲು ಈ ಹಿಂದೆ ಅರಸಾಳು ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆಯನ್ನು ಒದಗಿಸಲಾಗಿತ್ತು, ಈ ಸೌಲಭ್ಯವನ್ನು 24.02.2025 ರಿಂದ 23.08.2025 ರವರೆಗೆ ಜಾರಿಯಾಗುವಂತೆ ಮುಂದುವರಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಇದನ್ನೂ ಓದಿ: ಓಪನ್ ಅಕ್ಸೆಸ್ ಮೂಲಕ ವಿದ್ಯುತ್ ಖರೀದಿ; ಸೆಂಟ್ರಲ್ ರೈಲ್ವೆಗೆ ಆರು ಸಾವಿರ ಕೋಟಿ ರೂ ಉಳಿತಾಯ

ರೈಲು ಸಂಖ್ಯೆ 16206/16205 ಮೈಸೂರು-ತಾಳಗುಪ್ಪ-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲು ಈ ಹಿಂದೆ ಅರಸಾಳು ಮತ್ತು ಕುಂಸಿ ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆಯನ್ನು ಒದಗಿಸಲಾಗಿತ್ತು, ಈ ಸೌಲಭ್ಯವನ್ನು 24.02.2025 ರಿಂದ 23.08.2025 ಜಾರಿಯಾಗುವಂತೆ ಮುಂದುವರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ