ಬೆಂಗಳೂರು: ಕ್ಲಾರೆನ್ಸ್ ಹೈಸ್ಕೂಲ್ನಲ್ಲಿ ಬೈಬಲ್ ಕಡ್ಡಾಯಗೊಳಿಸಲಾಗಿದೆ (Bible Compulsory) ಎಂಬ ವಿಚಾರವಾಗಿ ಬೆಂಗಳೂರಿನಲ್ಲಿ ಆರ್ಚ್ ಬಿಷಪ್ ಪೀಟರ್ ಮಚಾಡೋ ಹೇಳಿಕೆ ನೀಡಿದ್ದಾರೆ. ಧಾರ್ಮಿಕತೆ ಮತ್ತು ನೈತಿಕತೆಯನ್ನು ನಾವು ಬೇರ್ಪಡಿಸಲು ಸಾಧ್ಯವಿಲ್ಲ. ಕ್ಲಾರೆನ್ಸ್ ಹೈಸ್ಕೂಲ್ಗೆ (Clarence High School) 100 ವರ್ಷಗಳ ಇತಿಹಾಸವಿದೆ. ಶಾಲೆಯಲ್ಲಿ 75 % ಮಕ್ಕಳು ಕ್ರೈಸ್ತ ಸಮುದಾಯಕ್ಕೆ ಸೇರಿದವರಿದ್ದಾರೆ. ಬಲವಂತವಾಗಿ ಬೈಬಲ್ ಓದಿಸುತ್ತಿದ್ದೇವೆ ಎಂಬುವುದು ಸುಳ್ಳು ಎಂದು ಅವರು (Archbishop) ಸ್ಪಷ್ಟನೆ ನೀಡಿದ್ದಾರೆ.
ನಾವು ಹಿಂದೂ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದ ಮಕ್ಕಳಿಗೆ ಬೈಬಲ್ ಕಡ್ಡಾಯ ಮಾಡಿಲ್ಲ. ಎಲ್ಲಾ ಕ್ರೈಸ್ತ ಶಾಲೆಗಳಿಗೆ ಬೈಬಲ್ ಬಣ್ಣ ಬಳಿಯುವುದು ಸರಿಯಲ್ಲ. ಸರ್ಕಾರ ತನಿಖೆ ಮಾಡಲು ಇಚ್ಚಿಸಿದರೆ, ತನಿಖೆ ಮಾಡಲಿ. ಈ ಶಾಲೆಯಲ್ಲಿ ಎಷ್ಟು ಮಕ್ಕಳು ಮತಾಂತರ ಆಗಿದ್ದಾರೆ? ಅದನ್ನೂ ತನಿಖೆ ಮಾಡಲಿ ಎಂದು ಆರ್ಚ್ ಬಿಷಪ್ ತಿಳಿಸಿದ್ದಾರೆ.
ಮೊದಲು ಚರ್ಚ್ ಟಾರ್ಗೆಟ್ ಮಾಡಿದ್ರು, ಚರ್ಚ್ ಧ್ವಂಸ ಮಾಡಿದರು. ಈಗ ನಮ್ಮ ಶಿಕ್ಷಣ ಸಂಸ್ಥೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ಹೇಳಿದ್ದರು ನಾನು ಓದಿದ್ದು ಕ್ರಿಶ್ಚಿಯನ್ ಶಾಲೆಯಲ್ಲಿ ಅಂತಾ. ಹಾಗೆಯೇ, ಕೇಂದ್ರ ಸಚಿವ ಪಿಯೂಶ್ ಗೋಯೆಲ್ ಕೂಡ ಓದಿದ್ದು ಕ್ರಿಶ್ವಿಯನ್ ಶಾಲೆಯಲ್ಲಿ. ಹೀಗೆ ನಾಡಿಗೆ ಹಲವು ಗಣ್ಯರನ್ನು ಕೊಟ್ಟ ಹೆಗ್ಗಳಿಕೆ ಕ್ರೈಸ್ತ ಶಿಕ್ಷಣ ಸಂಸ್ಥೆಗಳಿವೆ ಎಂದು ಆರ್ಚ್ ಬಿಷಪ್ ಹೇಳಿದರು.
Also Read:
ಗೌರವಯುತವಾಗಿ ಶರಣಾಗಿ, ಇಲ್ಲಾಂದ್ರೆ ಆಸ್ತಿ ಮುಟ್ಟುಗೋಲು ಹಾಕ್ತೇವೆ -ಹಾಗರಗಿಗೆ ಗೃಹ ಸಚಿವ ಎಚ್ಚರಿಕೆ ಮಿಶ್ರಿತ ಕಿವಿಮಾತು
Also Read:
Heart Disease: ಹೃದಯ ರೋಗಕ್ಕೆ ಕಾರಣವಾಗುವ ಈ ನವ ಗಂಡಾಂತರಗಳ ಬಗ್ಗೆ ತಿಳಿದುಕೊಳ್ಳಿ
Published On - 1:52 pm, Thu, 28 April 22