ಓಲಾ ಚಾಲಕನಿಗೆ 32 ಕಡೆ ಚಾಕುವಿನಿಂದ ಚುಚ್ಚಿ ಹಣ ವಸೂಲಿ ಮಾಡಿ ಪರಾರಿಯಾಗಿದ್ದ ಆರೋಪಿಗಳು ಗುಜರಾತ್​ನಲ್ಲಿ ಅರೆಸ್ಟ್

ಓಲಾ ಚಾಲಕನಿಗೆ 32 ಕಡೆ ಚಾಕುವಿನಿಂದ ಚುಚ್ಚಿ ಹಣ ವಸೂಲಿ ಮಾಡಿ ಪರಾರಿಯಾಗಿದ್ದ ಆರೋಪಿಗಳು ಗುಜರಾತ್​ನಲ್ಲಿ ಅರೆಸ್ಟ್
ಓಲಾ ಚಾಲಕನಿಗೆ 32 ಕಡೆ ಚಾಕುವಿನಿಂದ ಚುಚ್ಚಿ ಹಣ ವಸೂಲಿ ಮಾಡಿ ಪರಾರಿಯಾಗಿದ್ದ ಆರೋಪಿಗಳು ಗುಜರಾತ್ನಲ್ಲಿ ಅರೆಸ್ಟ್

ಬೊಮ್ಮನಹಳ್ಳಿ ಬಳಿ ಕ್ಯಾಬ್ ಹತ್ತಿದ್ದ ಆರೋಪಿಗಳು ಮಡಿವಾಳ ಕಡೆಗೆ ಬಂದಾಗ ಕಾರು ಚಾಲಕನಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದೆ ಇರುವಾಗ ಚಾಲಕನ ಬೆನ್ನಿಗೆ ಮೂವತ್ತೆರಡು ಕಡೆ ಚಾಕು ಹಾಕಿದ್ದಾರೆ. ಬಳಿಕ ಹನ್ನೆರಡು ಸಾವಿರ ಹಣ ಕಿತ್ತುಕೊಂಡು ಎಸ್ಕೇಪ್ ಆಗಿದ್ದವರು ಸದ್ಯ ಗುಜರಾತ್ನಲ್ಲಿ ಪತ್ತೆಯಾಗಿದ್ದಾರೆ.

TV9kannada Web Team

| Edited By: Ayesha Banu

Apr 28, 2022 | 1:06 PM

ಬೆಂಗಳೂರು: ಏಪ್ರಿಲ್ 24ರಂದು ಮಡಿವಾಳ ಬಳಿ ಮೂವತ್ತೆರಡು ಕಡೆ ಚಾಕುವಿನಿಂದ ಇರಿದು ಸುಲಿಗೆ ಮಾಡಿದ್ದ ಅರೋಪಿಗಳು ಗುಜರಾತ್ನಲ್ಲಿ ಪತ್ತೆಯಾಗಿದ್ದಾರೆ. ಆರೋಪಿಗಳು ಉತ್ತರ ಪ್ರದೇಶದಿಂದ ಸುಲಿಗೆ ಮಾಡಲಿಕ್ಕೆ ಎಂದು ಬೆಂಗಳೂರಿಗೆ ಬಂದಿದ್ದರು. ಆರೋಪಿಗಳ ಪೈಕಿ ಇಬ್ಬರು ಬಾಲ ಆರೋಪಿಗಳಿದ್ದಾರೆ. ಬೊಮ್ಮನಹಳ್ಳಿ ಬಳಿ ಕ್ಯಾಬ್ ಹತ್ತಿದ್ದ ಆರೋಪಿಗಳು ಮಡಿವಾಳ ಕಡೆಗೆ ಬಂದಾಗ ಕಾರು ಚಾಲಕನಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದೆ ಇರುವಾಗ ಚಾಲಕನ ಬೆನ್ನಿಗೆ ಮೂವತ್ತೆರಡು ಕಡೆ ಚಾಕು ಹಾಕಿದ್ದಾರೆ. ಬಳಿಕ ಹನ್ನೆರಡು ಸಾವಿರ ಹಣ ಕಿತ್ತುಕೊಂಡು ಎಸ್ಕೇಪ್ ಆಗಿದ್ದವರು ಸದ್ಯ ಗುಜರಾತ್ನಲ್ಲಿ ಪತ್ತೆಯಾಗಿದ್ದಾರೆ.

ಗಾಯಳು ಚಾಲಕನನ್ನು ಅಸ್ಪತ್ರೆಗೆ ದಾಖಲಿಸಿದ ಮಡಿವಾಳ ಪೊಲೀಸ್ ಇನ್ನು ಘಟನೆ ಬಳಿಕ ಪೊಲೀಸರೆ ಗಾಯಳು ಚಾಲಕನನ್ನು ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯ ವ್ಯವಸ್ಥೆ ಮಾಡಿಸಿದ್ದರು. ಬಳಿಕ ವಿಚಾರಣೆ ಮಾಡಿದ ಸಮಯದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಆರೋಪಿಗಳು ಯಶವಂತಪುರದಿಂದ ರೈಲು ಹತ್ತಿ ಬೆಂಗಳೂರು ಬಿಟ್ಟಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಇದರ ಬೆನ್ನು ಹತ್ತಿದ ಪೊಲೀಸರು ಆರೋಪಿಗಳು ಓಲಾ ಬುಕ್ ಮಾಡಿದ್ದ ಮೊಬೈಲ್ ನಂಬರ್ ಮೂಲಕ ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಪೊಲೀಸರ ಒಂದು ತಂಡ ಕಾರಿನಲ್ಲಿ ಮತ್ತೊಂದು ತಂಡ ಫ್ಲೈಟ್ ನಲ್ಲಿ ಆರೋಪಿಗಳ ಚೇಸ್ ಮಾಡಿದ್ದಾರೆ. ಬಳಿಕ ಗುಜರಾತ್ ನ ದಹೇಜ್ ಕೈಗಾರಿಕಾ ಪ್ರದೇಶದಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಕೋಟ್ಯಂತರ ಮೌಲ್ಯದ ಚಿನ್ನಾಭರಣ ಕದ್ದಿದ್ದ ಮೂವರ ಬಂಧನ ಕೋಟ್ಯಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಕದ್ದ ಮಾಲು ಸಹಿತ ಬಿಹಾರಕ್ಕೆ ಹೊರಟಿದ್ದ ಆರೋಪಿಗಳನ್ನು ಬೆಂಗಳೂರಿನ ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಬಬ್ಲು ಪಾಸ್ವಾನ್, ಬೋಲಾ ಪಾಸ್ವಾನ್ & ಶ್ರೀಧರ್ ಸೇರಿದಂತೆ ಮೂವರ ಬಂಧನವಾಗಿದೆ. ಆರೋಪಿಗಳು 1 ಕೋಟಿ 43 ಲಕ್ಷ ಬೆಲೆಬಾಳುವ ಚಿನ್ನಾಭರಣ ದೋಚಿದ್ದರು.

ಹುಳಿಮಾವು ಬಳಿಯ ಅಪಾರ್ಟ್ಮೆಂಟ್ವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಬಂಧಿತರು, ಮಾಲು ಸಮೇತ ಪರಾರಿಯಾಗ್ತಿದ್ರು. ರಾತ್ರಿ 2ಗಂಟೆಗೆ ಮಾಲೀಕ ಮನೆಗೆ ಬಂದಿದ್ದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ 112 ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದ ಮಾಲೀಕರು ಕೆಲಸಗಾರರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಆರೋಪಿಗಳ ಪತ್ತೆಗಾಗಿ 4 ತಂಡ ರಚಿಸಿದ್ದ ಡಿಸಿಪಿ ಶ್ರೀನಾಥ್, ಒಂದು ತಂಡ ರೈಲ್ವೆ ಸ್ಟೇಷನ್, ಮತ್ತೊಂದು ತಂಡ ಬಸ್ ನಿಲ್ದಾಣದಲ್ಲಿ ಹುಡುಕಾಟ ನಡೆಸಿದೆ. ಈ ವೇಳೆ ಆರೋಪಿಗಳು ಬಸ್ ಮೂಲಕ ಬೆಂಗಳೂರು ಬಿಟ್ಟಿದ್ದ ಮಾಹಿತಿ ಸಿಕ್ಕಿದೆ. ಕೋಲಾರ ಜಿಲ್ಲೆ ಬಂಗಾರಪೇಟೆವರೆಗೂ ಪೊಲೀಸರು ಚೇಸ್ ಮಾಡಿದ್ದಾರೆ. ಬಂಗಾರಪೇಟೆ ಬಳಿ ಬಸ್ ಇಳಿದು ರೈಲ್ವೆ ನಿಲ್ದಾಣಕ್ಕೆ ಹೊರಟಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕದ್ದ ಮಾಲು ಸಹಿತ ಬಿಹಾರಕ್ಕೆ ಹೊರಟಿದ್ದ ಆರೋಪಿಗಳನ್ನು ಕೊನೆಗೂ ಅರೆಸ್ಟ್ ಮಾಡಲಾಗಿದೆ.

ಇದನ್ನೂ ಓದಿ: Virat Kohli: ಮ್ಯಾಕ್ಸ್​ವೆಲ್ ವೆಡ್ಡಿಂಗ್ ಪಾರ್ಟಿ: ಹೂ ಅಂಟಾವ ಮಾವ ಹಾಡಿಗೆ ಕಿಂಗ್ ಕೊಹ್ಲಿಗೆ ಸಖತ್ ಸ್ಟೆಪ್ಸ್

ಸಿಐಡಿ ವಶದಲ್ಲಿದ್ದರೂ ಕಡಿಮೆಯಾಗದ ರುದ್ರಗೌಡ ಪಾಟೀಲ್ ವರ್ಚಸ್ಸು; ಅಫಜಲಪುರದಲ್ಲಿ ರಾರಾಜಿಸುತ್ತಿವೆ ದೊಡ್ಡ ದೊಡ್ಡ ಕಟೌಟ್ಸ್

Follow us on

Related Stories

Most Read Stories

Click on your DTH Provider to Add TV9 Kannada