ಕಿಲ್ಲರ್​ ಬಿಎಂಟಿಸಿಗೆ ಬೈಕ್​ ಸವಾರ ಬಲಿ; ಆಕ್ರೋಶಗೊಂಡ ಸ್ಥಳೀಯರಿಂದ ಬಸ್​ನ ಗ್ಲಾಸ್ ಪುಡಿ ಪುಡಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 08, 2024 | 10:17 PM

ಬಿಎಂಟಿಸಿ ಬಸ್​ಗೆ ಹಲವಾರು ಮಂದಿ ಬಲಿಯಾಗುತ್ತಲೇ ಇದ್ದಾರೆ. ಇದೀಗ ಒಂದೇ ದಿನ ಬೆಂಗಳೂರಿನ ವಿವಿದೆಡೆ ಕಿಲ್ಲರ್​ ಬಿಎಂಟಿಸಿಗೆ ಇಬ್ಬರು ಸಾವನ್ನಪ್ಪಿದ್ದಾರೆ. ಆನೇಕಲ್(Anekal) ತಾಲೂಕಿನ ಜಿಗಣಿ ಹಳೆ ಬಸ್ ನಿಲ್ದಾಣದ ಬಳಿ ಓರ್ವ ಬೈಕ್​ ಸವಾರ ಮೃತಪಟ್ಟರೆ, ಬನ್ನೇರುಘಟ್ಟ ಬಳಿ ಎರಡು ಬಸ್​ಗಳ ನಡುವೆ ಸಿಲುಕಿ ಪಾದಚಾರಿಯೊಬ್ಬರು ಕೊನೆಯುಸಿರೆಳೆದಿದ್ದಾರೆ.

ಕಿಲ್ಲರ್​ ಬಿಎಂಟಿಸಿಗೆ ಬೈಕ್​ ಸವಾರ ಬಲಿ; ಆಕ್ರೋಶಗೊಂಡ ಸ್ಥಳೀಯರಿಂದ ಬಸ್​ನ ಗ್ಲಾಸ್ ಪುಡಿ ಪುಡಿ
ಕಿಲ್ಲರ್​ ಬಿಎಂಟಿಸಿಗೆ ಬೈಕ್​ ಸವಾರ ಬಲಿ
Follow us on

ಬೆಂಗಳೂರು, ಆ.08: ಬೈಕ್​ಗೆ ಹಿಂಬದಿಯಿಂದ ಬಿಎಂಟಿಸಿ ಬಸ್(BMTC Bus)​ ಡಿಕ್ಕಿ ಹೊಡೆದು ನೆಲಕ್ಕೆ ಬಿದ್ದ​ ಸವಾರನ ಮೇಲೆ ಬಸ್ ಹರಿದಿದ್ದು, ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಆನೇಕಲ್(Anekal) ತಾಲೂಕಿನ ಜಿಗಣಿ ಹಳೆ ಬಸ್ ನಿಲ್ದಾಣದ ಬಳಿ ನಡೆದಿದೆ. ಇನ್ನೂ ಮೃತ ಯುವಕ ಯಾರೆಂದು ಪತ್ತೆಯಾಗಿಲ್ಲ. ಇನ್ನು ಆಕ್ರೋಶಗೊಂಡ ಸ್ಥಳೀಯರು ಬಸ್​ನ ಗ್ಲಾಸ್​ನ್ನು ಪುಡಿ ಪುಡಿ ಮಾಡಿದ್ದು, ಬಿಎಂಟಿಸಿ ಚಾಲಕನಿಗೆ ಥಳಿಸಿದ್ದಾರೆ. ಈ ಕುರಿತು ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಿಲ್ಲರ್​ ಬಿಎಂಟಿಸಿಗೆ ಮತ್ತೊಂದು ಬಲಿ; BMTC ಬಸ್​ಗಳ ನಡುವೆ ಅಪಘಾತ, ಪಾದಚಾರಿ ಸಾವು

ಮತ್ತೊಂದು ಅಪಘಾತವಾಗಿದ್ದು, ಬಿಎಂಟಿಸಿ ಬಸ್​ಗಳ ನಡುವೆ ಡಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿರುವ ಘಟನೆ ಬನ್ನೇರುಘಟ್ಟ ಬಳಿ ನಡೆದಿದೆ. ರಾಜಸ್ಥಾನ ಮೂಲದ ಆನಂದ್(28) ಮೃತರಾದರೆ, ಕೊಪ್ಪ ಗೇಟ್ ನಿವಾಸಿ ಅಂಜನ್​ ಮೂರ್ತಿಗೆ ಗಂಭೀರ ಗಾಯವಾಗಿದೆ. ಅತಿವೇಗವಾಗಿ ಬಂದ ಬಸ್, ಪಾದಚಾರಿ ಮತ್ತು ಬೈಕ್​ಗೆ ಡಿಕ್ಕಿಯಾಗಿ ಮುಂದೆ ಹೋಗ್ತಿದ್ದ ಮತ್ತೊಂದು ಬಸ್​ಗೆ ಗುದ್ದಿದೆ. ಎರಡು ಬಸ್​ಗಳ ಮಧ್ಯೆ ಸಿಲುಕಿ ಪಾದಚಾರಿ ಆನಂದ್ ಕೊನೆಯುಸಿರೆಳೆದಿದ್ದಾರೆ. ಇನ್ನು ಚಕ್ರದ ಕೆಳಗೆ ಸಿಲುಕಿದ ಬೈಕ್ ಸವಾರನ ಕಾಲು ಮುರಿತವಾಗಿದೆ.

ಇನ್ನೋವಾ ವಾಹನ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿದ್ದ ವಕೀಲ ಸಾವು

ವಿಜಯಪುರ: ವಿಜಯಪುರ ನಗರದ ಬಸವನ ನಗರದ ಬಳಿ ದ್ವಿಚಕ್ರ ವಾಹನಕ್ಕೆ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಜೊತೆಗೆ ಅಪಘಾತದ ಬಳಿಕ ಎರಡುವರೆ ಕಿಲೋ‌ಮೀಟರ್ ಬೈಕ್ ಸವಾರನನ್ನು ಕಾರ್ ಚಾಲಕ ಎಳೆದೊಯ್ದಿದ್ದಾನೆ. ಮೃತಪಟ್ಟ ಸವಾರನನ್ನು ವಕೀಲ ರವಿ ಮೇಲಿನಮನಿ (37) ಎಂದು ತಿಳಿದುಬಂದಿದೆ. ಭೀಮಾತೀರದ ಹಂತಕರ ಕುಖ್ಯಾತಿಯ ಬಾಗಪ್ಪ‌ ಹರಿಜನ ಸಂಬಂಧಿಕನಾಗಿದ್ದ ರವಿ, ನ್ಯಾಯವಾದಿಯಾಗಿ ಕಳೆದ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದ.

ಇದನ್ನೂ ಓದಿ:ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ, ನೌಕರರಿಗೆ ಒಂದು ಕೋಟಿ ಪರಿಹಾರ

ವಾಹನ ಸಹಿತ ಸ್ಥಳದಿಂದ‌ ಪರಾರಿಯಾದ ಚಾಲಕ

ಇನ್ನು ಅಪಘಾತದ ಬಳಿಕ ಇನ್ನೋವಾ ಅಡಿಯಲ್ಲಿ ಸಿಲುಕಿದ್ದ ರವಿ ಶವ ಬೇರ್ಪಟ್ಟ ಬಳಿಕ ಚಾಲಕ ವಾಹನ ಸಹಿತ ಸ್ಥಳದಿಂದ‌ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಎಸ್ಪಿ ಋಷಿಕೇಶ ಸೋನೆವಣೆ, ಎಎಸ್ಪಿ ಶಂಕರ ಮಾರಿಹಾಳ, ಡಿವೈಎಸ್ಪಿ ಬಸವರಾಜ ಯಲಿಗಾರ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವ್ಯವಸ್ಥಿತಿವಾಗಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ತನಿಖೆ ಬಳಿಕ ಘಟನೆ ಕುರಿತು ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಎಸ್ಪಿ ಋಷಿಕೇಶ ಸೋನೆವಣೆ ತಿಳಿಸಿದ್ದಾರೆ. ಸಧ್ಯ ಈ ಕುರಿತು ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:23 pm, Thu, 8 August 24