AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಲಕರಿಗೆ ವಿಶೇಷ ತರಬೇತಿ: ಬಿಎಂಟಿಸಿ ಬಸ್​ ಅಪಘಾತ ಸಂಖ್ಯೆ ಇಳಿಕೆ

ಬಿಎಂಟಿಸಿ ಬಸ್​ನಿಂದ ಸಂಭವಿಸುವ ಅಪಘಾತ ನಿಯಂತ್ರಿಸಲು ಬೆಂಗಳೂರು ಟ್ರಾಫಿಕ್​ ಪೊಲೀಸರು ಚಾಲಕರಿಗೆ ಕಳೆದ 6 ತಿಂಗಳಿನಿಂದ ವಿಶೇಷ ತರಬೇತಿ ನೀಡಲು ಆರಂಭಿಸಿದ್ದಾರೆ. ಪ್ರತಿದಿನ 50 ಜನರಂತೆ 12 ಸಾವಿರ ಬಿಎಂಟಿಸಿ ಬಸ್​ ಚಾಲಕರಿಗೂ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಸುಮಾರು 8 ಸಾವಿರ ಚಾಲಕರಿಗೆ ತರಬೇತಿ ನೀಡಲಾಗಿದೆ.

ಚಾಲಕರಿಗೆ ವಿಶೇಷ ತರಬೇತಿ: ಬಿಎಂಟಿಸಿ ಬಸ್​ ಅಪಘಾತ ಸಂಖ್ಯೆ ಇಳಿಕೆ
ಬಿಎಂಟಿಸಿ
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: ವಿವೇಕ ಬಿರಾದಾರ|

Updated on: Jul 30, 2024 | 12:16 PM

Share

ಬೆಂಗಳೂರು, ಜುಲೈ 30: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್​ಗಳಿಂದ ಸಂಭವಿಸುತ್ತಿರುವ ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ಚಾಲಕರಿಗೆ ನೀಡಿದ ವಿಶೇಷ ತರಬೇತಿ ಫಲಕಾರಿಯಾಗಿದೆ. ಬಿಎಂಟಿಸಿ ಬಸ್​ಗಳಿಂದ ಸಂಭವಿಸುತ್ತಿದ್ದ ಅಪಘಾತ ಸಂಖ್ಯೆ ಕಡಿಮೆಯಾಗಿದೆ. ಕಳೆದ ಮೂರು ವರ್ಷಕ್ಕೆ ಹೋಲಿಕೆ ಮಾಡಿದರೆ, 2024ರಲ್ಲಿ ಇಲ್ಲಿಯವರೆಗೆ ಕೇವಲ ನಾಲ್ಕು ಅಪಘಾತಗಳು ಸಂಭವಿಸಿವೆ. ಈ ಮೂಲಕ ಬೆಂಗಳೂರು ಟ್ರಾಫಿಕ್​ ಪೊಲೀಸರ ಶ್ರಮಕ್ಕೆ ಫಲ ಸಿಕ್ಕಿದೆ. ಬಿಎಂಟಿಸಿ ಬಸ್​ ಚಾಲಕರು ಮತ್ತು ನಿರ್ವಾಹಕರು ಪ್ರತಿದಿನ 12 ಗಂಟೆ ಕೆಲಸ ಮಾಡುತ್ತಾರೆ. ಟ್ರಾಫಿಕ್​ ನಡುವೆ 12 ಗಂಟೆ ಕೆಲಸ ಮಾಡಿ ಚಾಲಕರು ದೈಹಿಕ ಮತ್ತು ಮಾನಸಿಕವಾಗಿ ದಣಿದಿರುತ್ತಾರೆ. ಇದರಿಂದ ತಿರುವುಗಳಲ್ಲಿ ಮತ್ತು ಜನ ದಟ್ಟಣೆ ಇರುವ ಸ್ಥಳದಲ್ಲಿ ಅಪಘಾತ ಸಂಭವಿಸುತ್ತಿದ್ದವು.

ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬೆಂಗಳೂರು ಟ್ರಾಫಿಕ್​ ಪೊಲೀಸರು ಬಿಎಂಟಿಸಿ ಬಸ್​ ಚಾಲಕರಿಗೆ ಕಳೆದ 6 ತಿಂಗಳಿನಿಂದ ತರಬೇತಿ ನೀಡಲು ಆರಂಭಿಸಿದ್ದಾರೆ. ಪ್ರತಿದಿನ 50 ಜನರಂತೆ 12 ಸಾವಿರ ಬಿಎಂಟಿಸಿ ಬಸ್​ ಚಾಲಕರಿಗೂ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಸುಮಾರು 8 ಸಾವಿರ ಚಾಲಕರಿಗೆ ತರಬೇತಿ ನೀಡಲಾಗಿದೆ.

ಇದನ್ನೂ ಓದಿ: ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ, ನೌಕರರಿಗೆ ಒಂದು ಕೋಟಿ ಪರಿಹಾರ

ಹಾಗಾದರೆ ಬಿಎಂಟಿಸಿ ಚಾಲಕರಿಗೆ ಯಾವ ರೀತಿ ತರಬೇತಿ ನೀಡಲಾಗುತ್ತದೆ?

  • ಸುರಕ್ಷಿತವಾಗಿ ವಾಹನ ಚಾಲನೆ ಮಾಡುವುದು ಹೇಗೆ ?
  • ಡಿಫೆನ್ಸಿವ್ ಡ್ರೈವಿಂಗ್.
  • ಟ್ರಾಫಿಕ್ ರೂಲ್ಸ್ ಫಾಲೊ ಮಾಡುವುದು.
  • ಕ್ಯಾಮೆರಾಗಳು ಹೇಗೆ ಟ್ರಾಫಿಕ್ ಉಲ್ಲಂಘನೆಗಳನ್ನ ದಾಖಲಿಸುತ್ತವೆ.
  • ಡ್ರೈವರ್ & ಕಂಡಕ್ಟರ್ ಹೇಗೆ ಸಂಚಾರ ಪೊಲೀಸರಿಗೆ ಸಹಕರಿಸಬೇಕು.
  • ಅಪಘಾತಕ್ಕೆ ಕಾರಣಗಳು ಏನೇನು.
  • ಮಕ್ಕಳು, ಮಹಿಳೆಯರನ್ನು ಹೇಗೆ ಸುರಕ್ಷಿತವಾಗಿರಿಸಬೇಕು.

ಕಳೆದ 3 ವರ್ಷದಲ್ಲಿ ಸಂಭವಿಸಿದ ಅಪಘಾತಗಳು

2021ರಲ್ಲಿ 27, 2022ರಲ್ಲಿ 33, 2023ರಲ್ಲಿ 35 ಮತ್ತು 2024ರಲ್ಲಿ ಇಲ್ಲಿಯವರೆಗೆ 04 ಅಪಘಾತಗಳು ಸಂಭವಿಸಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
‘ಭಾರತ-ಪಾಕ್ ಯುದ್ಧ ತಡೆದು, 3 ಕೋಟಿ ಜನರ ಜೀವ ಉಳಿಸಿದೆ’; ಟ್ರಂಪ್ ಹಳೇ ರಾಗ
‘ಭಾರತ-ಪಾಕ್ ಯುದ್ಧ ತಡೆದು, 3 ಕೋಟಿ ಜನರ ಜೀವ ಉಳಿಸಿದೆ’; ಟ್ರಂಪ್ ಹಳೇ ರಾಗ
ಗುಲ್ಮಾರ್ಗ್‌ನಲ್ಲಿ ಹಿಮಪಾತ; ಶ್ವೇತವರ್ಣಕ್ಕೆ ತಿರುಗಿದ ಪರ್ವತಗಳು
ಗುಲ್ಮಾರ್ಗ್‌ನಲ್ಲಿ ಹಿಮಪಾತ; ಶ್ವೇತವರ್ಣಕ್ಕೆ ತಿರುಗಿದ ಪರ್ವತಗಳು
ಗನ್, ಪಿಸ್ತೂಲ್ ಹೊಂದಿರುವವರಿಗೆ ಖಡಕ್ ಸಂದೇಶ ನೀಡಿದ ಸಿಎಂ ಡಿಕೆ ಶಿವಕುಮಾರ್
ಗನ್, ಪಿಸ್ತೂಲ್ ಹೊಂದಿರುವವರಿಗೆ ಖಡಕ್ ಸಂದೇಶ ನೀಡಿದ ಸಿಎಂ ಡಿಕೆ ಶಿವಕುಮಾರ್
‘ಮುಖ್ಯಮಂತ್ರಿ’ ನಾಟಕದ 900ನೇ ಪ್ರದರ್ಶನ: ಮೈಲುಗಲ್ಲಿನ ಬಗ್ಗೆ ಚಂದ್ರು ಮಾತು
‘ಮುಖ್ಯಮಂತ್ರಿ’ ನಾಟಕದ 900ನೇ ಪ್ರದರ್ಶನ: ಮೈಲುಗಲ್ಲಿನ ಬಗ್ಗೆ ಚಂದ್ರು ಮಾತು
ವಂದೇ ಮಾತರಂ: ಸಿಎಂ ಡಿಕೆಶಿಗೆ ರಾಜ್ಯಪಾಲರು ಬರೆದ 4 ಪುಟ ಪತ್ರದ ವಿವರ ಹೀಗಿದೆ
ವಂದೇ ಮಾತರಂ: ಸಿಎಂ ಡಿಕೆಶಿಗೆ ರಾಜ್ಯಪಾಲರು ಬರೆದ 4 ಪುಟ ಪತ್ರದ ವಿವರ ಹೀಗಿದೆ
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ: ನಟ ಅನಂತ್ ನಾಗ್​ಗೆ ವಿಶೇಷ ಗೌರವ
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ: ನಟ ಅನಂತ್ ನಾಗ್​ಗೆ ವಿಶೇಷ ಗೌರವ
ಎಚ್​​​ಕೆ ಪಾಟೀಲ್ ರಾಜೀನಾಮೆ ಎಚ್ಚರಿಕೆಗೆ ಡಿಕೆಶಿ ಪ್ರತಿಕ್ರಿಯೆ ಇಲ್ಲಿದೆ
ಎಚ್​​​ಕೆ ಪಾಟೀಲ್ ರಾಜೀನಾಮೆ ಎಚ್ಚರಿಕೆಗೆ ಡಿಕೆಶಿ ಪ್ರತಿಕ್ರಿಯೆ ಇಲ್ಲಿದೆ
ಧಾರವಾಡದಲ್ಲಿ ಶಾಲಾ ಕಟ್ಟಡ ಧ್ವಂಸ: ವಿದ್ಯಾರ್ಥಿಗಳಿಗೆ ಪೆಂಡಾಲ್ ಅಡಿ ಪಾಠ
ಧಾರವಾಡದಲ್ಲಿ ಶಾಲಾ ಕಟ್ಟಡ ಧ್ವಂಸ: ವಿದ್ಯಾರ್ಥಿಗಳಿಗೆ ಪೆಂಡಾಲ್ ಅಡಿ ಪಾಠ
ಟಾಸ್ಕ್ ವೇಳೆ ಚುಚ್ಚು ಮಾತು, ಕಣ್ಣೀರು ಹಾಕಿದ ಆಸಿಯಾ
ಟಾಸ್ಕ್ ವೇಳೆ ಚುಚ್ಚು ಮಾತು, ಕಣ್ಣೀರು ಹಾಕಿದ ಆಸಿಯಾ
ಅಡಿಕೆ ಹಾಳೆಯಿಂದ ಎಥೆನಾಲ್ ಉತ್ಪಾದಿಸುವ ಸಂಶೋಧನೆ ಯಶಸ್ವಿ
ಅಡಿಕೆ ಹಾಳೆಯಿಂದ ಎಥೆನಾಲ್ ಉತ್ಪಾದಿಸುವ ಸಂಶೋಧನೆ ಯಶಸ್ವಿ