ಬೆಂಗಳೂರು: 26 ವರ್ಷದ ಯಶ್ವಿನ್ ಗೌಡ ಕೆ ಎಂಬಾತ ತನ್ನ ಬೈಕ್‌ನಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಸಂಚಾರ ಮಾಡುತ್ತಿದ್ದ. ಈ ವೇಳೆ ಫೋಟೋವನ್ನ ತೆಗೆದ ಟ್ರಾಫಿಕ್ ಪೊಲೀಸ್(Traffic Police) ಪೇದೆಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಆತನನ್ನ ಬಂಧಿಸಲಾಗಿದೆ. ಹೌದು ನೋಂದಣಿ ಸಂಖ್ಯೆ ಸಿಕೆಆರ್ 8240 ರ ಯಮಹಾ ಆರ್ ಎಕ್ಸ್ 100 (Yamaha RX 100)ಬೈಕ್‌ನಲ್ಲಿ ಪ್ರಿಮ್ರೋಸ್ ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ್ದು ಪೊಲೀಸ್ ಪೇದೆ ರಾಜೇಂದ್ರ ಕುಮಾರ್ ಎಂ ಬಿರಾದಾರ್ ಅವರು ಅದರ ಫೋಟೋಗಳನ್ನ ತೆಗೆದಿದ್ದರು. ಇದಕ್ಕೆ ಕೋಪಗೊಂಡ ಯುವಕ ಪೇದೆ ಮೇಲೆಯೇ ಹಲ್ಲೆ ಮಾಡಿದ್ದ. ಇದೀಗ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಸುಬ್ರಹ್ಮಣ್ಯಪುರದ ಉತ್ತರಹಳ್ಳಿ ಮುಖ್ಯರಸ್ತೆಯ ಗೌಡನಪಾಳ್ಯದಲ್ಲಿ ನಿವಾಸಿ ಎಂದು ತಿಳಿದು ಬಂದಿದೆ.
ಘಟನೆ ಹಿನ್ನಲೆ
ಅಶೋಕನಗರ ಸಂಚಾರಿ ಪೊಲೀಸ್ ಠಾಣೆಯ 59 ವರ್ಷದ ಪೊಲೀಸ್ ಪೇದೆ ರಾಜೇಂದ್ರ ಕುಮಾರ್ ಎಂ ಬಿರಾದಾರ್ ಅವರನ್ನು ಪ್ರಿಮ್ರೋಸ್ ರಸ್ತೆಯಲ್ಲಿ ಸ್ಟೇಷನ್ ಹೌಸ್ ಆಫೀಸರ್ ಆಗಿ ‘ಬೈಕ್ ಸವಾರರನ್ನು ಏಕಮುಖವಾಗಿ ಓಡಿಸುವುದನ್ನು ತಡೆಯಲು ನಿಯೋಜಿಸಿದ್ದರು. ಬೆಳಗ್ಗೆ 10.40ಕ್ಕೆ ಎಂ.ಜಿ.ರಸ್ತೆಯಿಂದ ಪ್ರಿಮ್ರೋಸ್ ರಸ್ತೆಗೆ ಆರೋಪಿ ತನ್ನ ಬೈಕ್‌ನಲ್ಲಿ ತಪ್ಪು ದಾರಿಯಲ್ಲಿ ಹೋಗುತ್ತಿರುವುದನ್ನ ಬಿರಾದಾರ್ ನೋಡಿದ್ದಾರೆ. ಬಳಿಕ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಲು ಬೈಕ್‌ನೊಂದಿಗೆ ಫೋಟೋವನ್ನ ಕ್ಲಿಕ್ಕಿಸುತ್ತಿದ್ದಾಗ ಯಶ್ವಿನ್ ಗೌಡ ಕೆ ಎಂಬಾತ ದೌರ್ಜನ್ಯ ಎಸಗಿದ್ದ. ಈ ಕುರಿತು ಬಿರಾದಾರ್ ತಮ್ಮ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ:ಬೀದರ್: ವಿವಿಧ ಕಳ್ಳತನದಲ್ಲಿ ಭಾಗಿಯಾದ್ದವರು ಪೊಲೀಸ್ ಬಲೆಗೆ; ಬಂಧಿತರಿಂದ 16 ಲಕ್ಷ ಮೌಲ್ಯದ ಬೈಕ್, ದವಸ ಧಾನ್ಯ ವಶ
ಇನ್ನು ಒಬ್ಬ ಸರ್ಕಾರಿ ನೌಕರ ತನ್ನ ಕೆಲಸದಲ್ಲಿ ತೊಡಗಿದ್ದು, ಆತನು ತನ್ನ ಕರ್ತವ್ಯವನ್ನು ನಿರ್ವಹಿಸದಂತೆ ತಡೆದು, ಹಲ್ಲೆ ಮಾಡಿದ್ದಾರೆ ಎಂದು ಆರೋಪಿ ಯಶ್ವಿನ್ ಗೌಡ ಕೆ ಅವರ ಮೇಲೆ ಕೇಸ್ ದಾಖಲಿಸಲಾಗಿದ್ದು ಮತ್ತು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:37 am, Thu, 13 April 23