AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣೆ ಸಮಯ, ಅಧಿಕಾರಿಗಳದ್ದೇ ದರ್ಬಾರು! ಬಿಜೆಪಿಗೇ ಮತ ಹಾಕಿ ಎಂದು ವೈಎನ್ ಹೊಸಕೋಟೆ ಪೊಲೀಸ್​​ ಅಧಿಕಾರಿ ಯುವಕರಿಗೆ ಧಮ್ಕಿ ಹಾಕಿ ಥಳಿಸಿದರಾ?

YN Hosakote: ಬೈಕ್ ಗೆ ಅಡ್ಡ ಬಂದ ವಿಚಾರಕ್ಕೆ ಆರಂಭವಾಗಿದ್ದ ಜಗಳದ ಬಗ್ಗೆ ಎರಡೂ ತಂಡಗಳನ್ನು ಕರೆಯಿಸಿ ಬುದ್ದಿ ಹೇಳಿ‌ ಕಳಿಸಬೇಕಿದ್ದ ಪಿಎಸ್ವೈ ಅರ್ಜುನ್ ಗೌಡ, ಬಿಜೆಪಿಗೆ ಮತ ಹಾಕಿ ಅಂತಾ ಮನಬಂದಂತೆ ಥಳಿಸಿರುವುದು ತಪ್ಪು. ಬೇಕಿದ್ದರೇ ಕೆಲಸಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಕೆಲಸ ಮಾಡಲಿ. ಅದು ಬಿಟ್ಟು ಹೀಗೆ ಮಾಡಿದ್ದು ತಪ್ಪು ಎಂದು ಸಾರ್ವಜನಿಕರು ಕೆಂಡವಾಗಿದ್ದಾರೆ.

ಚುನಾವಣೆ ಸಮಯ, ಅಧಿಕಾರಿಗಳದ್ದೇ ದರ್ಬಾರು! ಬಿಜೆಪಿಗೇ ಮತ ಹಾಕಿ ಎಂದು ವೈಎನ್ ಹೊಸಕೋಟೆ ಪೊಲೀಸ್​​ ಅಧಿಕಾರಿ ಯುವಕರಿಗೆ ಧಮ್ಕಿ ಹಾಕಿ ಥಳಿಸಿದರಾ?
ಚುನಾವಣೆ ಸಮಯ, ಅಧಿಕಾರಿಗಳದ್ದೇ ದರ್ಬಾರು!
TV9 Web
| Edited By: ಸಾಧು ಶ್ರೀನಾಥ್​|

Updated on: Apr 03, 2023 | 2:20 PM

Share

ಅದು ಕ್ಷುಲ್ಲಕ ವಿಚಾರಕ್ಕೆ ಆದ ಜಗಳವಾಗಿತ್ತು, ಬೈಕ್ ತಾಗಿತು ಅಂತಾ ಯುವಕರ ಎರಡು ತಂಡಗಳು ಜಗಳವಾಡಿಕೊಂಡಿವೆ. ಅದಾದ ಮೇಲೆ ಒಂದು ಗುಂಪು ಪೊಲೀಸ್ ಠಾಣೆಗೆ ಹೋಗಿ ದೂರು‌ ನೀಡಿದೆ. ಆದರೆ, ದೂರು ಸ್ವೀಕರಿಸಿದ ಪಿಎಸ್ ಐ ಮಾಡಿದ್ದೇನು ಗೊತ್ತಾ? ಈ ವರದಿ ನೋಡಿ. ಹೌದು ಕೈಗಳು, ತೊಡೆಯ ಭಾಗಗಳಲ್ಲಿಯೂ ಕಪ್ಪು ಕಪ್ಪಾಗಿ ಕಂದಿರುವ ಕಲೆಗಳು ಆ ಯುವಕರ ಮೈಮೇಲೆ ಕಂಡುಬಂದಿವೆ. ನಡೆಯಲು ಸಹ ಆಗದೇ ಇತರರನ್ನು ಅವಲಂಬಿಸಿರುವ ಯುವಕರು. ಇವರು ಎಲ್ಲೋ ಬಿದ್ದು ಗಾಯಗಳನ್ನು ಮಾಡಿಕೊಂಡವರಲ್ಲ. ಬದಲಾಗಿ ದೂರು ಬಂದಿದೆ ಬನ್ನಿ ಅಂತಾ ವಿಚಾರಣೆಗಾಗಿ ಠಾಣೆಗೆ ಕರೆಯಿಸಿ ಮನಬಂದಂತೆ ಪೊಲೀಸಪ್ಪ (PSI) ಥಳಿಸಿದ್ದಾರೆ ಎನ್ನಲಾಗಿದೆ (Allegation).

ಹೌದು‌. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ದೊಡ್ಡಹಳ್ಳಿ ಹಾಗೂ ಕೆ ರಾಮಪುರ ಬಳಿ (YN Hosakote) ಯುವಕರ ಎರಡು ಗುಂಪುಗಳ ನಡುವೆ ಪರಸ್ಪರ ಗಲಾಟೆಯಾಗಿತ್ತು. ಬರ್ತ್​​ ಡೆ ಪಾರ್ಟಿಗೆಂದು ನಾಲ್ವರು ಹೋಗುತ್ತಿರುವಾಗ ದೊಡ್ಡಹಳ್ಳಿ ಗ್ರಾಮದ ಯುವಕ ಬೈಕ್ ಗೆ ಅಡ್ಡ ಬಂದಿದ್ದಾನೆ. ಈ ವೇಳೆ ಸೈಡ್ ಗೆ ಹೋಗಿ ಎಂದಿದ್ದಕ್ಕೆ ಏನೋ ಈವಾಗ? ಹೋಗಲ್ಲ ಅಂತಾ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಕೆ ರಾಮಪುರದ ಚಿರಂಜೀವಿ, ಅನಿಲ್, ಮಾರುತಿ, ಗುಣಶೇಖರ್, ಮಂಜುನಾಥ ಎಂಬ ನಾಲ್ವರು ಯುವಕರು ಸೇರಿ ಗಲಾಟೆ ಮಾಡಿದ್ದಾರೆ.

Also read:

ಅಂದು ಠಾಣೆಗೆ ವರ್ಗವಾಗಿ ಬಂದ ಅಧಿಕಾರಿಗೆ ಅವಮಾನವಾಗಿತ್ತು, ಇಂದು ಅದೇ ಪೊಲೀಸ್ ಸ್ಟೇಷನ್

ಬಳಿಕ ದೊಡ್ಡಹಳ್ಳಿ ಗ್ರಾಮದ ಯುವಕರು ವೈಎನ್ ಹೊಸಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳೆದ ಶುಕ್ರವಾರ ಘಟನೆ ನಡೆದಿದ್ದು ಶನಿವಾರ ದೂರು ಸ್ವೀಕರಿಸಿದ ಪಿಎಸ್ವೈ ಅರ್ಜನ್ ಗೌಡ ಅವರನ್ನೆಲ್ಲ ಠಾಣೆಗೆ ಕರೆಯಿಸಿಕೊಂಡು, ಮನಬಂದಂತೆ ನಾಲ್ವರನ್ನೂ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ. ರಾತ್ರಿ 11 ಗಂಟೆಯಿಂದ ಮಧ್ಯರಾತ್ರಿ 1 ಗಂಟೆವರೆಗೂ ಥಳಿಸಿದ್ದಾರಂತೆ! ಅಲ್ಲದೇ ಯಾರೋ ನೀವು? ಯಾವ ಪಕ್ಷದವರೋ? ಕಾಂಗ್ರೆಸ್ಸಾ, ಜೆಡಿಎಸ್ಸಾ? ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಅದಕ್ಕೆ ಮತ ನೀಡಬೇಕು, ಇಲ್ಲಾಂದ್ರೆ ಕೈ ಮುರಿಯುತ್ತೇನೆ ಎಂದು ಧಮ್ಕಿ ಹಾಕಿ ಥಳಿಸಿದ್ದಾರೆ ಎನ್ನಲಾಗಿದೆ.

ಇನ್ನು ಥಳಿತಕ್ಕೊಳಗಾಗಿ ಮನೆಗೆ ವಾಪಸಾಗಿದ್ದ ನಾಲ್ವರನ್ನೂ ಪೋಷಕರು ಸ್ಥಳೀಯರ ನೆರವಿನೊಂದಿಗೆ ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯನ್ನು ಖಂಡಿಸಿ ಗ್ರಾಮಸ್ಥರು ಹಾಗೂ ಪೋಷಕರು ರಾತ್ರಿಯೇ ಜಮಾಯಿಸಿ ವೈ.ಎನ್. ಹೊಸಕೋಟೆ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ನಮ್ಮ ಹುಡುಗರನ್ನು ಥಳಿಸಿರುವುದಕ್ಕೆ ಪಿಎಸ್ ಐ ವಿರುದ್ಧ ಕ್ರಮವಾಗಬೇಕು, ಅಲ್ಲದೇ ದೂರು ನೀಡಲು ಬಂದಿದ್ದವರಿಗೆಲ್ಲಾ ಧಮ್ಕಿ ಹಾಕಿ ಬಿಜೆಪಿಗೇ ಮತ ಹಾಕಬೇಕು ಅಂತಾ ಬೆದರಿಸಿ ಕಳಿಸಿದ್ದಾರಂತೆ. ಪಿಎಸ್ ಐ ದಿನನಿತ್ಯ ಮದ್ಯ ಸೇವಿಸಿ ದಾಂಧಲೇ‌ ಮಾಡುವುದು ಸಾಮಾನ್ಯವಾಗಿದೆಯಂತೆ. ಪಿಎಸ್ ಐ ಅರ್ಜುನ್ ಗೌಡ ಹಾಗೂ ಸಿಬ್ಬಂದಿ ಮನಬಂದಂತೆ ಥಳಿಸಿದ್ದಾರಂತೆ. ನ್ಯಾಯ ಸಿಗೋವರೆಗೂ ಹೋಗಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.

ಒಟ್ಟಾರೆ ಅದೇನೆ ಆಗಿರಲಿ, ಬೈಕ್ ಗೆ ಅಡ್ಡ ಬಂದ ವಿಚಾರಕ್ಕೆ ಆರಂಭವಾಗಿದ್ದ ಜಗಳದ ಬಗ್ಗೆ ಎರಡೂ ತಂಡಗಳನ್ನು ಕರೆಯಿಸಿ ಬುದ್ದಿ ಹೇಳಿ‌ ಕಳಿಸಬೇಕಿದ್ದ ಪಿಎಸ್ವೈ ಅರ್ಜುನ್ ಗೌಡ, ಬಿಜೆಪಿಗೆ ಮತ ಹಾಕಿ ಅಂತಾ ಮನಬಂದಂತೆ ಥಳಿಸಿರುವುದು ತಪ್ಪು. ಬೇಕಿದ್ದರೇ ಕೆಲಸಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಕೆಲಸ ಮಾಡಲಿ. ಅದು ಬಿಟ್ಟು ಹೀಗೆ ಮಾಡಿದ್ದು ತಪ್ಪು ಎಂದು ಸಾರ್ವಜನಿಕರು ಕೆಂಡವಾಗಿದ್ದಾರೆ.

ವರದಿ: ಮಹೇಶ್ ಟಿವಿ9 ತುಮಕೂರು

ಇನ್ನಷ್ಟು ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ