ಬಿಜೆಪಿ ನಾಯಕ ಅನಂತರಾಜು ಆತ್ಮಹತ್ಯೆ ಪ್ರಕರಣ; ಹನಿಟ್ರ್ಯಾಪ್ ಬ್ಲಾಕ್ಮೇಲ್ ಆರೋಪಿ ರೇಖಾ ಬಂಧನ

ಹನಿಟ್ರ್ಯಾಪ್ ಬ್ಲಾಕ್ಮೇಲ್ಗೆ ಹೆದರಿ ಮೇ 12ರಂದು ಬಿಜೆಪಿ ನಾಯಕ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದರು. ಹನಿಟ್ರ್ಯಾಪ್ ಬ್ಲಾಕ್ಮೇಲ್ ಆರೋಪಿ ರೇಖಾಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿ ನಾಯಕ ಅನಂತರಾಜು ಆತ್ಮಹತ್ಯೆ ಪ್ರಕರಣ; ಹನಿಟ್ರ್ಯಾಪ್ ಬ್ಲಾಕ್ಮೇಲ್ ಆರೋಪಿ ರೇಖಾ ಬಂಧನ
ಬಿಜೆಪಿ ನಾಯಕ ಅನಂತರಾಜು ಮತ್ತುಆರೋಪಿ ರೇಖಾ
Edited By: ಆಯೇಷಾ ಬಾನು

Updated on: May 18, 2022 | 2:46 PM

ಬೆಂಗಳೂರು: ಬಿಜೆಪಿ ಪಕ್ಷದ ಪ್ರಮುಖ ನಾಯಕ, ಸಚಿವರಿಗೂ ಆಪ್ತನಾಗಿದ್ದ ಅನಂತರಾಜು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಹನಿಟ್ರ್ಯಾಪ್ ಬ್ಲಾಕ್ಮೇಲ್ ಆರೋಪಿ ರೇಖಾಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹನಿಟ್ರ್ಯಾಪ್ ಬ್ಲಾಕ್ಮೇಲ್ಗೆ ಹೆದರಿ ಮೇ 12ರಂದು ಬಿಜೆಪಿ ನಾಯಕ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತ ಅನಂತರಾಜು ಪತ್ನಿ ದೂರು ಆಧರಿಸಿ ರೇಖಾ, ವಿನೋದ್, ಸ್ಪಂದನ ವಿರುದ್ಧ FIR ದಾಖಲಾಗಿತ್ತು. ಸದ್ಯ ರೇಖಾಳ ಬಂಧನವಾಗಿದ್ದು ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಬಿಜೆಪಿ ನಾಯಕನ ಸೂಸೈಡ್ ಹಿಂದೆ ಹನಿಟ್ರ್ಯಾಪ್ ಜಾಲ
ಹಣ, ಅಂತಸ್ತು, ಊರಲ್ಲಿ ಒಳ್ಳೆ ಹೆಸರು, ಜನರ ಬೆಂಬಲ ಎಲ್ಲಾ ಜತೆಗಿದ್ದ ಅನಂತರಾಜು ಆತ್ಮಹತ್ಯೆಗೆ ಶರಣಾಗಿದ್ರು. ಮನೆಯ ರೂಂನಲ್ಲಿ ನೇಣು ಬಿಗಿದುಕೊಂಡು ಪ್ರಾಣಬಿಟ್ಟಿದ್ರು. ದಿಢೀರ್ ಎಂದು ಉಸಿರು ಚೆಲ್ಲಿದ ನಾಯಕನಿಗೆ, ಏರಿಯಾ ಜನರೆಲ್ಲ ಕಣ್ಣೀರಿಟ್ಟಿದ್ರು. ಬ್ಯಾಡರಹಳ್ಳಿಯ ಬಿಜೆಪಿ ಮುಖಂಡ, ಸಚಿವ ಎಸ್.ಟಿ.ಸೋಮಶೇಖರ್ರ ಆಪ್ತನಾಗಿದ್ದವರು ಇದೇ ಅನಂತರಾಜು. ಕಮಲ ಪಾಳೆಯದಲ್ಲಿ ದೊಡ್ಡ ದೊಡ್ಡ ನಾಯಕರ ಜತೆ ಸ್ನೇಹಹೊಂದಿದ್ದ ಅನಂತರಾಜು, ಮೇ 12 ರಂದು ಮನೆಯಲ್ಲಿ ಆತ್ಮಹತ್ಯೆ ಮಾಡ್ಕೊಂಡಿದ್ರು. ಅನಂತರಾಜು ಸೂಸೈಡ್ ಹಿಂದೆ ಹನಿಟ್ರ್ಯಾಪ್ ಕಹಾನಿ ಇರೋದು ಹೊರಬಿದ್ದಿದೆ. ಇದನ್ನೂ ಓದಿ: Video: ಐತಿಹಾಸಿಕ ಸಾಧನೆ; ದೇಶೀ ನಿರ್ಮಿತ ಯುದ್ಧನೌಕೆ ನಾಶಕ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ

ಹೇರೋಹಳ್ಳಿ ವಾರ್ಡ್ನ ಬಿಜೆಪಿ ಮುಖಂಡನಾಗಿದ್ದ, ಅನಂತರಾಜ್ ಸಾವಿಗೆ ಹನಿಟ್ರ್ಯಾಪ್ ಕಾರಣ ಎನ್ನಲಾಗ್ತಿದೆ. ಯಾಕಂದ್ರೆ, ಅನಂತರಾಜು ಪತ್ನಿ ಸುಮಾ, ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದು, ಕೆ.ಆರ್.ಪುರಂನ ರೇಖಾ, ವಿನೋದ್ ಮತ್ತು ಸ್ಪಂದನಾ ಎಂಬುವವರ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಉಲ್ಲೇಖಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ವಿಷ್ಯ ಏನಂದ್ರೆ, ಅನಂತರಾಜ್ಗೆ ಕೆಲ ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ರೇಖಾ ಎಂಬಾಕೆ ಪರಿಚಯ ಆಗಿದ್ಳಂತೆ. ನಂತರ ಅದೇನಾಗಿದೆಯೋ ಏನೋ, ಅನಂತರಾಜ್ರ ಖಾಸಗಿ ಫೋಟೋ, ವಿಡಿಯೋಗಳನ್ನ ಪಡೆದು, ಹಣಕ್ಕಾಗಿ ರೇಖಾ ಡಿಮ್ಯಾಂಡ್ ಮಾಡುತ್ತಿದ್ಳಂತೆ. ಹಣ ನೀಡದಿದ್ರೆ ಪಕ್ಷದ ಮುಖಂಡರು, ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್‌ ಮಾಡುವುದಾಗಿ ಬೆದರಿಕೆ ಹಾಕಿದ್ರಂತೆ. ಸಾಕಷ್ಟು ಹಣ ಕೊಟ್ಟು ಬೇಸತ್ತಿದ್ದ ಅನಂತರಾಜು, ಪತ್ನಿ ಜತೆಗೂ ಈ ವಿಷ್ಯ ಹೇಳ್ಕೊಂಡಿದ್ರಂತೆ. ಆದ್ರೆ, ಮಾನಸಿಕವಾಗಿ ನೊಂದಿದ್ದ ಅವರು ಡೆತ್ನೋಟ್ ಬರೆದಿಟ್ಟು, ಆತ್ಮಹತ್ಯೆಗೆ ಶರಣಾಗಿದ್ದಾರೆ ಅಂತ ಪತ್ನಿ ದೂರು ನೀಡಿದ್ದಾರೆ. ಇದನ್ನೂ ಓದಿ: Cosmetic Surgery: ಫ್ಯಾಟ್​ ಸರ್ಜರಿಯಿಂದ ಅಪಾಯವಿದೆಯಾ?; ಯಾವೆಲ್ಲ ದೇಶಗಳಲ್ಲಿ ಕಾಸ್ಮೆಟಿಕ್ ಸರ್ಜರಿಗೆ ನಿಷೇಧ?

Web contact

TV9 Kannada

Read More
Follow Us