ಆಡಿಯೋದಲ್ಲಿ ಮಾತನಾಡಿರೋದು ನಾನಲ್ಲ, ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ: ಶಾಸಕ ಬಸವರಾಜ್ ದಡೇಸುಗೂರು
ಆಡಿಯೋದಲ್ಲಿ ಮಾತನಾಡಿರೋದು ನಾನಲ್ಲ ಎಂದು ಟಿವಿ9ಗೆ ಕನಕಗಿರಿ ಬಿಜೆಪಿ ಶಾಸಕ ಬಸವರಾಜ್ ದಡೇಸುಗೂರು ಸ್ಪಷ್ಟನೆ ನೀಡಿದರು. ಅಕ್ರಮದಲ್ಲಿ ಸಿಲುಕಿಸಿ ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ.
ಬೆಂಗಳೂರು: ಆಡಿಯೋದಲ್ಲಿ ಮಾತನಾಡಿರೋದು ನಾನಲ್ಲ ಎಂದು ಟಿವಿ9ಗೆ ಕನಕಗಿರಿ ಬಿಜೆಪಿ ಶಾಸಕ ಬಸವರಾಜ್ ದಡೇಸುಗೂರು ಸ್ಪಷ್ಟನೆ ನೀಡಿದರು. ಅಕ್ರಮದಲ್ಲಿ ಸಿಲುಕಿಸಿ ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ. ಈ ಸಂಬಂಧ ನಾನು ಕೂಡ ಎಲ್ಲ ದಾಖಲೆಗಳನ್ನು ಹೊಂದಿದ್ದೇನೆ. ಪ್ರಿಯಾಂಕ್ ನನ್ನ ಸ್ನೇಹಿತ, ಏನು ದಾಖಲೆ ಬಿಡ್ತಾರೋ ಬಿಡಲಿ. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ ಎಂದು ಶಾಸಕ ದಡೇಸುಗೂರು ಹೇಳಿಕೆ ನೀಡಿದರು. ನಾನು ಮಾತಾಡಿದ್ದ ಆಡಿಯೋ PSI ಹಗರಣಕ್ಕೆ ಜೋಡಿಸಿದ್ದಾರೆ. ನನ್ನ ಆಡಿಯೋ ಎಡಿಟ್ ಮಾಡಿದ್ದಾರೆ. ದಾಖಲೆ ಸಮೇತ ಸದನಕ್ಕೆ ಬಂದಿದೇನೆ, ಸಿಡಿ ಸಹ ತಂದಿದ್ದೇನೆ. ಸದನದಲ್ಲಿ ಇದರ ಬಗ್ಗೆ ಪ್ರಸ್ತಾಪ ಆದರೆ ಉತ್ತರ ಕೊಡುತ್ತೇನೆ. ಪ್ರೀಯಾಂಕ್ ಖರ್ಗೆ ಅಮೃತ ಘಳಿಗೆಯಲ್ಲಿ ಆಡಿಯೋ ವಿಡಿಯೋ ರೀಲಿಸ್ ಮಾಡ್ತಿನಿ ಅಂದಿದ್ದಾರೆ. ಮಾಡಲಿ ಸಮಸ್ಯೆ ಇಲ್ಲ. ನಾನು ಯಾವುದೇ ಹಣ ಪಡೆದಿಲ್ಲ. ಸರ್ಕಾರಕ್ಕೂ ಯಾವುದೇ ಹಣ ತಲುಪಿಸಿಲ್ಲ ಎಂದು ಶಾಸಕ ದಡೇಸುಗೂರು ಹೇಳಿದರು.
ಪಿಎಸ್ಐ ಅಕ್ರಮದಲ್ಲಿ ಶಾಸಕ ಬಸವರಾಜ್ ದಡೇಸಗೂರು ಆಡಿಯೋ ವೈರಲ್ ವಿಚಾರ ಸಂಬಂಧ ಆಡಿಯೋ ಬಿಡುಗಡೆಯಾದ ಬಳಿಕ ಹಣ ವಾಪಸ್ ಕೊಟ್ಟಿರೋ ಫೊಟೋ ವೈರಲ್ ಆಗಿದೆ ಎನ್ನಲಾಗುತ್ತಿದೆ. ಪರಸಪ್ಪ ಮೇಗೂರ ಎನ್ನುವರ ಬಳಿ 15 ಲಕ್ಷ ಹಣ ಪಡೆದಿದ್ದ ಬಸವರಾಜ್ ದಡೇಸಗೂರು. ಹಣ ಪಡೆದಿರೋದನ್ನ ಆಡಿಯೋದಲ್ಲಿ ಶಾಸಕ ಒಪ್ಪಿಕೊಂಡಿದ್ದಾರೆ. 15 ಲಕ್ಷ ಹಣ ಪಡೆದು ಸರ್ಕಾರಕ್ಕೆ ಕೊಟ್ಟಿದ್ದೆ ಎಂದು ದಡೇಸಗೂರು ಎಂದಿದ್ದರು. ಪರಸಪ್ಪ ಹಾಗೂ ಶಾಸಕರು ಮಾತಾನಡಿದ ಆಡಿಯೋ ವೈರಲ್ ಆಗಿತ್ತು. ಆಡಿಯೋ ವೈರಲ್ ಆದ ಬಳಿಕ ಪರಸಪ್ಪನ ಕರೆದು ಬಸವರಾಜ್ ದಡೇಸಗೂರು ಸೆಟಲಮೆಂಟ್ ಮಾಡಿದ್ದಾರೆನ್ನಲಾಗುತ್ತಿದೆ.
15 ಲಕ್ಷ ಹಣ ವಾಪಸ್ ನೀಡಿದ್ರಾ ಶಾಸಕರು..?
ಹಣದ ಚೀಲದ ಫೋಟೋ ಇದೀಗ ವೈರಲ್ ಆಗಿದ್ದು, ರಾತ್ರೋ ರಾತ್ರಿ ಪರಸಪ್ಪನಿಗೆ ಶಾಸಕ ಬಸವರಾಜ್ ದಢೇಸಗೂರು ಹಣ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ವಿಡಿಯೋ ಬಿಡುಗಡೆ ಮಾಡಿ ಶಾಸಕರು ಹಣ ಪಡೆದಿಲ್ಲ ಎಂದು ಪರಸಪ್ಪ ಹೇಳಿದ್ದಾರೆ. ಇದೀಗ ಮತ್ತೊಂದು ವಿವಾದವನ್ನು ದಡೇಸಗೂರು ಮೈಮೇಲೆ ಎಳೆದುಕೊಂಡಂತ್ತಾಗಿದೆ. ಪರಸಪ್ಪ ಮೇಗೂರ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ನಿವಾಸಿಯಾಗಿದ್ದು, ಪಿ.ಎಸ್.ಐ ನೌಕರಿಗಾಗಿ 15 ಲಕ್ಷ ಹಣ ನೀಡಿದ್ದ.
ಯಾರ ಮೇಲೆ ಆರೋಪ ಬಂದರೂ ತನಿಖೆ ಮಾಡಲಾಗುತ್ತದೆ: ಸಿಎಂ ಬೊಮ್ಮಾಯಿ
ಪ್ರಕರಣ ಸಂಬಂಧ ಯಾರ ಮೇಲೆ ಆರೋಪ ಬಂದರೂ ತನಿಖೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ಹಗರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ, ಹೊಸದಾಗಿ ಬರುವ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ ಎಂದರು.
ಆಡಿಯೋ ವೈರಲ್:
ಪಿಎಸ್ಐ ಹಗರಣಕ್ಕೆ ಸಂಬಂಧ ಕೊಪ್ಪಳ ಜಿಲ್ಲೆ ಕನಕಗಿರಿ ಬಿಜೆಪಿ ಶಾಸಕ ಬಸವರಾಜ್ ದಢೇಸಗೂರು ಮತ್ತು ನಿವೃತ್ತ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಪರಸಪ್ಪ ಎಂಬವರು ಮಾತನಾಡಿದ ಆಡಿಯೋ ಈ ಹಿಂದೆ ವೈರಲ್ ಆಗಿತ್ತು. ನೀಡಿದ್ದ 15 ಲಕ್ಷ ಹಣವನ್ನು ಕೇಳಲು ಶಾಸಕರಿಗೆ ಪರಸಪ್ಪ ಅವರು ಕರೆ ಮಾಡಿದ್ದರು. ಈ ವೇಳೆ ಪರಸಪ್ಪನನ್ನ ಶಾಸಕರು ತರಾಟೆಗೆ ತೆಗೆದುಕೊಂಡಿದ್ದು, ಇದರ ಆಡಿಯೋ ಕೆಲ ಹಿಂದೆ ವೈರಲ್ ಆಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.