AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BDA ಸ್ವಾಧೀನ ಪಡಿಸಿಕೊಂಡ ಜಮೀನಿನಲ್ಲಿ ಬೆಲೆಬಾಳುವ ಮರಗಳ ಮಾರಣಹೋಮ, ಬಿಜೆಪಿ ಶಾಸಕ ಕೈವಾಡದ ಶಂಕೆ

ಬೆಂಗಳೂರು ಉತ್ತರ ತಾಲೂಕು ಗಾಣಿಗರಹಳ್ಳಿಯಲ್ಲಿ, ಬಿಡಿಎ ಶಿವರಾಮ ಕಾರಂತ ಬಡಾವಣೆಗೆ ಭೂಸ್ವಾದಿನವಾಗಿರುವ ನೂರಾರು ಎಕರೆಯ ಪ್ರದೇಶದಲ್ಲಿ ಬೆಳೆಯಲಾಗಿದ್ದ ನೂರಾರು ಬೆಲೆ ಬಾಳುವ ಮರಗಳನ್ನು ಪ್ರಭಾವಿ ರಾಜಕಾರಣಿಯೊಬ್ಬರು ಕಡಿದು ಹಾಕಿದ್ದಾರೆ.

BDA ಸ್ವಾಧೀನ ಪಡಿಸಿಕೊಂಡ ಜಮೀನಿನಲ್ಲಿ ಬೆಲೆಬಾಳುವ ಮರಗಳ ಮಾರಣಹೋಮ, ಬಿಜೆಪಿ ಶಾಸಕ ಕೈವಾಡದ ಶಂಕೆ
ಮರಗಳ ಮಾರಣಹೋಮ
ಬಿ ಮೂರ್ತಿ, ನೆಲಮಂಗಲ
| Updated By: ಆಯೇಷಾ ಬಾನು|

Updated on: Aug 06, 2023 | 11:17 AM

Share

ನೆಲಮಂಗಲ, ಆ.06: ಜನಪ್ರತಿನಿಧಿಗಳು ಅಂದ್ರೆ ಸರ್ಕಾರದ ಕಾವಲುಗಾರರು ಎಂದರೆ ತಪ್ಪಾಗಲಾರದು, ಸರ್ಕಾರದ ಆಸ್ತಿ ಪಾಸ್ತಿಗಳು ಹಾಳಾಗದಂತೆ, ಸರ್ಕಾರದ ಖಜಾನೆ ಬರಿದಾಗದಂತೆ ನೋಡಿಕೊಳ್ಳಬೇಕು. ಅಷ್ಟೆ ಅಲ್ಲ ಪರಿಸರ ಸಂರಕ್ಷಣೆಯಲ್ಲಿಯೂ ರಾಜಕಾರಣಿಗಳ ಪಾತ್ರ ಬಹುಮುಖ್ಯವಾಗಿರುತ್ತದೆ. ಆದ್ರೆ ಇಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರು ಬಿಡಿಎ‌ಗೆ ಸೇರಿದ ಜಾಗದಲ್ಲಿ ಬೆಲೆಬಾಳುವ ಮರಗಳನ್ನ ಕಡಿದು ಉರುಳಿಸಿದ್ದಾರೆ.

ಬೆಂಗಳೂರು ಉತ್ತರ ತಾಲೂಕು ಗಾಣಿಗರಹಳ್ಳಿಯಲ್ಲಿ, ಬಿಡಿಎ ಶಿವರಾಮ ಕಾರಂತ ಬಡಾವಣೆಗೆ ಭೂಸ್ವಾದಿನವಾಗಿರುವ ನೂರಾರು ಎಕರೆಯ ಈ ಪ್ರದೇಶದಲ್ಲಿ ಪ್ರಭಾವಿ ರಾಜಕಾರಣಿ, ಮಾಜಿ ಸಿಎಂ ಯಡಿಯೂರಪ್ಪ ಬೀಗರು, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಮರಿಸ್ವಾಮಿ ತಮ್ಮ ಸ್ವಾರ್ಥಕ್ಕಾಗಿ ಮರಗಳನ್ನ ಕಡಿದು ಲಪಟಾಯಿಸಲು ಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ತೇಗ, ಸಿಲ್ವರ್ ಸೇರಿದಂತೆ ಬೆಲಬಾಳುವ ಮರಗಳನ್ನು ಕಡಿಯಲಾಗಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಘಟನೆ ಸಂಬಂಧ ಮರಿಸ್ವಾಮಿ ಅವರು ಹೇಳೊದೆ ಬೇರೆ, ಹೇಗಿದ್ರು ಬಿಡಿಎನವರು ನಿವೇಶನ ಮಾಡುವಾಗ ಮರ ಕಡಿವುದು ಗ್ಯಾರಂಟಿ ಹಾಗಾಗಿ ಈ ಹಿಂದೆ ಶಾಸಕ ಎಸ್.ಮುನಿರಾಜು ಮರಗಳನ್ನ ಬೆಳಸಿದ್ರು, ನಮ್ಮದು ವುಡ್ ಇಂಡಸ್ಟ್ರಿ ಇರುವುದರಿಂದ ಮರ ನಮ್ಮವರೆ ಕಡಿದಿದ್ದು ಎಂದು ತಿಳಿಸಿದರು.

ಇದನ್ನೂ ಓದಿ: ರಸ್ತೆ ಬದಿ ನಿಲ್ಲಿಸಿದ್ದ ಬೈಕ್​ಗಳಿಗೆ ಕಾರು ಡಿಕ್ಕಿ; ಪವಾಡ ಸದೃಶ ರೀತಿಯಲ್ಲಿ ಪಾರಾದ ಯುವಕರು

ಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಹೋಬಳಿ ಸರ್ವೆ ನಂಬರ್‌ 76ರಲ್ಲಿ ಬರುವಂತ ಜಮೀನು ಇದಾಗಿದ್ದು ಈ ಪ್ರದೇಶದಲ್ಲಿ ಇವರು ಮರ ಕಡಿಯುತ್ತಾರೆ ಎಂದು ಮೊದಲೇ ತಿಳಿದುಕೊಂಡ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ರು. ಬಳಿಕ‌ ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ನೋಡಿ ಮರಗಳ ಸರ್ವೆ ಕಾರ್ಯ ನಡೆಸಿದ್ದರು. ಮರಗಳಿಗೆ ನಂಬರ್ ಮೂಲಕ ಗುರುತು ಮಾಡಿ ಯಾವ ಮರ, ಎಷ್ಟು ಮೌಲ್ಯ ಎಂದು ಗುರುತಿಸಿದ್ದರು. ಆದರೆ ಇದ್ಯಾವುದನ್ನೂ ಲೆಕ್ಕಿಸದ ಮರಿಸ್ವಾಮಿಯವರು ಮರ ಕಡಿಸಿದ್ದಾರಂತೆ. ಸುಮಾರು 10 ಕಾರ್ಮಿಕರು, ಚೈನ್ ಸಾ ಮೆಷನ್ ಬಳಸಿಕೊಂಡು 80 ಕ್ಕೂ ಹೆಚ್ಚು ಮರಗಳನ್ನು ಧರೆಗೆ ಉರುಳಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬರುತ್ತಿದ್ದಂತೆ ಕೂಲಿ ಕಾರ್ಮಿಕರು ಪರಾರಿಯಾಗಿದ್ದಾರೆ.

ಇನ್ನೂ ಅರಣ್ಯ ಇಲಾಖೆ ಅಧಿಕಾರಿಗಳು ಪರಾರಿಯಾದವರ ವಿರುದ್ಧ ಕ್ರಮ ತೆಗೆದುಕೊಳ್ಳುವ ನಿಮತ್ತ ಕೇಸ್ ದಾಖಲು ಮಾಡಿದ್ದಾರೆ. ಒಟ್ಟಾರೆ ಪರಿಸರ ಅರಣ್ಯ ರಕ್ಷಣೆಗೆ ಕೈಜೋಡಿಸಬೇಕಿರುವ ಜನಪ್ರತಿನಿದಿಗಳೆ ಈ ರೀತಿ ಭಕ್ಷಕರಾದ್ರೆ ಮುಂದೇನೂ ಅನ್ನೋದು ಪ್ರಶ್ನೆಯಾಗಿಯೇ ಉಳಿದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ