AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ಬ್ಲಡ್ ಬ್ಯಾಂಕ್​ಗಳಲ್ಲಿ ಮತ್ತೆ ರಕ್ತದ ಕೊರತೆ; ರಕ್ತದಾನ ಪ್ರಮಾಣದಲ್ಲಿ ಭಾರಿ ಇಳಿಕೆ- ಕಾರಣವೇನು?

ಕಳೆದ ವರ್ಷ ಕೊವಿಡ್ ಸಂದರ್ಭದಲ್ಲಿ ಕೂಡ ಇದೇ ಸಮಸ್ಯೆ ಎದುರಾಗಿತ್ತು. ಸ್ವಲ್ಪ ಚೇತರಿಕೆ ಕಾಣುವಷ್ಟುವರಲ್ಲಿ ಮತ್ತೆ ರಕ್ತಕ್ಕೆ ಕೊರತೆ ಎದುರಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ವ್ಯಾನ್ ನಿಲ್ಲಿಸಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ.

Bengaluru: ಬ್ಲಡ್ ಬ್ಯಾಂಕ್​ಗಳಲ್ಲಿ ಮತ್ತೆ ರಕ್ತದ ಕೊರತೆ; ರಕ್ತದಾನ ಪ್ರಮಾಣದಲ್ಲಿ ಭಾರಿ ಇಳಿಕೆ- ಕಾರಣವೇನು?
ಪ್ರಾತಿನಿಧಿಕ ಚಿತ್ರ
TV9 Web
| Updated By: ganapathi bhat|

Updated on:Jan 24, 2022 | 10:00 AM

Share

ಬೆಂಗಳೂರು: ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಬ್ಲಡ್ ಸಮಸ್ಯೆ ಎದುರಾಗಿದೆ. ಬ್ಲಡ್‌ ಬ್ಯಾಂಕ್‌ಗಳು ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿವೆ. ಸಪ್ಟೆಂಬರ್ ತಿಂಗಳಿನಿಂದ ನವೆಂಬರ್‌ ವರೆಗೂ ಚೇತರಿಕೆ ಕಂಡಿದ್ದ ಬ್ಲಡ್ ಬ್ಯಾಂಕ್‌ಗಳು ಮತ್ತೆ ಸಮಸ್ಯೆ ಎದುರಿಸುತ್ತಿವೆ. ಡಿಸೆಂಬರ್ ತಿಂಗಳಿನಿಂದ ಬ್ಲಡ್ ಡೊನೇಟ್ ಪ್ರಮಾಣದಲ್ಲಿ ಭಾರೀ ಇಳಿಕೆ ಉಂಟಾಗಿದೆ. ಕೊರೊನಾ ಹೆಚ್ಚಾದ ಹಿನ್ನೆಲೆ ಬ್ಲಡ್ ಸಿಗದೆ ಬ್ಲಡ್ ಬ್ಯಾಂಕ್‌ಗಳು ಖಾಲಿಯಾಗ್ತಿದೆ ಎಂದು ಹೇಳಲಾಗಿದೆ. ಈ ಮೊದಲು ತಿಂಗಳಿಗೆ 3 ಸಾವಿರ ಯೂನಿಟ್ ಬ್ಲಡ್ ಕಲೆಕ್ಟ್ ಆಗುತ್ತಿತ್ತು. ಆದರೆ ಈಗ 800 ಯೂನಿಟ್ ಬ್ಲಡ್ ಕೂಡ ಸಿಗ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ರೋಗಿಗಳಿಗೆ ತಕ್ಷಣಕ್ಕೆ ಬ್ಲಡ್‌ ಬೇಕು ಅಂದ್ರೆ ಅರೆಂಜ್ ಮಾಡೋದು ಕಷ್ಟ. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬ್ಲಡ್ ಸಿಗದೆ ಪರದಾಟ ಉಂಟಾಗಿದೆ ಎಂದು ತಿಳಿದುಬಂದಿದೆ. ತುರ್ತು ರಕ್ತದ ಅವಶ್ಯಕತೆ ಇರುವ ರೋಗಿಗಳು, ಅಪಘಾತಕ್ಕೊಳಗಾದ ವ್ಯಕ್ತಿಗಳು ಮುಂತಾದವರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಆದರೆ, ಇದೀಗ ರಕ್ತದಾನ ಮಾಡುವ ಪ್ರಮಾಣ ಮತ್ತೆ ಇಳಿಕೆ ಆಗಿದ್ದು ಬ್ಲಡ್ ಬ್ಯಾಂಕ್​ಗಳಲ್ಲಿ ಸಮಸ್ಯೆ ಎದುರಾಗಿದೆ.

ರಕ್ತದಾನ ಪ್ರಮಾಣ ಇಳಿಕೆಗೆ ಕಾರಣವೇನು?

  • ಕೊರೊನಾ ಹಿನ್ನೆಲೆ ಕಾಲೇಜುಗಳು ಬಂದ್ ಆಗಿವೆ
  • ಸಭೆ, ಸಮಾರಂಭಗಳಿಗೆ ಅವಕಾಶ ಇಲ್ಲ
  • ಐಟಿ- ಬಿಟಿ ಕಂಪನಿಗಳಲ್ಲಿ ವರ್ಕ್ ಫ್ರಂ ಹೋಂ ನೀಡಲಾಗಿದೆ
  • ಇಷ್ಟು ವಲಯಗಳಲ್ಲಿ ಬ್ಲಡ್ ಕ್ಯಾಂಪ್‌ಗಳಿಂದ ಹೆಚ್ಚು ಬ್ಲಡ್ ಸ್ಟೋರೆಜ್ ಆಗ್ತಿತ್ತು. ಆದರೆ ಈಗ ಆಗುತ್ತಿಲ್ಲ
  • ಕೊರೊನಾದಿಂದ ಆರೋಗ್ಯವಂತರೂ ಬ್ಲಡ್ ಡೊನೇಟ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ
  • ಕೊರೊನಾ ಆತಂಕದಿಂದ ಬ್ಲಡ್ ಡೊನೇಟ್ ಮಾಡಲು ಮುಂದಾಗದ ಜನ

ಆರೋಗ್ಯವಂತರು ರಕ್ತದಾನ ಮಾಡುವಂತೆ ಮನವಿ

ಬ್ಲಡ್ ಬ್ಯಾಂಕ್​ಗಳಲ್ಲಿ ರಕ್ತದ ಕೊರತೆ ಹಿನ್ನೆಲೆ ಆರೋಗ್ಯವಂತರು ರಕ್ತದಾನ ಮಾಡುವಂತೆ ಬ್ಲಡ್ ಬ್ಯಾಂಕ್‌ಗಳು ಮನವಿ ಮಾಡಿವೆ. ರೆಡ್ ಕ್ರಾಸ್ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ರಕ್ತ ಸಿಗುತ್ತಿಲ್ಲ. ಹೀಗಾಗಿ ತೀರಾ ಎಮರ್ಜೆನ್ಸಿ ಇದ್ದವರಿಗೆ ಮಾತ್ರ ಬ್ಲಡ್ ಸಿಗುತ್ತಿದೆ. ಸಮಸ್ಯೆ ಹೇಗೆ ನಿಭಾಯಿಸೋದು ಎಂದು ಬ್ಲಡ್ ಬ್ಯಾಂಕ್ ಗಳಿಗೆ ಚಿಂತೆಯಾಗಿದೆ.

ಕಳೆದ ವರ್ಷ ಕೊವಿಡ್ ಸಂದರ್ಭದಲ್ಲಿ ಕೂಡ ಇದೇ ಸಮಸ್ಯೆ ಎದುರಾಗಿತ್ತು. ಸ್ವಲ್ಪ ಚೇತರಿಕೆ ಕಾಣುವಷ್ಟುವರಲ್ಲಿ ಮತ್ತೆ ರಕ್ತಕ್ಕೆ ಕೊರತೆ ಎದುರಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ವ್ಯಾನ್ ನಿಲ್ಲಿಸಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ.

ತುರ್ತಾಗಿ ಬ್ಲಡ್ ಸಿಗದೆ ಯಾರಿಗೆಲ್ಲ ಸಮಸ್ಯೆ ಆಗ್ತಿದೆ?

  • ನಿತ್ಯ ಡಯಾಲಿಸಿಸ್​ಗೆ ಬರುವ ರೋಗಿಗಳಿಗೆ ಸಮಸ್ಯೆ
  • ಆಕ್ಸಿಡೆಂಟ್ ಪ್ರಕರಣಗಳಲ್ಲಿ‌ ತೀವ್ರ ರಕ್ತಸ್ರಾವ ಆದವರಿಗೆ ಬ್ಲಡ್ ಒದಗಿಸಲು ಕಷ್ಟ
  • ಗರ್ಭಿಣಿ ಹೆಂಗಸರಿಗೆ ರಕ್ತಕ್ಕೆ ಅಭಾವ ಉಂಟಾಗಿದೆ

ಇದನ್ನೂ ಓದಿ: ರಕ್ತದಾನ ಮಾಡುವ ಅಭ್ಯಾಸ ಇದೆಯೇ? ಇದರ ಹಿಂದಿನ ಆರೋಗ್ಯ ಪ್ರಯೋಜನಗಳ ಕುರಿತು ಇಲ್ಲಿದೆ ಮಾಹಿತಿ

ಇದನ್ನೂ ಓದಿ: Blood Pressure: ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು? ಇಲ್ಲಿದೆ ಮಾಹಿತಿ

Published On - 9:59 am, Mon, 24 January 22