ಬೆಂಗಳೂರಿನಲ್ಲಿ ಡೆಂಗ್ಯೂ ಹರಡುವಿಕೆ ನಿಯಂತ್ರಣಕ್ಕೆ ಅಖಾಡಕ್ಕಿಳಿದ ನಮ್ಮ ಮೆಟ್ರೋ ಸಿಬ್ಬಂದಿ!

| Updated By: ಗಣಪತಿ ಶರ್ಮ

Updated on: Jul 03, 2024 | 11:28 AM

ಬೆಂಗಳೂರಿನಲ್ಲಿ ಡೆಂಗ್ಯೂ ಹಾವಳಿ ಮಿತಿ ಮೀರಿದ ಕಾರಣ ಸಾರ್ವಜನಿಕ ಸಾರಿಗೆಗಳಲ್ಲಿ ಓಡಾಡುವವರಿಗೂ ಭಯ ಶುರುವಾಗಿದೆ. ಸ್ವಚ್ಛತೆ ಇಲ್ಲದ ಕಡೆ, ನೀರು ನಿಂತ ಕಡೆ ಸೊಳ್ಳೆ ಕಚ್ಚಿಸಿಕೊಂಡು ತಮಗೂ ಸೋಂಕು ಹರಡುತ್ತದೆಯೋ ಎಂಬ ಆತಂಕ ಜನರಲ್ಲಿದೆ. ಇದನ್ನು ನಿವಾರಿಸಲು ನಮ್ಮ ಮೆಟ್ರೋ ಕೂಡ ಈಗ ಕ್ರಮಕ್ಕೆ ಮುಂದಾಗಿದೆ. ಮೆಟ್ರೋ ಸಿಬ್ಬಂದಿ ಕೂಡ ಈಗ ಔಷಧಿ ಸಂಪಡಣೆ ಸೇರಿ ಮುನ್ನೆಚ್ಚರಿಕಾ ಕ್ರಮಗಳಲ್ಲಿ ತೊಡಗಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಡೆಂಗ್ಯೂ ಹರಡುವಿಕೆ ನಿಯಂತ್ರಣಕ್ಕೆ ಅಖಾಡಕ್ಕಿಳಿದ ನಮ್ಮ ಮೆಟ್ರೋ ಸಿಬ್ಬಂದಿ!
ಬೆಂಗಳೂರಿನಲ್ಲಿ ಡೆಂಗ್ಯೂ ಹರಡುವಿಕೆ ನಿಯಂತ್ರಣಕ್ಕೆ ಅಖಾಡಕ್ಕಿಳಿದ ನಮ್ಮ ಮೆಟ್ರೋ ಸಿಬ್ಬಂದಿ!
Follow us on

ಬೆಂಗಳೂರು, ಜುಲೈ 3: ಕರ್ನಾಟಕದಾದ್ಯಂತ ಡೆಂಗ್ಯೂ ಹರಡುವಿಕೆ ತೀವ್ರಗೊಂಡಿದ್ದು, ಬೆಂಗಳೂರು ರಾಜ್ಯದಲ್ಲೇ ನಂಬರ್ 1 ಆಗಿದೆ. ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಇದೀಗ ಸಾರ್ವಜನಿಕ ಸಾರಿಗೆಗಳಲ್ಲಿ ಓಡಾಟ ಮಾಡುವವರಿಗೂ ಆಂತಕ ಶರುವಾಗಿದೆ. ಇದರ ಬೆನ್ನಲ್ಲೇ ಬಿಎಂಆರ್​​ಸಿಎಲ್ ಕೂಡ ಎಚ್ಚೆತ್ತುಕೊಂಡಿದ್ದು, ನಮ್ಮ ಮೆಟ್ರೋ ನಿಲ್ದಾಣ ಸುತ್ತಮುತ್ತ ಹಾಗೂ ಕಚೇರಿ ಸುತ್ತಮುತ್ತ ಸ್ವಚ್ಛತೆ ಕಾಪಾಡುವಂತೆ ಸೂಚನೆ ನೀಡಿದೆ.

ಮೆಟ್ರೋ ಆವರಣದಲ್ಲಿ, ಕಚೇರಿ ಸುತ್ತಮುತ್ತ ನಿಂತ ನೀರು, ಮಳೆ ನೀರು, ಹಸಿ ಕಸ, ಸೊಳ್ಳೆಗಳ ಮೊಟ್ಟೆ ಶೇಖರಣೆ ಆಗುವಂಥ ಪ್ರದೇಶಗಳಿದ್ದರೆ ಅವುಗಳನ್ನು ಸ್ವಚ್ಛಗೊಳಿಸಲು ಸೂಚನೆ ನೀಡಲಾಗಿದೆ. ಮೆಟ್ರೋ ನಿಲ್ದಾಣಗಳಲ್ಲಿ ದಿನಕ್ಕೆ ಎರಡು ಬಾರಿ ಔಷಧ ಸಿಂಪಡಣೆ ಕಡ್ಡಾಯಗೊಳಿಸಲಾಗಿದೆ.

ಈಗಾಗಲೇ ಮೆಟ್ರೋ ವ್ಯಾಪ್ತಿಯ ಬಸ್ ನಿಲ್ದಾಣಗಳಲ್ಲಿ ಕೂಡ ನಮ್ಮ ಮೆಟ್ರೋ ಸಿಬ್ಬಂದಿಔಷಧ ಸಿಂಪಡಣೆ ಮಾಡುತ್ತಿದ್ದಾರೆ. ಇದರ ಜತೆಗೆ, ಸಿಬ್ಬಂದಿಯ ಆರೋಗ್ಯ ತಪಾಸಣೆಯನ್ನೂ ಬಿಎಂಆರ್​ಸಿಎಲ್ ಕಡ್ಡಾಯಗೊಳೊಸಿದೆ.

ಬೆಂಗಳೂರಿನಲ್ಲಿ ಮನೆ ಮನೆ ಸಮೀಕ್ಷೆ

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಹೆಚ್ಚಾಗುತ್ತಿರುವ ಕಾರಣ ಎಲ್ಲಾ ಜೋನ್​ಗಳಲ್ಲಿ ಮನೆಗಳ ಸರ್ವೆ ಮಾಡಿ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಲು ಬಿಬಿಎಂಪಿ ಮುಂದಾಗಿದೆ. ಮನೆಯಲ್ಲಿ ಎಷ್ಟು ಜನ ಇದ್ದಾರೆ, ಯಾರಿಗಾದರೂ ಜ್ವರ ಇದೆಯಾ? ಎಷ್ಟು ತೊಟ್ಟಿಗಳಿವೆ, ಮೈಕೈ ನೋವು, ಕೆಮ್ಮು ಇದೆಯಾ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಒಂದು ವೇಳೆ, ಲಕ್ಷಣಗಳು ಕಂಡುಬಂದರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಕ್ತಪರೀಕ್ಷೆ ಮಾಡಿಸಲು ಸಲಹೆ ನೀಡಲಾಗುತ್ತಿದೆ.

ರಕ್ತ ಪರೀಕ್ಷೆ ನಂತರ ಡೆಂಗ್ಯೂ ದೃಢಪಟ್ಟರೆ ಹೋಮ್ ಐಸೋಲೇಷನ್​​ನಲ್ಲಿ ಇರಿಸಲಾಗುತ್ತದೆ. ಬಿಬಿಎಂಪಿ ಆರೋಗ್ಯಾಧಿಕಾರಿಗಳು ಪ್ರತಿಯೊಂದು ಮಾಹಿತಿ ಪಡೆಯುತ್ತಿದ್ದಾರೆ. ಇಷ್ಟೇ ಅಲ್ಲದೆ, ಮನೆಗಳ ಬಳಿ ಔಷಧಿ ಸಿಂಪಡಣೆ ಮಾಡಿಸಲಾಗುತ್ತಿದೆ.

ಇದನ್ನೂ ಓದಿ: ಡೆಂಗ್ಯೂ ಹೆಚ್ಚಳ ಪರಿಣಾಮ; ಬೆಂಗಳೂರಿನಲ್ಲಿ ಪ್ಲೇಟ್​​ಲೆಟ್​​ಗೆ ಹೆಚ್ಚಿದ ಬೇಡಿಕೆ

ಬೆಂಗಳೂರಿನಲ್ಲಿ ಈ ವರ್ಷ ಈವರೆಗೆ 1,500ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:25 am, Wed, 3 July 24