AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ರೋ ಪ್ರಯಾಣಿಕರಿಗೆ ಶುಭ ಸುದ್ದಿ: ಹೊಸದಾಗಿ 12 ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ

ಮೆಟ್ರೋ ಪ್ರಯಾಣಿಕರ ಪಾರ್ಕಿಂಗ್ ಸಮಸ್ಯೆ ನಿವಾರಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ಹೊಸದಾಗಿ 12 ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಟೆಂಡರ್ ಆಹ್ವಾನಿಸಲಾಗಿದೆ. ಒಟ್ಟು ಕನಿಷ್ಠ 2,424 ಬೈಕ್‌ಗಳು ಹಾಗೂ 87 ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇರಲಿದ್ದು, ಬೈಕ್, ಕಾರು ಮತ್ತು ಜೀಪ್‌ಗಳಿಗೆ ಶುಲ್ಕ ನಿಗದಿ ಮಾಡಲಾಗಿದೆ. ಎಲ್ಲೆಲ್ಲಿ ಪಾರ್ಕಿಂಗ್ ವ್ಯವಸ್ಥೆ ಶುರುವಾಗಲಿದೆ, ಶುಲ್ಕ ಎಷ್ಟು ಎಂಬ ಮಾಹಿತಿ ಇಲ್ಲಿದೆ.

ಮೆಟ್ರೋ ಪ್ರಯಾಣಿಕರಿಗೆ ಶುಭ ಸುದ್ದಿ: ಹೊಸದಾಗಿ 12 ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ
ನಮ್ಮ ಮೆಟ್ರೋ ರೈಲು (ಸಾಂದರ್ಭಿಕ ಚಿತ್ರ)Image Credit source: BMRCL
ಕಿರಣ್​ ಸೂರ್ಯ
| Edited By: |

Updated on: Oct 07, 2026 | 12:18 PM

Share

ಮುಖ್ಯಾಂಶಗಳು

  • 12 ಮೆಟ್ರೋ ನಿಲ್ದಾಣಗಳಲ್ಲಿ ಹೊಸದಾಗಿ ಪಾರ್ಕಿಂಗ್ ವ್ಯವಸ್ಥೆ
  • 2,424 ಬೈಕ್‌ಗಳಿಗೆ ಪಾರ್ಕಿಂಗ್ ಸೌಲಭ್ಯ
  • ಕಾರುಗಳಿಗೆ ದಿನದ ಪಾರ್ಕಿಂಗ್ ಶುಲ್ಕ ₹60

ಬೆಂಗಳೂರು, ಅಕ್ಟೋಬರ್ 7: ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಶುಭ ಸುದ್ದಿ ನೀಡಿದೆ. ಮೆಟ್ರೋ ನಿಲ್ದಾಣಗಳ ಬಳಿ ಪಾರ್ಕಿಂಗ್ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಹೊಸದಾಗಿ 12 ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಹಲವು ಪ್ರಯಾಣಿಕರು ಮೆಟ್ರೋ ಬಳಸಲು ಹಿಂದೇಟು ಹಾಕುತ್ತಿದ್ದರು. ಖಾಸಗಿ ವಾಹನಗಳನ್ನೇ ಅವಲಂಬಿಸುತ್ತಿದ್ದ ಪ್ರಯಾಣಿಕರನ್ನು ಮೆಟ್ರೋ ಕಡೆ ಸೆಳೆಯಲು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಮೆಟ್ರೋ ಕನೆಕ್ಟಿವಿಟಿ ಹೆಚ್ಚಿಸುವ ಉದ್ದೇಶದಿಂದ ಪಾರ್ಕಿಂಗ್ ಇಲ್ಲದ ನಿಲ್ದಾಣಗಳಲ್ಲಿ ಜಾಗ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಈಗಿರುವ ಹಾಗೂ ಮುಂಬರುವ ಗುಲಾಬಿ ಮಾರ್ಗ ಸೇರಿದಂತೆ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುವ 12 ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಬಿಎಂಆರ್‌ಸಿಎಲ್ ಟೆಂಡರ್ ಆಹ್ವಾನಿಸಿದೆ. ಬೈಕ್, ಕಾರು ಹಾಗೂ ಜೀಪ್‌ಗಳಿಗೆ ಶುಲ್ಕ ನಿಗದಿ ಮಾಡಿ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಸೈಕಲ್‌ಗಳಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆ ಇರಲಿದೆ.

ಯಾವೆಲ್ಲಾ ನಿಲ್ದಾಣಗಳಲ್ಲಿ ಹೊಸದಾಗಿ ಪಾರ್ಕಿಂಗ್?

ನಲ್ಲೂರುಹಳ್ಳಿ ಮೆಟ್ರೋ ನಿಲ್ದಾಣದಲ್ಲಿ 82 ಬೈಕ್‌ಗಳಿಗೆ, ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣದಲ್ಲಿ 186 ಬೈಕ್‌ಗಳಿಗೆ, ಹೊಸಹಳ್ಳಿ ನಿಲ್ದಾಣದಲ್ಲಿ 156 ಬೈಕ್‌ಗಳಿಗೆ ಹಾಗೂ ಪಟ್ಟಣಗೆರೆ ನಿಲ್ದಾಣದಲ್ಲಿ 328 ಬೈಕ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮಾದಾವರದಲ್ಲಿ 328 ಬೈಕ್, ಚಿಕ್ಕಬಿದರಕಲ್ಲಿನಲ್ಲಿ 355 ಬೈಕ್, ಮಂತ್ರಿ ಸ್ಕ್ವೇರ್‌ನಲ್ಲಿ 450 ಬೈಕ್ ಮತ್ತು 87 ಕಾರು, ರಾಗಿಗುಡ್ಡದಲ್ಲಿ 230 ಬೈಕ್, ಬಿಟಿಎಂ ಲೇಔಟ್‌ನಲ್ಲಿ 216 ಬೈಕ್ ಹಾಗೂ ತಾವರೆಕೆರೆಯಲ್ಲಿ 155 ಬೈಕ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ.

ಐಐಎಂ-ಬಿ ನಿಲ್ದಾಣದಲ್ಲಿ 55 ಬೈಕ್, ಹುಳಿಮಾವು ನಿಲ್ದಾಣದಲ್ಲಿ 155 ಬೈಕ್ ಹಾಗೂ ಕಾಳೇನ ಅಗ್ರಹಾರ ನಿಲ್ದಾಣದಲ್ಲಿ 110 ಬೈಕ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ 12 ಮೆಟ್ರೋ ನಿಲ್ದಾಣಗಳಲ್ಲಿ ಒಟ್ಟು ಕನಿಷ್ಠ 2,424 ಬೈಕ್‌ಗಳು ಹಾಗೂ 87 ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ.

ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಕ್ ಶುಲ್ಕ ಎಷ್ಟು?

ಬೈಕ್‌ಗಳಿಗೆ ಮೊದಲ ನಾಲ್ಕು ಗಂಟೆಗೆ ₹15 ಶುಲ್ಕ ನಿಗದಿ ಮಾಡಲಾಗಿದೆ. ಬಳಿಕ ಪ್ರತಿ ಗಂಟೆಗೆ ₹5 ಶುಲ್ಕ ಇರಲಿದೆ. ದಿನದ ಪಾರ್ಕಿಂಗ್ ಶುಲ್ಕ ₹30 ಆಗಿರಲಿದೆ. ಕಾರು ಹಾಗೂ ಜೀಪ್‌ಗಳಿಗೆ ಮೊದಲ ನಾಲ್ಕು ಗಂಟೆಗೆ ₹30 ಶುಲ್ಕ ಇರಲಿದ್ದು, ಬಳಿಕ ಪ್ರತಿ ಗಂಟೆಗೆ ₹10 ಶುಲ್ಕ ವಿಧಿಸಲಾಗುತ್ತದೆ. ದಿನದ ಪಾರ್ಕಿಂಗ್ ಶುಲ್ಕ ₹60 ಇರಲಿದೆ.

ಇದನ್ನೂ ಓದಿ: ಹೊಸ ರೈಲುಗಳ ಸಂಚಾರಕ್ಕೆ ರೈಲ್ವೆ ಮಂಡಳಿ ಅನುಮೋದನೆ: ಶೀಘ್ರವೇ ನಮ್ಮ ಮೆಟ್ರೋ ಪಿಂಕ್​​ ಲೈನ್​​ ಕಾರ್ಯಾರಂಭ ಸಾಧ್ಯತೆ

ಪಾರ್ಕಿಂಗ್ ಸಮಸ್ಯೆ ನಿವಾರಿಸುವ ಮೂಲಕ ಹೆಚ್ಚಿನ ಪ್ರಯಾಣಿಕರನ್ನು ಮೆಟ್ರೋ ಕಡೆ ಸೆಳೆಯಲು ಬಿಎಂಆರ್‌ಸಿಎಲ್ ಈ ಕ್ರಮಕ್ಕೆ ಮುಂದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ಆಹಾರದಾಸೆಗೆ ಕಾರಿನ ಮೇಲೆ ಕಾಲಿಟ್ಟ ಕಾಡಾನೆ! ಪ್ರಯಾಣಿಕರು ಜಸ್ಟ್ ಮಿಸ್
ಆಹಾರದಾಸೆಗೆ ಕಾರಿನ ಮೇಲೆ ಕಾಲಿಟ್ಟ ಕಾಡಾನೆ! ಪ್ರಯಾಣಿಕರು ಜಸ್ಟ್ ಮಿಸ್
‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು
‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ: ಒಂದು ಅವಲೋಕನ
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ: ಒಂದು ಅವಲೋಕನ
ರಾಜ್ಯ ಸರ್ಕಾರಕ್ಕೆ 2000 ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್!
ರಾಜ್ಯ ಸರ್ಕಾರಕ್ಕೆ 2000 ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್!
ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಕಿರಿಕಿರಿಯ ಸಾಧ್ಯತೆ
ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಕಿರಿಕಿರಿಯ ಸಾಧ್ಯತೆ
ಎಟಿಎಂ ಯಂತ್ರವನ್ನೇ ಕಿತ್ತು, ಕಾರಿನಲ್ಲಿ ತುಂಬಿಸಿಕೊಂಡು ಪರಾರಿಯಾದ ಕಳ್ಳರು!
ಎಟಿಎಂ ಯಂತ್ರವನ್ನೇ ಕಿತ್ತು, ಕಾರಿನಲ್ಲಿ ತುಂಬಿಸಿಕೊಂಡು ಪರಾರಿಯಾದ ಕಳ್ಳರು!
ಜನರಿಗೆ ಎರಡು ಶಾಕ್ ನೀಡಲಿದೆ ಸರ್ಕಾರ
ಜನರಿಗೆ ಎರಡು ಶಾಕ್ ನೀಡಲಿದೆ ಸರ್ಕಾರ