ನಮ್ಮ ಮೆಟ್ರೋದಲ್ಲಿ ಹೊಸ ಪ್ರಯೋಗ: ಆತ್ಮಹತ್ಯೆ ತಡೆಗೆ ಇದೇ ಮೊದಲ ಬಾರಿಗೆ ಪಿಎಸ್ಡಿ ಅಳವಡಿಕೆ

| Updated By: ಆಯೇಷಾ ಬಾನು

Updated on: Jul 30, 2023 | 7:17 AM

ಎಲೆಕ್ಟ್ರಾನಿಕ್ ಸಿಟಿ ಬಳಿಯ ಕೋನಪ್ಪನ ಅಗ್ರಹಾರ ಬಳಿ ನಿರ್ಮಿಸುತ್ತಿರುವ (ಹಳದಿ ಮಾರ್ಗ) ಮೆಟ್ರೋ ನಿಲ್ದಾಣಕ್ಕೆ ಇನ್ಫೋಸಿಸ್ ಫೌಂಡೇಶನ್ ದೇಣಿಗೆಯಿಂದ ಪ್ಲ್ಯಾಟ್‌ಫಾರಂ ಸ್ಕ್ರೀನ್‌ಡೋರ್‌ ಅಳವಡಿಸಲಾಗುತ್ತಿದೆ.

ನಮ್ಮ ಮೆಟ್ರೋದಲ್ಲಿ ಹೊಸ ಪ್ರಯೋಗ: ಆತ್ಮಹತ್ಯೆ ತಡೆಗೆ ಇದೇ ಮೊದಲ ಬಾರಿಗೆ ಪಿಎಸ್ಡಿ ಅಳವಡಿಕೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಜುಲೈ 30: ನಮ್ಮ ಮೆಟ್ರೊ ನಿಲ್ದಾಣಗಳಲ್ಲಿ(Namma Metro) ಪ್ಲ್ಯಾಟ್‌ಫಾರಂ ಸ್ಕ್ರೀನ್‌ಡೋರ್‌ (ಪಿಎಸ್‌ಡಿ) ವ್ಯವಸ್ಥೆ ಕಲ್ಪಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ(BMRCL) ಮುಂದಾಗಿದೆ. ಈ ವ್ಯವಸ್ಥೆ ಪ್ಲ್ಯಾಟ್‌ಫಾರಂಗಳ ಸುರಕ್ಷತೆಯನ್ನು ಹೆಚ್ಚಿಸುವುದೂ ಅಲ್ಲದೇ, ಪ್ರಯಾಣಿಕರು ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುವುದನ್ನು ತಪ್ಪಿಸಲಿದೆ.

ಸದ್ಯ ರಾಜ್ಯದಲ್ಲಿ ಇದೆ ಮೊದಲ ಬಾರಿಗೆ ಪ್ಲ್ಯಾಟ್‌ಫಾರಂ ಸ್ಕ್ರೀನ್‌ಡೋರ್‌ (ಪಿಎಸ್ಡಿ) ಅಳವಡಿಸಲಾಗುತ್ತಿದೆ. ನಗರದಲ್ಲಿ 63 ಸ್ಟೇಷನ್ ಗಳಿದ್ದು ಯಾವುದರಲ್ಲಿಯೂ ಈ ವ್ಯವಸ್ಥೆ ಅಳವಡಿಸಿಕೊಂಡಿಲ್ಲ. ಎಲೆಕ್ಟ್ರಾನಿಕ್ ಸಿಟಿ ಬಳಿಯ ಕೋನಪ್ಪನ ಅಗ್ರಹಾರ ಬಳಿ ನಿರ್ಮಿಸುತ್ತಿರುವ (ಹಳದಿ ಮಾರ್ಗ) ಮೆಟ್ರೋ ನಿಲ್ದಾಣಕ್ಕೆ ಇನ್ಫೋಸಿಸ್ ಫೌಂಡೇಶನ್ ದೇಣಿಗೆಯಿಂದ ಪ್ಲ್ಯಾಟ್‌ಫಾರಂ ಸ್ಕ್ರೀನ್‌ಡೋರ್‌ ಅಳವಡಿಸಲಾಗುತ್ತಿದೆ.

ಈಗಾಗಲೇ ಕೋನಪ್ಪನ ಅಗ್ರಹಾರ ಮೆಟ್ರೋ ಸ್ಟೇಷನ್ ಕಾಮಗಾರಿ ಮುಕ್ತಾಯದ‌ ಹಂತ ತಲುಪಿದ್ದು ಈ ವರ್ಷಾಂತ್ಯದ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ. ಇದರಿಂದ‌ ಮೆಟ್ರೋ ಸ್ಟೇಷನ್ ಗಳಲ್ಲಿ ಸಾಮಾಜಿಕ ಜಾಲತಾಣದ ಹುಚ್ಚಾಟ ಮತ್ತು ಸುಸೈಡ್ ಪ್ರಕರಣಗಳು ಕಡಿಮೆಯಾಗುತ್ತದೆ ಮತ್ತೊಂದು ಸಣ್ಣಪುಟ್ಟ ಮಕ್ಕಳು ಮೆಟ್ರೋ ಸ್ಟೇಷನ್ ಗೆ ಎಂಟ್ರಿ ಕೊಟ್ಟ ವೇಳೆ ಗೊತ್ತಾಗದೆ ಟ್ರ್ಯಾಕ್ ಬಳಿ ಹೋಗಿರುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿದ್ದು ಈ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಈ ಪ್ಲಾನ್ ಮಾಡಲು ಮುಂದಾಗಿದೆ.

ಇದನ್ನೂ ಓದಿ: Namma Metro: ಬೈಯಪ್ಪನಹಳ್ಳಿ – ಕೆಆರ್‌ ಪುರ ನಡುವೆ ಪ್ರಾಯೋಗಿಕ ಸಂಚಾರ ಆರಂಭಿಸಿದ ಮೆಟ್ರೋ; ಆಗಸ್ಟ್ ಅಂತ್ಯದ ವೇಳೆ ಸಿದ್ಧ

ಈಗಾಗಲೇ ‌ಈ ಪ್ಲ್ಯಾಟ್‌ಫಾರಂ ಸ್ಕ್ರೀನ್‌ಡೋರ್‌ ವ್ಯವಸ್ಥೆಯನ್ನು ಚೆನೈ ಮತ್ತು ದೆಹಲಿ ಮೆಟ್ರೋದಲ್ಲಿ ಅಳವಡಿಸಲಾಗಿದೆ. ಮುಂಬರುವ ಪಿಂಕ್‌ ಮತ್ತು ಬ್ಲೂ ಲೈನ್ ನಲ್ಲೂ ಇದನ್ನು ಅಳವಡಿಸಲು ಟೆಂಡರ್ ಕರೆಯಲಾಗಿದೆ. ಪಿಂಕ್‌ ಲೈನ್ ನಲ್ಲಿ ಬರುವ 12 ಅಂಡರ್ ಗ್ರೌಂಡ್ ಸ್ಟೇಷನ್ ಗಳಲ್ಲಿ ಈ ಪಿಎಸ್ಡಿ ಅಳವಡಿಸಲಾಗುತ್ತದೆ. ಬ್ಲೂ ಲೈನ್ ನಲ್ಲಿ ಬರುವ ಕೆಂಪೇಗೌಡ ಇಂಟರ್ನ್ಯಾಷನಲ್ ಏರ್ಪೋರ್ಟ್ ಬಳಿ ಎರಡು ಮೆಟ್ರೋ ಸ್ಟೇಷನ್ ಗಳಲ್ಲಿ ಅಳವಡಿಸಲಾಗುತ್ತದೆ. ಪಿಎಸ್ಡಿ ಎಂದರೆ ಫ್ಲಾಟ್ ಫಾರಂ ನಿಂದ ಟ್ರ್ಯಾಕ್ ನಡುವೆ ತಡೆಗೋಡೆ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ