Tomato Price Hike: ಇಳಿಕೆ ಕಾಣದ ಟೊಮೆಟೊ ದರ, ಇನ್ನೊಂದು ತಿಂಗಳು ಇದೇ ಪರಿಸ್ಥಿತಿ
ನಗರದ ಕೆ.ಆರ್. ಮಾರುಕಟ್ಟೆಯಲ್ಲಿ ನಿನ್ನೆ(ಜುಲೈ 29) ಒಂದು ಕೆಜಿ ಟೊಮೆಟೊ ದರ 135 ರೂಪಾಯಿ ಇತ್ತು. ಇಂದು ಒಂದು ಕೆಜಿ ಟೊಮೆಟೊ ದರ 140 ರಿಂದ 150 ರೂ. ಇದೆ.
ಬೆಂಗಳೂರು, ಜುಲೈ 30: ಸಾಮಾನ್ಯವಾಗಿ ಟೊಮೆಟೊ ದರ(Tomato Rate) ದಾಖಲೆಯ ಏರಿಕೆ ಕಂಡರೆ ಬಂದೆರಡು ವಾರದಲ್ಲಿ ಇಳಿಕೆಯಾಗುತ್ತಿತ್ತು. ಆದ್ರೆ ಈ ಬಾರಿ ತಿಂಗಳಾದ್ರು ಕೆಂಪು ರಾಣಿಯ ಬೆಲೆ ಕಡಿಮೆಯಾಗಿಲ್ಲ. ಇದೇ ಮೊದಲ ಬಾರಿಗೆ ಟೊಮೆಟೊ ಹಣ್ಣಿನ ಸೀಸನ್‌ನಲ್ಲಿ ಟೊಮೆಟೊ ದಾಖಲಾರ್ಹ ಬೆಲೆಗೆ ಏರಿದೆ. ಇನ್ನು ಒಂದು ತಿಂಗಳು ಟೊಮೆಟೊ ಖರೀದಿಸದೆ ಇದ್ದರೆ ಒಳ್ಳೆಯದು ಎಂಬಂತಾಗಿದೆ. ಐದು ಹತ್ತು ರೂಪಾಯಿಗೆ ಸಿಗುತ್ತಿದ್ದ ಟೊಮೆಟೊ ದಶಕದ ಹೊಸ್ತಿಲು ದಾಟಿದೆ. ಮೂರು ತಿಂಗಳು ಕಳೆಯುವುದಕ್ಕೆ ಬಂದ್ರೂ ಟೊಮೆಟೊ ದರ ಕಡಿಮೆಯಾಗಿಲ್ಲ. ಟೊಮೆಟೊ ಬೆಲೆಯುವವರು ಕೋಟ್ಯಾಧಿಪತಿಗಳಾಗುತ್ತಿದ್ದಾರೆ.
ನಗರದ ಕೆ.ಆರ್. ಮಾರುಕಟ್ಟೆಯಲ್ಲಿ ನಿನ್ನೆ(ಜುಲೈ 29) ಒಂದು ಕೆಜಿ ಟೊಮೆಟೊ ದರ 135 ರೂಪಾಯಿ ಇತ್ತು. ಇಂದು ಒಂದು ಕೆಜಿ ಟೊಮೆಟೊ ದರ 140 ರಿಂದ 150 ರೂ. ಇದೆ. ನೆರೆ ರಾಜ್ಯಗಳಲ್ಲಿ ವಿಪರಿತ ಮಳೆ ಇರುವ ಹಿನ್ನೆಲೆ ಟೊಮೆಟೊ ಬೆಳೆ ನಾಶವಾಗಿದೆ. ಹೀಗಾಗಿ ಉತ್ತರ ಭಾರತದಿಂದ ಭಾರಿ ಬೇಡಿಕೆ ಬಂದಿದೆ. ಅಲ್ಲದೇ, ನಮ್ಮ ರಾಜ್ಯದಲ್ಲಿಯೂ ಮಳೆಯ ಆರ್ಭಟ ಜೋರಾಗಿದ್ದು ಟೊಮೆಟೊ ಕಾಯಿಲೆ ಸಹ ಬರ್ತಿದೆ. ಜೊತೆಗೆ ಇದ್ದಂತಹ ಟೊಮೆಟೊ ಸ್ಟಾಕ್ ಕೂಡ ಖಾಲಿಯಾಗಿದೆ. ಹೀಗಾಗಿ ಅಲ್ಪ ಟೊಮೆಟೊಗೆ ಹೆಚ್ಚಿನ ಹಣ ನಿಗದಿ ಮಾಡಿ ವ್ಯಾಪರಸ್ಥರು ವ್ಯಾಪಾರ ಮಾಡ್ತಿದ್ದಾರೆ.
ಇನ್ನು ಒಂದು ತಿಂಗಳು ಇದೇ ಬೆಲೆ ಮುಂದುವರಿಯಲಿದೆ ಎಂದು ಮಾರುಕಟ್ಟೆಯಲ್ಲಿ ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಧ್ಯ ನಮ್ಮ ಬೆಂಗಳೂರಿಗೆ ಕೋಲಾರ, ಚಿಕ್ಕಬಳ್ಳಾಪುರ, ನಾಸಿಕ್, ಆಂಧ್ರದಿಂದ ಟೊಮೆಟೊ ಬರ್ತಿತ್ತು. ಇದೀಗಾ ಅಲ್ಲಿಂದಬರುವುದು ಸಹ ಕಡಿಮೆಯಾಗಿದೆ. ಹೀಗಾಗಿ ನಮ್ಮರಾಜ್ಯದಲ್ಲಿ ಟೊಮೆಟೊಗೆ ಫುಲ್ ಡಿಮ್ಯಾಂಡ್ ಬಂದಿದೆ.
ಟೊಮೆಟೊ ಬೆಲೆ ಸಧ್ಯಕ್ಕೆ ಕಡಿಮೆ ಆಗೋದಿಲ್ಲ. ಚೆನ್ನಾಗಿರುವ ಟೊಮೆಟೊಗೆ 160 ರಿಂದ 200 ರುಪಾಯಿ ಇದೆ. ಮಳೆ ಇರುವ ಕಾರಣ ಟೊಮೆಟೊ ಬೆಲೆ ಜಾಸ್ತಿಯಾಗಿದೆ. ಇನ್ನು ಒಂದು ತಿಂಗಳು ಇದೇ ರೀತಿಯ ಟೊಮೆಟೊ ಬೆಲೆ ಇರುತ್ತೆ. ಗ್ರಾಹಕರು ಬೆಲೆ ಕೇಳಿಯೇ ವಾಪಸ್ ಹೋಗುತ್ತಿದ್ದಾರೆ. ಒಂದು ಕೆಜಿ ಬದಲು ಅರ್ಧ ಕೆಜಿ ತೆಗೆದುಕೊಳ್ಳುತ್ತಿದ್ದಾರೆ. ಸಧ್ಯ ಬೆಂಗಳೂರಿಗೆ ಕೋಲಾರ, ಮೈಸೂರಿನಿಂದ ಟೊಮೆಟೊ ಬರ್ತಿದೆ. ನಮ್ಮ ಬೇಡಿಕೆಗೆ ತಕ್ಕಷ್ಟು ಟೊಮೆಟೊ ಸಿಗ್ತಿಲ್ಲ. ಬೇರೆ ರಾಜ್ಯಗಳಿಗೆ ಹೆಚ್ಚು ಟೊಮೆಟೊ ಹೋಗುತ್ತಿದೆ. ಹೀಗಾಗಿ ಬೆಲೆ ಏರಿಕೆ ಎಂದು ವ್ಯಾಪಾರಸ್ಥರು ತಿಳಿಸಿದರು.
ಇದನ್ನೂ ಓದಿ: Tomato: ಟೊಮೆಟೋ ಬೆಲೆ ನಿಯಂತ್ರಣಕ್ಕೆ ಸರ್ಕಾರ ಕ್ರಮ; ಕರ್ನಾಟಕ, ಮಹಾರಾಷ್ಟ್ರ, ಆಂಧ್ರದಿಂದ ಖರೀದಿಸಿ ಬೇರೆ ರಾಜ್ಯಗಳಿಗೆ ವಿತರಣೆ
ಇದರ ನಡುವೆ ಕೋಲಾರದ ತೋಟಗಾರಿಕೆ ಉಪನಿರ್ದೇಶಕ ಕೆ.ಆರ್.ಕುಮಾರಸ್ವಾಮಿ ಮಾತನಾಡಿದ್ದು ಕೋಲಾರ ಜಿಲ್ಲೆಯಲ್ಲಿ 6,000 ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಸಸಿಗಳನ್ನು ನಾಟಿ ಮಾಡಲಾಗಿದೆ. ಕೆಲವೇ ವಾರಗಳಲ್ಲಿ ಫಸಲು ಕಟಾವಿಗೆ ಬರಲಿದೆ ಎಂದು ತಿಳಿಸಿದ್ದಾರೆ. ಜಂಟಿ ನಿರ್ದೇಶಕ ಧನರಾಜ್ ಮಾತನಾಡಿ, 25,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು, ಪರಿಸ್ಥಿತಿ ಅನುಕೂಲಕರವಾಗಿದೆ. ಆದರೆ, ಹೆಚ್ಚು ಮಳೆಯಾದರೆ ಬೆಳೆ ಹಾನಿಯಾಗುವ ಸಂಭವವಿದೆ. ಮುಂಗಾರು ಬಿತ್ತನೆ ಜೂನ್ ಎರಡನೇ ವಾರದಲ್ಲಿ ಕೊನೆಗೊಂಡಿದ್ದು, ಆಗಸ್ಟ್ ಎರಡನೇ ಅಥವಾ ಮೂರನೇ ವಾರದಲ್ಲಿ ಟೊಮೆಟೊ ಕಟಾವಿಗೆ ಬರುತ್ತದೆ. ಇದು ಮಾರುಕಟ್ಟೆಯಲ್ಲಿ ಟೊಮೆಟೊಗೆ ಅಭಾವವನ್ನು ಕಡಿಮೆ ಮಾಡಬಹುದು ಎಂದರು. ಸದ್ಯ ಬೆಲೆ ಏರಿಕೆಯಿಂದಾಗಿ ಟೊಮೆಟೊ ಖರೀದಿ ಮಾಡುವುದೇ ಕಷ್ಟವಾಗಿದೆ. ನಿರ್ದೇಶಕರ ಹೇಳಿಕೆಯಂತೆ ಟೊಮೆಟೊ ಕಟಾವಿಗೆ ಬಂದರೆ ಕೊಂಚ ಮಟ್ಟಿಗೆ ಈ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:43 pm, Sun, 30 July 23