ವಿಮಾನ ನಿಲ್ದಾಣ ಮಾರ್ಗದ ಜನರಿಗೆ ಬಿಎಂಆರ್​​ಸಿಎಲ್ ಬ್ಯಾಡ್ ನ್ಯೂಸ್

| Updated By: Ganapathi Sharma

Updated on: Sep 26, 2024 | 7:01 AM

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಜನರಿಗೆ ಇದೀಗ ಬಿಎಂಆರ್​ಸಿಎಲ್ ಬ್ಯಾಡ್ ನ್ಯೂಸ್ ನೀಡಿದೆ. ಏರ್ ಪೋರ್ಟ್ ಮೆಟ್ರೋ ಮಾರ್ಗದಲ್ಲಿ ಎರಡು ನಿಲ್ದಾಣಗಳನ್ನು ಕೈಬಿಡಲು ಬಿಎಂಆರ್​ಸಿಎಲ್ ಮುಂದಾಗಿದೆ. ಆ ಎರಡು ಮೆಟ್ರೋ ಸ್ಟೇಷನ್​​ಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ವಿಮಾನ ನಿಲ್ದಾಣ ಮಾರ್ಗದ ಜನರಿಗೆ ಬಿಎಂಆರ್​​ಸಿಎಲ್ ಬ್ಯಾಡ್ ನ್ಯೂಸ್
ನಾಗಸಂದ್ರ To ಮಾದಾವರ ಮೆಟ್ರೋ
Follow us on

ಬೆಂಗಳೂರು, ಸೆಪ್ಟೆಂಬರ್ 26: ನಮ್ಮ ಮೆಟ್ರೋ ಬೆಂಗಳೂರಿಗರಿಗೆ ಜೀವನಾಡಿ. ನಗರದ ಟ್ರಾಫಿಕ್ ತಪ್ಪಿಸಿಕೊಳ್ಳಲು ಪ್ರಯಾಣಿಕರು ಸಾಧ್ಯವಿದ್ದಲ್ಲೆಲ್ಲ ನಮ್ಮ ಮೆಟ್ರೋ ಪ್ರಯಾಣವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಹೊಸ ಮೆಟ್ರೋ ಕಾಮಗಾರಿ ಬೇಗ ಮುಗಿಸಿ ಮತ್ತಷ್ಟು ಅನುಕೂಲ ಮಾಡಿಕೊಡಿ ಎಂದು ಮನವಿಗಳು ಕೇಳಿ ಬರುತ್ತಿವೆ. ಆದರೆ ಈಗ, ಮೆಟ್ರೋ ನಿರೀಕ್ಷೆಯಲ್ಲಿದ್ದ ವಿಮಾನ ನಿಲ್ದಾಣ ರಸ್ತೆಯ ಜನರಿಗೆ BMRCL ಶಾಕಿಂಗ್ ನ್ಯೂಸ್ ನೀಡಿದೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಬೇಸರ ಹೊರ ಹಾಕುತ್ತಿದ್ದಾರೆ.

ಸಿಲ್ಕ್ ಬೋರ್ಡ್​ನಿಂದ ವಿಮಾನ ನಿಲ್ದಾಣ ಸಂಪರ್ಕ ಕಲ್ಪಿಸುವ ನೀಲಿ ಮಾರ್ಗದ ನಮ್ಮ ಮೆಟ್ರೋ ಮೇಲೆ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಾಮಗಾರಿ ಯಾವಾಗ ಮುಗಿಯುತ್ತದೆಯೋ, ಸಂಚಾರ ಯಾವಾಗ ಆರಂಭವಾಗುತ್ತದೆಯೋ ಎಂದು ಕಾತರದಿಂದ ಕಾಯುತ್ತಿದ್ದಾರೆ. ಇದರ ನಡುವೆ ಬಿಎಂಆರ್​​ಸಿಎಲ್ ಇದೀಗ ಚಿಕ್ಕಜಾಲ ಮತ್ತು ಬೆಟ್ಟದ ಹಲಸೂರು ಎರಡು ಮೆಟ್ರೋ ಸ್ಟೇಷನ್​​ಗಳನ್ನು ಕೈಬಿಡಲು ಮುಂದಾಗಿದೆ‌.

ಮೆಟ್ರೋ ನಿಲ್ದಾಣಗಳ ಕೈಬಿಡಲು ಕಾರಣವೇನು?

ಚಿಕ್ಕಜಾಲ ಮತ್ತು ಬೆಟ್ಟದ ಹಲಸೂರು ನಿಲ್ದಾಣಗಳಿಗಾಗಿ ಈ ಭಾಗದ ಹಲವು ಕಂಪನಿಗಳು ಹಣ ಕೊಡುತ್ತೇವೆ ಎಂದು ಒಪ್ಪಂದ ಮಾಡಿಕೊಂಡಿದ್ದವು. ಆದರೆ ಈಗ ಕಂಪನಿಗಳು ಹಣ ಕೊಡಲು ಮುಂದೆ ಬರುತ್ತಿಲ್ಲ. ಬಿಎಂಆರ್​ಸಿಎಲ್​ಗೆ ಈ ಎರಡು ಸ್ಟೇಷನ್​​ಗಳನ್ನು ನಿರ್ಮಾಣ ಮಾಡಬೇಕಾದರೆ 300 ಕೋಟಿ ರೂಪಾಯಿಯಷ್ಟು ಹಣಕಾಸಿನ ಅವಶ್ಯಕತೆ ಇದೆ ಎನ್ನಲಾಗಿದೆ. ಇದಕ್ಕಾಗಿ ಮತ್ತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ. ಹೀಗಾಗಿ ಸದ್ಯ ಎರಡು ಸ್ಟೇಷನ್ ಕಾಮಗಾರಿಯನ್ನು ಕೈಬಿಡಲಿದ್ದೇವೆ ಎಂದು ಬಿಎಂಆರ್​ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚೌವ್ಹಾಣ್ ತಿಳಿಸಿದ್ದಾರೆ.

ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ ಸಾಧ್ಯತೆ: ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಸ್ಥಗಿತದ ಆತಂಕ

ಒಟ್ಟಿನಲ್ಲಿ ಸಿಲ್ಕ್ ಬೋರ್ಡ್ ಟು ಏರ್ ಪೋರ್ಟ್ ಮಾರ್ಗದ 2ಬಿ ಹಂತ 36.44 ಕಿಮೀ ಉದ್ದವಿದ್ದು, 17 ನಿಲ್ದಾಣಗಳು ಒಳಗೊಂಡಿವೆ. ಆದರೆ ಈಗ ಎರಡು ನಿಲ್ದಾಣಗಳನ್ನು ರದ್ದುಗೊಳಿಸಲು ಬಿಎಂಆರ್​ಸಿಎಲ್ ತೀರ್ಮಾನ ಮಾಡಿದ್ದು, ಈ ಭಾಗದ ಜನರು ಅಸಮಾಧಾನ ಹೊರಹಾಕಿದ್ದಾರೆ. ಆದರೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ