ಇನ್ಮುಂದೆ ಮೊಬೈಲ್‌ ಆ್ಯಪ್​ನಲ್ಲೇ ಸಿಗಲಿದೆ ಬಿಎಂಟಿಸಿ ಬಸ್ ಪಾಸ್; ಕ್ಯುಆರ್ ಕೋಡ್ ಸ್ಕ್ಯಾನ್‌ ಮಾಡಿ ಪ್ರಯಾಣಿಸುವುದಕ್ಕೆ ಅವಕಾಶ

| Updated By: preethi shettigar

Updated on: Mar 11, 2022 | 2:57 PM

ಖಾಸಗಿ ಸಂಸ್ಥೆ ಟುಮೊಕ್‌ ಕಂಪೆನಿಯ ಸಹಭಾಗಿತ್ವದಲ್ಲಿ ಮೊಬೈಲ್‌ ಆ್ಯಪ್‌ ಪರಿಚಯ ಮಾಡಿದ್ದು, ಪ್ರಯಾಣಿಕರು ಇನ್ಮುಂದೆ ಬಸ್‌ ನಿಲ್ದಾಣಗಳಿಗೆ ಭೇಟಿ ನೀಡಿ ಪಾಸ್‌ ಖರೀದಿಸುವ ಅಗತ್ಯವಿಲ್ಲ. ವೊಲ್ವೋ ಬಸ್‌ಗಳ ನಿರ್ವಾಹಕರಿಗೆ ಇಟಿಎಂ ಮಿಷನ್‌ ಇರುತ್ತದೆ. ಅದರಲ್ಲಿ ಮೊಬೈಲ್‌ನಲ್ಲಿನ ಕ್ಯುಆರ್ ಕೋಡ್‌ ಸ್ಕ್ಯಾನ್‌ ಮಾಡಬಹುದು.

ಇನ್ಮುಂದೆ ಮೊಬೈಲ್‌ ಆ್ಯಪ್​ನಲ್ಲೇ ಸಿಗಲಿದೆ ಬಿಎಂಟಿಸಿ ಬಸ್ ಪಾಸ್; ಕ್ಯುಆರ್ ಕೋಡ್ ಸ್ಕ್ಯಾನ್‌ ಮಾಡಿ ಪ್ರಯಾಣಿಸುವುದಕ್ಕೆ ಅವಕಾಶ
ಬಿಎಂಟಿಸಿ ( ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು: ಬಿಎಂಟಿಸಿ ಬಸ್​ ಪಾಸ್​ಗಾಗಿ ಇನ್ನೂ ಮುಂದಿನ ದಿನಗಳಲ್ಲಿ ಬಸ್​ ನಿಲ್ದಾಣಕ್ಕೆ ಭೇಟಿ ನೀಡುವ ಅಗತ್ಯ ಇಲ್ಲ. ಇಷ್ಟು ದಿನ ಪ್ರಯಾಣಿಕರ ಪಾಸ್ ಪೇಪರ್ ಫಾರ್ಮಟ್​ನಲ್ಲಿ ಇರುತ್ತಿತ್ತು. ಆದರೆ ಈಗ, ನಿಮ್ಮ ಮೊಬೈಲ್​ನಲ್ಲೇ ಬಸ್ ಪಾಸ್ ಸಿಗಲಿದೆ. ಮೊಬೈಲ್‌(Mobile) ಫೋನ್‌ನ ಕ್ಯುಆರ್ ಕೋಡ್(QR Code) ಸ್ಕ್ಯಾನ್‌ ಮಾಡಿ ಪ್ರಯಾಣಿಸುವುದಕ್ಕೆ ಬಿಎಂಟಿಸಿ(BMTC) ಅವಕಾಶ ನೀಡಿದೆ.

ಖಾಸಗಿ ಸಂಸ್ಥೆ ಟುಮೊಕ್‌ ಕಂಪೆನಿಯ ಸಹಭಾಗಿತ್ವದಲ್ಲಿ ಮೊಬೈಲ್‌ ಆ್ಯಪ್‌ ಪರಿಚಯ ಮಾಡಿದ್ದು, ಪ್ರಯಾಣಿಕರು ಇನ್ಮುಂದೆ ಬಸ್‌ ನಿಲ್ದಾಣಗಳಿಗೆ ಭೇಟಿ ನೀಡಿ ಪಾಸ್‌ ಖರೀದಿಸುವ ಅಗತ್ಯವಿಲ್ಲ. ವೊಲ್ವೋ ಬಸ್‌ಗಳ ನಿರ್ವಾಹಕರಿಗೆ ಇಟಿಎಂ ಮಿಷನ್‌ ಇರುತ್ತದೆ. ಅದರಲ್ಲಿ ಮೊಬೈಲ್‌ನಲ್ಲಿನ ಕ್ಯುಆರ್ ಕೋಡ್‌ ಸ್ಕ್ಯಾನ್‌ ಮಾಡಬಹುದು. ಪ್ರಯಾಣಿಕರಿಗೆ ಸಮಯ ಉಳಿಸಲು ಬಿಎಂಟಿಸಿ ವತಿಯಿಂದ ಹೊಸ ಪ್ರಯತ್ನ ನಡೆದಿದೆ. ಮುಂದಿನ ದಿನಗಳಲ್ಲಿ ಈ ಸೇವೆಗೆ ಚಾಲನೆ ನೀಡಲಾಗುತ್ತದೆ ಎಂದು ಬಿಎಂಟಿಸಿ ತಿಳಿಸಿದೆ.

2021ರಲ್ಲಿ ಬಿಎಂಟಿಸಿ ಸಂಗ್ರಹಿಸಿದ ದಂಡದ ಮೊತ್ತ ಎಷ್ಟು ಲಕ್ಷ ಗೊತ್ತಾ?

ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗಾಗಿ ಕೆಲ ಆಸನಗಳನ್ನು ಮೀಸಲಿಡಲಾಗುತ್ತದೆ. ಬಸ್​ನ ಮುಂಭಾಗದ ಕೆಲ ಆಸನಗಳು ಮಹಿಳೆಯರಿಗೆಂದು ನೀಡಲಾಗುತ್ತದೆ. ಹೀಗೆ ಮೀಸಲಿಟ್ಟ ಆಸನಗಳಲ್ಲಿ ಪುರುಷರು ಕೂರುವಂತಿಲ್ಲ. ಅಂತಹ ಆಸನಗಳನ್ನ ಆಕ್ರಮಿಸಿಕೊಂಡರೆ ಪುರುಷರಿಗೆ ದಂಡವನ್ನೂ ಹಾಕಲಾಗುತ್ತದೆ. 2021ರಲ್ಲಿ ಮಹಿಳೆಯರ ಆಸನದಲ್ಲಿ ಕುಳಿತ ಪುರುಷರಿಗೆ ದಂಡ ಹಾಕಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸುಮಾರು 1,00,300 ರೂ. ಹಣ ಸಂಗ್ರಹಿಸಿದೆ.

2021ರಲ್ಲಿ ಟಿಕೆಟ್ ಪಡೆಯದೇ ಪ್ರಯಾಣ ಮಾಡಿದ ಪ್ರಯಾಣಿಕರಿಗೆ ಮತ್ತು ಬಿಎಂಟಿಸಿ ಬಸ್​ಗಳಲ್ಲಿ ಮಹಿಳೆಯರಿಗೆ ಮೀಸಲಿಟ್ಟ ಆಸನಗಳನ್ನು ಆಕ್ರಮಿಸಿಕೊಂಡ ಪುರುಷರಿಗೆ ಬಿಎಂಟಿಸಿ ದಂಡ ಹಾಕಿದೆ. ಟಿಕೆಟ್ ಪಡೆಯದೇ ಪ್ರಯಾಣ ನಡೆಸಿದ ಪ್ರಯಾಣಿಕರ ದಂಡದ ಮೊತ್ತ 39,78,638 ರೂ.ಗಳಾಗಿದ್ದರೆ, ಮಹಿಳೆಯರಿಗೆ ಮೀಸಲಿಟ್ಟ ಆಸನಗಳನ್ನು ಬಳಸಿದ ಪುರುಷ ಪ್ರಯಾಣಿಕರಿಂದ 1,00,300 ರೂ. ದಂಡ ಸಂಗ್ರಹಿಸಿದೆ. ಅಂದರೆ 2021ರಲ್ಲಿ ಬಿಬಿಎಂಟಿ ಒಟ್ಟು 40 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹ ಮಾಡಿದೆ.

ಇನ್ನು 2022ರ ಜನವರಿಯಲ್ಲಿ ಬೆಂಗಳೂರು ಸೇರಿ ಸುತ್ತಮುತ್ತಲಿನ ಬಸ್ಗಳನ್ನು ಪರಿಶೀಲಿಸಿದ ನಿಗಮದ ತಪಾಸಣಾ ಸಿಬ್ಬಂದಿ 2,511 ಪ್ರಯಾಣಿಕರಿಗೆ 4,08,305 ರೂ. ದಂಡ ವಿಧಿಸಿದೆ.

ಈ ಬಗ್ಗೆ Bangalore Mirror ಜೊತೆ ಮಾತನಾಡಿದ ಅಧಿಕಾರಿಯೊಬ್ಬರು, ಮುಂದಿನ ತಿಂಗಳುಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲು ಸಿದ್ಧವಾಗಿದೆ. ಕೊರೊನಾ ಕಾರಣದಿಂದ 2021ರಲ್ಲಿ ಹೆಚ್ಚು ಕಾರ್ಯಾಚರಣೆಗಳನ್ನು ನಡೆಸಲಾಗಿಲ್ಲ. ಅಲ್ಲದೆ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗಿತ್ತು ಅಂತ ತಿಳಿಸಿದ್ದಾರೆ. ಜೊತೆಗೆ ಈ ವರ್ಷ 2,377 ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಿದ ಬಿಎಂಟಿಸಿ ತಪಾಸಣಾ ಸಿಬ್ಬಂದಿ 3,94,905 ರೂ. ಹಣ ಸಂಹಗ್ರಹಿಸಿದೆ. ಹಾಗೂ ಮಹಿಳೆಯರ ಆಸನಗಳನ್ನ ಆಕ್ರಮಿಸಿಕೊಂಡ 134 ಪುರುಷ ಪ್ರಯಾಣಿಕರಿಂದ ಒಟ್ಟು 13,400 ರೂ. ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:
ಬಸ್​ಗಳಲ್ಲಿ ಮಹಿಳಾ ಆಸನಗಳನ್ನು ಆಕ್ರಮಿಸಿಕೊಂಡ ಪುರುಷರಿಗೆ ದಂಡ! 2021ರಲ್ಲಿ ಬಿಎಂಟಿಸಿ ಸಂಗ್ರಹಿಸಿದ ದಂಡದ ಮೊತ್ತ ಎಷ್ಟು ಲಕ್ಷ ಗೊತ್ತಾ?

BMTC: ಬಾಕಿ ಬಿಲ್ ಪಾವತಿಸಲು ಬಿಎಂಟಿಸಿಗೆ 200 ಕೋಟಿ ರೂಪಾಯಿ ಬಿಡುಗಡೆ

Published On - 2:50 pm, Fri, 11 March 22