ಬಸ್ಗಳಲ್ಲಿ ಮಹಿಳಾ ಆಸನಗಳನ್ನು ಆಕ್ರಮಿಸಿಕೊಂಡ ಪುರುಷರಿಗೆ ದಂಡ! 2021ರಲ್ಲಿ ಬಿಎಂಟಿಸಿ ಸಂಗ್ರಹಿಸಿದ ದಂಡದ ಮೊತ್ತ ಎಷ್ಟು ಲಕ್ಷ ಗೊತ್ತಾ?
2021ರಲ್ಲಿ ಟಿಕೆಟ್ ಪಡೆಯದೇ ಪ್ರಯಾಣ ಮಾಡಿದ ಪ್ರಯಾಣಿಕರಿಗೆ ಮತ್ತು ಬಿಎಂಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಮೀಸಲಿಟ್ಟ ಆಸನಗಳನ್ನು ಆಕ್ರಮಿಸಿಕೊಂಡ ಪುರುಷರಿಗೆ ಬಿಎಂಟಿಸಿ ದಂಡ ಹಾಕಿದೆ.
ಬೆಂಗಳೂರು: ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗಾಗಿ ಕೆಲ ಆಸನಗಳನ್ನು ಮೀಸಲಿಡಲಾಗುತ್ತದೆ. ಬಸ್ನ ಮುಂಭಾಗದ ಕೆಲ ಆಸನಗಳು ಮಹಿಳೆಯರಿಗೆಂದು ನೀಡಲಾಗುತ್ತದೆ. ಹೀಗೆ ಮೀಸಲಿಟ್ಟ ಆಸನಗಳಲ್ಲಿ ಪುರುಷರು ಕೂರುವಂತಿಲ್ಲ. ಅಂತಹ ಆಸನಗಳನ್ನ ಆಕ್ರಮಿಸಿಕೊಂಡರೆ ಪುರುಷರಿಗೆ ದಂಡವನ್ನೂ (Fine) ಹಾಕಲಾಗುತ್ತದೆ. 2021ರಲ್ಲಿ ಮಹಿಳೆಯರ ಆಸನದಲ್ಲಿ ಕುಳಿತ ಪುರುಷರಿಗೆ ದಂಡ ಹಾಕಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸುಮಾರು 1,00,300 ರೂ. ಹಣ ಸಂಗ್ರಹಿಸಿದೆ.
2021ರಲ್ಲಿ ಟಿಕೆಟ್ ಪಡೆಯದೇ ಪ್ರಯಾಣ ಮಾಡಿದ ಪ್ರಯಾಣಿಕರಿಗೆ ಮತ್ತು ಬಿಎಂಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಮೀಸಲಿಟ್ಟ ಆಸನಗಳನ್ನು ಆಕ್ರಮಿಸಿಕೊಂಡ ಪುರುಷರಿಗೆ ಬಿಎಂಟಿಸಿ ದಂಡ ಹಾಕಿದೆ. ಟಿಕೆಟ್ ಪಡೆಯದೇ ಪ್ರಯಾಣ ನಡೆಸಿದ ಪ್ರಯಾಣಿಕರ ದಂಡದ ಮೊತ್ತ 39,78,638 ರೂ.ಗಳಾಗಿದ್ದರೆ, ಮಹಿಳೆಯರಿಗೆ ಮೀಸಲಿಟ್ಟ ಆಸನಗಳನ್ನು ಬಳಸಿದ ಪುರುಷ ಪ್ರಯಾಣಿಕರಿಂದ 1,00,300 ರೂ. ದಂಡ ಸಂಗ್ರಹಿಸಿದೆ. ಅಂದರೆ 2021ರಲ್ಲಿ ಬಿಬಿಎಂಟಿ ಒಟ್ಟು 40 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹ ಮಾಡಿದೆ.
ಇನ್ನು 2022ರ ಜನವರಿಯಲ್ಲಿ ಬೆಂಗಳೂರು ಸೇರಿ ಸುತ್ತಮುತ್ತಲಿನ ಬಸ್ಗಳನ್ನು ಪರಿಶೀಲಿಸಿದ ನಿಗಮದ ತಪಾಸಣಾ ಸಿಬ್ಬಂದಿ 2,511 ಪ್ರಯಾಣಿಕರಿಗೆ 4,08,305 ರೂ. ದಂಡ ವಿಧಿಸಿದೆ.
ಈ ಬಗ್ಗೆ Bangalore Mirror ಜೊತೆ ಮಾತನಾಡಿದ ಅಧಿಕಾರಿಯೊಬ್ಬರು, ಮುಂದಿನ ತಿಂಗಳುಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲು ಸಿದ್ಧವಾಗಿದೆ. ಕೊರೊನಾ ಕಾರಣದಿಂದ 2021ರಲ್ಲಿ ಹೆಚ್ಚು ಕಾರ್ಯಾಚರಣೆಗಳನ್ನು ನಡೆಸಲಾಗಿಲ್ಲ. ಅಲ್ಲದೆ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗಿತ್ತು ಅಂತ ತಿಳಿಸಿದ್ದಾರೆ. ಜೊತೆಗೆ ಈ ವರ್ಷ 2,377 ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಿದ ಬಿಎಂಟಿಸಿ ತಪಾಸಣಾ ಸಿಬ್ಬಂದಿ 3,94,905 ರೂ. ಹಣ ಸಂಹಗ್ರಹಿಸಿದೆ. ಹಾಗೂ ಮಹಿಳೆಯರ ಆಸನಗಳನ್ನ ಆಕ್ರಮಿಸಿಕೊಂಡ 134 ಪುರುಷ ಪ್ರಯಾಣಿಕರಿಂದ ಒಟ್ಟು 13,400 ರೂ. ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ
ಧರ್ಮಸ್ಥಳದ ಕನ್ಯಾಡಿ ಬಳಿ ದಿನೇಶ್ ಕೊಲೆ ಪ್ರಕರಣ; ಟಿವಿ9ಗೆ ಹಲ್ಲೆ ಮಾಡಿದ ಸಿಸಿಟಿವಿ ದೃಶ್ಯ ಲಭ್ಯ
ನಂಜನಗೂಡು ಶ್ರೀಕಂಠೇಶ್ವರನ ಹುಂಡಿ ಹಣ ಏಣಿಕೆ; ಎರಡು ತಿಂಗಳಲ್ಲಿ 2 ಕೋಟಿ ರೂ. ಹಣ ಸಂಗ್ರಹ