ನಾವಿರುವ ಕಟ್ಟಡದ ಬಳಿಯೇ ಬಾಂಬ್ ಹಾಕುತ್ತಿದ್ದಾರೆ; ಉಕ್ರೇನ್​ನಲ್ಲಿರುವ ಬಾಗಲಕೋಟೆ ವಿದ್ಯಾರ್ಥಿಯಿಂದ ವಾಟ್ಸಾಪ್ ಸಂದೇಶ

ಕ್ರೇನ್​ನಲ್ಲಿರುವ ಕರ್ನಾಟಕ ವಿದ್ಯಾರ್ಥಿ ಅಪೂರ್ವ ಕದಂಪುರ, ತಂದೆಗೆ ವಾಟ್ಸಾಪ್ ಸಂದೇಶ ಕಳಿಸಿದ್ದಾಳೆ. ನಾವು ಈಗ ಉಕ್ರೇನ್ನ ಖಾರ್ಕಿವ್ ನಗರದಲ್ಲಿದ್ದೇವೆ. ನಾವಿರುವ ಕಟ್ಟಡದ ಬಳಿಯೇ ಬಾಂಬ್ ಹಾಕುತ್ತಿದ್ದಾರೆ. ನಾವು ಅಪಾಯದಲ್ಲಿದ್ದೇವೆ ಅಂತ ತಿಳಿಸಿದ್ದಾಳೆ.

ನಾವಿರುವ ಕಟ್ಟಡದ ಬಳಿಯೇ ಬಾಂಬ್ ಹಾಕುತ್ತಿದ್ದಾರೆ; ಉಕ್ರೇನ್​ನಲ್ಲಿರುವ ಬಾಗಲಕೋಟೆ ವಿದ್ಯಾರ್ಥಿಯಿಂದ ವಾಟ್ಸಾಪ್ ಸಂದೇಶ
ಉಕ್ರೇನ್​ನಲ್ಲಿ ಸಿಲುಕಿರುವ ಕರ್ನಾಟಕ ವಿದ್ಯಾರ್ಥಿಗಳು
Follow us
| Updated By: sandhya thejappa

Updated on:Feb 26, 2022 | 9:06 AM

ಬೆಂಗಳೂರು: ಉಕ್ರೇನ್ (Ukraine) ಹಾಗೂ ರಷ್ಯಾ (Russia) ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆ ಕನ್ನಡಿಗರು ಉಕ್ರೇನ್ನಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ಉಕ್ರೇನ್ ಭಯಾನಕ ಸ್ಥಿತಿಯನ್ನ ವಿವರಿಸಿದ ಕರ್ನಾಟಕದ ವಿದ್ಯಾರ್ಥಿನಿ ಅಂಕಿತಾ, ಬೆಳಗ್ಗೆ ಎಚ್ಚರ ಆಗೋದೆ ಬಾಂಬ್ ಶಬ್ದದಿಂದ. ಉಕ್ರೇನ್ ಮೆಟ್ರೋ ನಿಲ್ದಾಣದೊಳಗೆ ವಾಸವಾಗಿದ್ದೇವೆ. ನಿನ್ನೆವರೆಗೂ ಪರಿಸ್ಥಿತಿ ಹತೋಟಿಗೆ ಬರುವ ನಿರೀಕ್ಷೆ ಇತ್ತು. ಆದರೆ ಇಂದು ಮನೆಗೆ ಅವಶ್ಯಕತೆ ವಸ್ತುಗಳನ್ನ ತರಲು ಹೋಗಿದ್ವಿ. ಕುಡಿಯೋಕ್ಕೆ ನೀರು ತರಲು ನಮ್ಮ ಅಪಾರ್ಟ್​ಮೆಂಟ್​ಗೆ ಹೋಗಿದ್ವಿ. ಆದರೆ ಏಕಾಏಕಿ ಭಯಾನಕ ಶಬ್ದ ಕೇಳಿ ಜನ ಓಡಿ ಹೋದರು. ಮನೆಯ ಕಿಟಕಿಗಳು ಅಲ್ಲಾಡುತ್ತಿದ್ದವು. ಉಕ್ರೇನ್ ಹಾಗೂ ರಷ್ಯಾದ ಗಡಿಯಿಂದ ಒಂದು ಕಿ.ಮೀ ದೂರದಲ್ಲಿ ನಾವಿದ್ದೇವೆ. ಇಲ್ಲಿಂದ ನಮ್ಮನ್ನು ರಕ್ಷಿಸಿ. ಇಲ್ಲಿ ಮೊಬೈಲ್ ಚಾರ್ಜ್ ಮಾಡಕ್ಕೂ ಆಗ್ತಾಯಿಲ್ಲ. ಮನೆಗೆ ಸಂಪರ್ಕ ಮಾಡಕ್ಕೂ ಆಗುತ್ತಿಲ್ಲ ಅಂತ ವಿದ್ಯಾರ್ಥಿನಿ ಹೇಳಿದ್ದಾಳೆ.

ಕೇಂದ್ರ ಸರ್ಕಾರಕ್ಕೆ ಅಪೂರ್ವ ಸಂದೇಶ: ಇನ್ನು ಉಕ್ರೇನ್​ನಲ್ಲಿರುವ ಕರ್ನಾಟಕ ವಿದ್ಯಾರ್ಥಿ ಅಪೂರ್ವ ಕದಂಪುರ, ತಂದೆಗೆ ವಾಟ್ಸಾಪ್ ಸಂದೇಶ ಕಳಿಸಿದ್ದಾಳೆ. ನಾವು ಈಗ ಉಕ್ರೇನ್​ನ ಖಾರ್ಕಿವ್ ನಗರದಲ್ಲಿದ್ದೇವೆ. ನಾವಿರುವ ಕಟ್ಟಡದ ಬಳಿಯೇ ಬಾಂಬ್ ಹಾಕುತ್ತಿದ್ದಾರೆ. ನಾವು ಅಪಾಯದಲ್ಲಿದ್ದೇವೆ ಅಂತ ತಿಳಿಸಿದ್ದಾಳೆ.  ಮೊಬೈಲ್ ಫ್ಲೈಟ್ ಮೋಡ್​ನಲ್ಲಿಡುವಂತೆ ಸೂಚಿಸಿದ್ದಾರೆ. ಹೀಗಾಗಿ ನಮ್ಮ ಸಂಪರ್ಕ ಸಿಗದಿದ್ದರೆ ಭಯ ಪಡಬೇಡಿ. ಹೆಚ್ಚು ವಿದ್ಯಾರ್ಥಿಗಳು ಉಕ್ರೇನ್ನ ಪೂರ್ವ ಭಾಗದಲ್ಲಿದ್ದೇವೆ. ನಾವು ಇಲ್ಲಿ ಸುಮಾರು 8 ಸಾವಿರ ವಿದ್ಯಾರ್ಥಿಗಳಿದ್ದೇವೆ. ನಮ್ಮನ್ನು ಪೋಲ್ಯಾಂಡ್ ಮೂಲಕ ಶಿಫ್ಟ್ ಮಾಡುವುದು ಕಷ್ಟ. ಸುಮಾರು 1,000 ರಿಂದ 1,500 ಕಿ.ಮೀ. ದೂರವಾಗುತ್ತದೆ. ಹೀಗಾಗಿ ರೊಮೇನಿಯಾ ಮೂಲಕ ಶಿಫ್ಟ್ ಮಾಡುವುದು ಸೂಕ್ತ. ದಯವಿಟ್ಟು ಕೇಂದ್ರ ಸರ್ಕಾರಕ್ಕೆ ನಮ್ಮ ಅಭಿಪ್ರಾಯ ತಿಳಿಸಿ ಅಂತ ಉಕ್ರೇನ್​ನಲ್ಲಿರುವ ಬಾಗಲಕೋಟೆಯ ಅಪೂರ್ವ ಸಂದೇಶ ಕಳುಹಿಸಿದ್ದಾಳೆ.

ಇಂಡಿಯನ್ ಎಂಬೆಸಿ ಉಕ್ರೇನ್​ನ ಕಾರ್ಕೀವ್ ಸಿಟಿಯಿಂದ ಪೋಲೆಂಡ್ಗೆ ಬನ್ನಿ ಅಂತ ಹೇಳುತ್ತಿದೆ. ಆದರೆ ಕಾರ್ಕಿವ್​ನಿಂದ ಹೋಗಲು ಕೆಲ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಸುಮಾರು 20 ಗಂಟೆಗಳ ಕಾಲ ಪ್ರಯಾಣ ಬೆಳೆಸಬೇಕು. ಅಷ್ಟು ಗಂಟೆಗಳ ಕಾಲ ಹೋಗುವುದಕ್ಕೆ ಭಯ ಆಗುತ್ತೆ. ಸದ್ಯ ಮೆಟ್ರೊ ಸ್ಟೇಷನ್​ನಲ್ಲಿ ಇದ್ದೀವಿ. ಮುಂದೆ ಏನು ಮಾಡಬೇಕು ಅಂತಾ ದಿಕ್ಕು ತೋಚುತ್ತಿಲ್ಲವೆಂದು ತುಮಕೂರು ಜಿಲ್ಲೆಯ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ನಾವು ಬದುಕುತ್ತೀವೋ ಇಲ್ವೋ ಗೊತ್ತಾಗುತ್ತಿಲ್ಲ- ವಿದ್ಯಾರ್ಥಿಮಿ ಕಣ್ಣೀರು: ಉಕ್ರೇನ್​ನಲ್ಲಿ ಎಂಬಿಬಿಎಸ್ ಮಾಡುತ್ತಿರುವ ರುಬೀನಾ, ಪ್ರಾಣಭಯದಿಂದ ತಾಯಿಗೆ ಕರೆ ಮಾಡಿ ಕಣ್ಣೀರು ಹಾಕಿದ್ದಾಳೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಹಟ್ಟಿ ರುಬೀನಾ, 3 ದಿನದಿಂದ ಸೂಕ್ತ ಆಹಾರ ಸಿಗದೆ ರುಬೀನಾ ಪರದಾಟ ಪಡುತ್ತಿದ್ದಾಳೆ. 3 ದಿನದಿಂದ ಬ್ರೆಡ್, ಚಿಪ್ಸ್ ತಿಂದು ನೀರು ಕುಡಿಯುತ್ತಿದ್ದೇವೆ. ಇದೀಗ ಬ್ರೆಡ್ ಕೂಡ ಸಿಗುತ್ತಿಲ್ಲ. ನಮ್ಮ ಬಳಿ 5-6 ಲೀಟರ್ ನೀರು ಬಿಟ್ಟರೆ ಬೇರೆ ಏನೂ ಇಲ್ಲ. ನಾವು ಬದುಕುತ್ತೀವೋ ಇಲ್ವೋ ಗೊತ್ತಾಗುತ್ತಿಲ್ಲ ಅಂತ ಅಳಲು ತೋಡಿಕೊಂಡಿದ್ದಾಳೆ.

ದಯವಿಟ್ಟು ನಮ್ಮನ್ನ ಭಾರತಕ್ಕೆ ವಾಪಸ್ ಕರೆಸಿಕೊಳ್ಳಿ ಅಂತ ಉಕ್ರೇನ್ನಲ್ಲಿರುವ ಕನ್ನಡಿಗರು ಕೇಂದ್ರ, ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ವಿಡಿಯೋ ಮೂಲಕ ತುಮಕೂರು ಜಿಲ್ಲೆಯ ಗುಬ್ಬಿ ಮೂಲದ ಸಂಪತ್ ಎಂಬ ವಿದ್ಯಾರ್ಥಿ ಮನವಿ ಮಾಡಿದ್ದಾನೆ.

ಇದನ್ನೂ ಓದಿ

ಸರ್ಕಾರ ನಡೆಸುತ್ತಿರುವ ಭಯೋತ್ಪಾದಕರನ್ನು ಕಿತ್ತೊಗೆದು ಅಧಿಕಾರ ಕೈಗೆತ್ತಿಕೊಳ್ಳಿ: ಉಕ್ರೇನ್ ಸೈನಿಕರನ್ನು ಆಗ್ರಹಿಸಿದ ಪುಟಿನ್

ಕಲಬುರಗಿ ಜಿಲ್ಲೆಯಲ್ಲಿ ಹೀನಾಯ ಕೃತ್ಯ: ಆ್ಯಸಿಡ್ ಕುಡಿಸಿ ರಾಡ್‌ನಿಂದ ಹೊಡೆದು ಅಕ್ಕಸಾಲಿಗನ ಕೊಲೆ

Published On - 9:03 am, Sat, 26 February 22