ಇನ್ಸೆಂಟಿವ್ ಆಸೆಗಾಗಿ ಶಕ್ತಿ ಟಿಕೆಟ್ ದುರುಪಯೋಗ ಮಾಡುತ್ತಿರುವ ಕಂಡಕ್ಟರ್ ಗಳು, ಹೇಗೆ? ಈ ಸುದ್ದಿ ಓದಿ

| Updated By: ಆಯೇಷಾ ಬಾನು

Updated on: Feb 19, 2024 | 2:42 PM

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಇರೋದು ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಲಿ ಅಂತ, ಮಹಿಳೆಯರು ಪ್ರಯಾಣ ಮಾಡಿದ ಹಣವನ್ನು ರಾಜ್ಯ ಸರ್ಕಾವೇ ನೀಡ್ತಿದೆ, ಆದರೆ ಕೆಲ ಬಿಎಂಟಿಸಿಯ ಕಿಲಾಡಿ ಕಂಡಕ್ಟರ್ ಗಳು, ಇನ್ಸೆಂಟಿವ್ ಆಸೆಗಾಗಿ ಬಸ್ ನಲ್ಲಿ ಮಹಿಳೆಯರೇ ಇಲ್ಲದಿದ್ರು ಸುಳ್ಳು ಲೆಕ್ಕ ತೋರಿಸುವುದು , ಮಹಿಳೆಯರಿಗೆ ನೀಡಬೇಕಿದ್ದ ಟಿಕೆಟ್ ಗಳನ್ನು ಪುರುಷ ಪ್ರಯಾಣಿಕರಿಗೆ ನೀಡಿ ಕಾಸು ಮಾಡಲು ಮುಂದಾಗಿದ್ದಾರೆ.

ಇನ್ಸೆಂಟಿವ್ ಆಸೆಗಾಗಿ ಶಕ್ತಿ ಟಿಕೆಟ್ ದುರುಪಯೋಗ ಮಾಡುತ್ತಿರುವ ಕಂಡಕ್ಟರ್ ಗಳು, ಹೇಗೆ? ಈ ಸುದ್ದಿ ಓದಿ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಫೆ.19: ಇನ್ಸೆಂಟಿವ್ ಆಸೆಗೆ ಕೆಲ ಕಿಲಾಡಿ ಕಂಡೆಕ್ಟರ್ಗಳು ಶಕ್ತಿ‌ ಯೋಜನೆ ದುರುಪಯೋಗ‌ ಪಡಿಸಿಕೊಳ್ಳಲು ಮುಂದಾಗಿದ್ದಾರೆ (Free Bus Service For Women). ಮಹಿಳೆಯರು ಬಸ್‌ನಲ್ಲಿ‌ ಇಲ್ಲದಿದ್ರು ಟಿಕೆಟ್ ಹರಿದು ಸುಳ್ಳು ಲೆಕ್ಕ ತೋರಿಸಲು ಮುಂದಾಗಿ ಚೆಕ್ಕಿಂಹ್ ವೇಳೆ ಸಿಗಾಕಿಕೊಳ್ತಿದ್ದಾರೆ. ಒಂದು ಟ್ರಿಪ್‌ನಲ್ಲಿ 10 ರಿಂದ 20 ಶಕ್ತಿ ಯೋಜನೆಯ ಉಚಿತ ಟಿಕೆಟ್ ಗಳನ್ನು ಹರಿದು‌ ಸರ್ಕಾರಕ್ಕೆ (Karnataka Government) ಮೋಸ ಮಾಡ್ತಿದ್ದಾರೆ. ಅಧಿಕಾರಿಗಳ ಚಕ್ಕಿಂಗ್ ವೇಳೆ‌ ಸಿಕ್ಕಿ ಬೀಳ್ತಿರೋ ಕಂಡೆಕ್ಟರ್ ಗಳ ಸಂಖ್ಯೆ ಹೆಚ್ಚಳವಾಗ್ತಿದೆ. ಕಳೆದ ಎರಡು ತಿಂಗಳಿನಲ್ಲಿ ನಾಲ್ಕು‌ ನಿಗಮದಲ್ಲಿ ನೂರಕ್ಕೂ ಅಧಿಕ ಕಂಡಕ್ಟರ್ ಗಳು ಲಾಕ್ ಆಗಿದ್ದು, ಬಿಎಂಟಿಸಿಯಲ್ಲೂ ಮಹಿಳೆಯರಿಲ್ಲದೇ ಟಿಕೆಟ್ ಹರಿಯುತ್ತಿದ್ದಾರೆ ನಿರ್ವಾಹಕರು.

ಕಂಡೆಕ್ಟರ್ ಹಾಗೂ ಡ್ರೈವರ್ ಗೆ 10 ಸಾವಿರ ಕಲೆಕ್ಟನ್‌ ಮಾಡಿದ್ರೆ ಒಬ್ಬರಿಗೆ 332 ರಂತೆ ಇಬ್ಬರಿಗೆ 664 ಇನ್ಸೆಂಟಿವ್ ನೀಡ್ತಾರೆ. ಶಕ್ತಿ ಯೋಜನೆಯಡಿ ಉಚಿತ ಟಿಕೆಟ್ ನೀಡಿದ್ರು ಕೂಡ ಅದು‌ ನಿಗಮದ‌ ಆದಾಯ ಅಂತ ಪರಿಗಣಿಸ್ತಾರೆ. ಸರ್ಕಾರ ನಿಗಮಗಳಿಗೆ ಹಣ ಪಾವತಿಸುವ ಕಾರಣ ಅದನ್ನ ಆದಾಯ ಅಂತ ಲೆಕ್ಕ ಹಾಕಿ ಆ‌ ಮೊತ್ತದಲ್ಲಿಯೂ ಕಂಡೆಕ್ಟರ್ ಹಾಗೂ ಡ್ರೈವರ್ ಗಳಿಗೆ ಇನ್ಸೆಂಟಿವ್ ನೀಡ್ತಾರೆ. ಆದರೆ ಈ ಇನ್ಸೆಂಟಿವ್ ಗಾಗಿ ತಪ್ಪು ದಾರಿ‌ ತುಳಿದು ಸಿಕ್ಕಿ ಬೀಳ್ತಿದ್ದಾರೆ ಕೆಲವು ಕಂಡೆಕ್ಟರ್ಸ್ ಇದಕ್ಕೆ ಸಾರಿಗೆ ಮುಖಂಡರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಇದನ್ನೂ ಓದಿ: ಸಾವಿನಂಚಿನಲ್ಲಿದ್ದ ವ್ಯಕ್ತಿಯ ಜೀವ ಉಳಿಸಿದ ಪೊಲೀಸ್ ಅಧಿಕಾರಿ -ವೀಡಿಯೊ ವೈರಲ್ 

15.02.2024 ಸಮಯ- ಬೆಳಿಗ್ಗೆ- 4-50ಕ್ಕೆ ಮೆಜೆಸ್ಟಿಕ್ ಟೂ ವೈಟ್ ಫಿಲ್ಡ್ ಮಾರ್ಗದ ಬಸ್ಸಿನಲ್ಲಿ ಒಬ್ಬರೇ ಮಹಿಳೆಯರು ಇದ್ರೂ ಶಕ್ತಿ ಯೋಜನೆಯ 35 ಟಿಕೆಟ್ ಗಳನ್ನು ಹರಿದು ಹಾಕಿ ಕಂಡಕ್ಟರ್ ಕಂ ಡ್ರೈವರ್- ವೆಂಕಟೇಶ್ ತಗ್ಲಾಕೊಂಡಿದ್ದಾರೆ. 06-02-2024 ಸಮಯ-ಬೆಳಿಗ್ಗೆ-8-20 ಕ್ಕೆ ಮೆಜಸ್ಟಿಕ್ ಟೂ ಬೆನ್ನಿಗಾನಹಳ್ಳಿ ಮಾರ್ಗದ ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ನೀಡಬೇಕಿದ್ದ 25 ಟಿಕೆಟ್ ಗಳನ್ನು ಪುರುಷರಿಗೆ ನೀಡಿ ಕಂಡಕ್ಟರ್ ಮುನಿರಾಜು ತಗ್ಲಾಕೊಂಡಿದ್ದಾರೆ. 12-02-2024 ಸಮಯ-ರಾತ್ರಿ 9-22 ಕ್ಕೆ ಹೆಬ್ಬಾಳ ಟೂ ಬನಶಂಕರಿ ಮಾರ್ಗದಲ್ಲಿ ಆಂಧ್ರಪ್ರದೇಶದ ಮೂಲದ ಆರು ಜನರಿಂದ ಹಣ ಪಡೆದು ಶಕ್ತಿ ಯೋಜನೆಯ ಉಚಿತ ಟಿಕೆಟ್ ನೀಡಿ ಕಂಡಕ್ಟರ್ ಜಿ. ತಮ್ಮಣ್ಣಗೌಡ ತಗ್ಲಾಕೊಂಡಿದ್ದಾರೆ. ಒಟ್ಟು ಇಲ್ಲಿಯವರೆಗೆ ಇಂತಹ ಪ್ರಕರಣಗಳಲ್ಲಿ 25 ಕ್ಕೂ ಹೆಚ್ಚು ಕಂಡಕ್ಟರ್ ಗಳು ತಗ್ಲಾಕೊಂಡಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬಿಎಂಟಿಸಿಯ ಕಂಡಕ್ಟರ್ ರಾಮು ಶಕ್ತಿ ಯೋಜನೆಯಿಂದ ನಮಗೆ ಸರಿಯಾದ ಸಮಯಕ್ಕೆ ಸಂಬಳ ಆಗ್ತಿದೆ. ಬಿಎಂಟಿಸಿಗೆ ಸರ್ಕಾರದಿಂದ ಹಣ ದೊರೆಯುತ್ತಿದೆ. ಆದರೆ ಕೆಲ ಕಂಡಕ್ಟರ್ ಗಳು ಇದನ್ನು ದುರುಪಯೋಗ ಪಡಿಸಿಕೊಳ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಒಟ್ಟಿನಲ್ಲಿ ರಾಜ್ಯ ಸರ್ಕಾರ ಮಹಿಳೆಯರು ಉಚಿತವಾಗಿ ಓಡಾಡಲು ಶಕ್ತಿ ಯೋಜನೆ ಆರಂಭಿಸಿ ಅದರ ಹಣವನ್ನು ಸರ್ಕಾರವೇ ಭರಿಸುತ್ತಿದೆ. ಇದರಿಂದ ಬಿಎಂಟಿಸಿ ಕಂಡಕ್ಟರ್ ಗಳಿಗೆ ಪ್ರತಿದಿನ 300 ರಿಂದ 400 ರುಪಾಯಿ ಇನ್ಸೆಂಟಿವ್ ಸಿಗ್ತಿದೆ. ಆದ್ರು ಕೆಲ ಕಂಡಕ್ಟರ್ ಗಳು ಹೆಚ್ಚಿನ ಹಣದ ಆಸೆಗಾಗಿ ಶಕ್ತಿ ಯೋಜನೆಯ ಟಿಕೆಟ್ ದುರುಪಯೋಗ ಪಡಿಸಿಕೊಳ್ತಿರೋದು ದುರಂತವೇ ಸರಿ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ