ಬೆಂಗಳೂರು ಏರ್‌ಪೋರ್ಟ್ ಟರ್ಮಿನಲ್-2ರಲ್ಲಿ ಹೈಟೆಕ್ ಬಸ್ ನಿಲ್ದಾಣ, ಪ್ಲೈಬಸ್ಗೆ ಚಾಲನೆ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ 2ರಲ್ಲಿ ಹೈಟೆಕ್ ಬಸ್ ನಿಲ್ದಾಣಕ್ಕೆ ಚಾಲನೆ ಸಿಕ್ಕಿದೆ. ಈ ಹೈಟೆಕ್ ಬಸ್ ನಿಲ್ದಾಣ ವಿಐಪಿ ಲಾಂಜ್, ಎಸಿ ಲಾಂಜ್, ಶೌಚಾಲಯ, ಸಹಾಯವಾಣಿ ಕೇಂದ್ರ ಸೇರಿದಂತೆ ಅತ್ಯಾಧುನಿಕ ಸೌಲಭ್ಯ ಹೊಂದಿದೆ. ವ್ಯವಸ್ಥಿತ ಮತ್ತು ಸಮರ್ಪಕ ಸಾರಿಗೆ ಸೇವೆ ಕಲ್ಪಿಸುವ ದೃಷ್ಟಿಯಿಂದ ಬಿಎಂಟಿಸಿ ಮೂರು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಲು 40 ಸಿಬ್ಬಂದಿ ನಿಯೋಜಿಸಿದೆ.

ದೇವನಹಳ್ಳಿ, ಡಿ.29: ಕೆಂಪೇಗೌಡ ಏರ್ಪೋರ್ಟ್ನ (Kempegowda International Airport Bengaluru) ಟರ್ಮಿನಲ್ 2ರಲ್ಲಿ ಹೈಟೆಕ್ ಬಸ್ ನಿಲ್ದಾಣಕ್ಕೆ ಚಾಲನೆ ಸಿಕ್ಕಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹಾಗೂ ಆಹಾರ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪನವರು (KH Muniyappa) KSRTC ಪ್ಲೈಬಸ್ (KSRTC)ಮತ್ತು ಬಿಎಂಟಿಸಿ ವಾಯುವಜ್ರ (BMTC) ನೂತನ ಬಸ್ ನಿಲ್ದಾಣವನ್ನು ಉದ್ಘಾಟಿಸಿದರು. ಹಾಗೂ ಬಸ್ಗಳಿಗೂ ಹಸಿರು ನಿಶಾನೆ ತೋರಿಸಿದರು.
ಈ ಹೈಟೆಕ್ ಬಸ್ ನಿಲ್ದಾಣ ವಿಐಪಿ ಲಾಂಜ್, ಎಸಿ ಲಾಂಜ್, ಶೌಚಾಲಯ, ಸಹಾಯವಾಣಿ ಕೇಂದ್ರ ಸೇರಿದಂತೆ ಅತ್ಯಾಧುನಿಕ ಸೌಲಭ್ಯ ಹೊಂದಿದೆ. ಪ್ರತಿನಿತ್ಯ ಬೆಂಗಳೂರಿನ ವಿವಿದೆಡೆಗೆ ಬಿಎಂಟಿಸಿ ವಾಯು ವಜ್ರ ಬಸ್ಗಳು ಸಂಚರಿಸಲಿವೆ. ಮೈಸೂರು, ಮಡಿಕೇರಿ, ಕುಂದಾಪುರಕ್ಕೆ KSRTC ಪ್ಲೈಬಸ್ಗಳು ತೆರಳಲಿವೆ. ನಿತ್ಯ ಸಾವಿರಾರು ಜನ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಗಾರ್ಡನ್ ಟರ್ಮಿನಲ್ ನಂತೆ ಈ ನಿಲ್ದಾಣ ವಿಶೇಷತೆ ಹೊಂದಿದೆ.
ಇದನ್ನೂ ಓದಿ: Bengaluru Airport:ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ವಿಶ್ವದ ಅತ್ಯಂತ ಸುಂದರ ಏರ್ಪೋಟ್
ಪ್ರಸ್ತುತ ವಿಮಾನ ನಿಲ್ದಾಣದಿಂದ ಕ.ರಾ.ರ.ಸಾ.ನಿಗಮದ ಒಟ್ಟು 13 ಫ್ಲೈಬಸ್ ಸೇವೆಗಳನ್ನು 42 ಟ್ರಿಪ್ ಗಳ ಮುಖಾಂತರ ಪ್ರತಿನಿತ್ಯ ಮೈಸೂರು, ಕುಂದಾಪುರ ಹಾಗೂ ಮಡಿಕೇರಿ ಮಾರ್ಗಗಳಲ್ಲಿ ಆಚರಿಸಲಾಗುತ್ತದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಪ್ರತಿ ದಿನ 137 ಹವಾ ನಿಯಂತ್ರಿತ ವಾಹನಗಳ ಮೂಲಕ 944 ಟ್ರಿಪ್ಪುಗಳಲ್ಲಿ ಕಾರ್ಯಾಚರಣೆ ನಡೆಸಿ 47907 ಕಿ.ಮಿಗಳನ್ನು ಕ್ರಮಿಸಿ ಕಾರ್ಯಾಚರಣೆ ಮಾಡಿ 14000 ಪ್ರಯಾಣಿಕರಿಗೆ ಸೇವೆಯನ್ನು ಕಲ್ಪಿಸಲಾಗಿದೆ. ವಿಮಾನ ನಿಲ್ದಾಣದ ಲಾಂಜ್ ನಲ್ಲಿ ಸುಸಜ್ಜಿತ ನೀರಿನ, ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗಿದ್ದು ವಾಹನಗಳ ಕಾರ್ಯಾಚರಣೆಯ ಸಮಯ, ಡಿಜಿಟಲ್ ಫಲಕಗಳು, ಸಾರ್ವಜನಿಕ ಉದ್ಘೋಶಣ ವ್ಯವಸ್ಥೆ ಕಲ್ಪಿಸಲಾಗಿದ್ದು 40 ಸಿಬ್ಬಂದಿಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರಿಗೆ ಮಾಹಿತಿಯನ್ನು ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳಲ್ಲಿ ಒದಗಿಸಲಾಗುತ್ತಿದೆ.
ಇನ್ನು ಕಾರ್ಯಕ್ರಮ ವೇಳೆ ಮಾನ್ಯ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು, ಕರ್ನಾಟಕ ಸರ್ಕಾರ ಮತ್ತು ಶ್ರೀಮತಿ ಜಿ. ಸತ್ಯವತಿ, ಬಾ.ಆ.ಸೇ, ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳಾದ ಶ್ರೀ ಸತ್ಯಕಿ ರಘುನಾಥ್, ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ, ಶ್ರೀಮತಿ ಶಾಲಿನಿ ರಾವ್, ಮುಖ್ಯ ಮಾರುಕಟ್ಟೆ ಅಧಿಕಾರಿ, ಶ್ರೀ ಡೊಮಿನಿಕ್ ದೇವಸಿಯಾ, ಶ್ರೀ ವಿಶಾಲ್ ಕೆ, ಶ್ರೀ ಸಂಜಯ್ ಚಂದ್ರ, ಶ್ರೀ ಶಿವ ಶಂಕರ್, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:54 pm, Fri, 29 December 23