Bengaluru Airport:ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ವಿಶ್ವದ ಅತ್ಯಂತ ಸುಂದರ ಏರ್ಪೋಟ್

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 (T2) 'ವಿಶ್ವದ ಅತ್ಯಂತ ಸುಂದರವಾದ ವಿಮಾನ ನಿಲ್ದಾಣಗಳಲ್ಲಿ' ಒಂದೆಂದು ಗುರುತಿಸಲ್ಪಟ್ಟಿದೆ ಮತ್ತು ಒಳಾಂಗಣ ವಿನ್ಯಾಸ -2023 ರ ವಿಶ್ವ ವಿಶೇಷ ಪ್ರಶಸ್ತಿ'ಯನ್ನು ಪಡೆದುಕೊಂಡಿದೆ.

Bengaluru Airport:ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ವಿಶ್ವದ ಅತ್ಯಂತ ಸುಂದರ ಏರ್ಪೋಟ್
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Dec 21, 2023 | 10:23 PM

ಬೆಂಗಳೂರು, ಡಿ.21: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (Kempegowda International Airport Bengaluru) ಯುನೆಸ್ಕೋದ 2023 ರ ಪ್ರಿಕ್ಸ್ ವರ್ಸೇಲ್ಸ್‌(Prix Versailles)ನ ಪ್ರತಿಷ್ಠಿತ ಪುರಸ್ಕಾರದೊಂದಿಗೆ ಗೌರವಿಸಲ್ಪಟ್ಟಿದೆ. ವಿಮಾನ ನಿಲ್ದಾಣದ ಟರ್ಮಿನಲ್ 2 ಗೆ ವಿಶ್ವದ ಅತ್ಯಂತ ಸುಂದರವಾದ ವಿಮಾನ ನಿಲ್ದಾಣಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ ಮತ್ತು ಒಳಾಂಗಣ ವಿನ್ಯಾಸ -2023 ರ ವಿಶ್ವ ವಿಶೇಷ ಪ್ರಶಸ್ತಿ’ಯನ್ನು ಪಡೆದುಕೊಂಡಿದೆ.

ಎಲೀ ಸಾಬ್ (ಪ್ರಸಿದ್ಧ ಫ್ಯಾಷನ್ ಡಿಸೈನರ್) ರವರ ಅಧ್ಯಕ್ಷತೆಯ ಪ್ರಿಕ್ಸ್ ವರ್ಸೈಲ್ಸ್ 2023 ರ ವಲ್ಡ್‌ ಜಡ್ಜಲ್‌ ಪ್ಯಾನೆಲ್ ಪ್ರಶಸ್ತಿಯನ್ನು ಗೆಲ್ಲಲು ಟಿ2 ಅರ್ಹತೆ ಪಡೆದಿದ್ದು, ಈ ಗೌರವಾನ್ವಿತ ಮನ್ನಣೆ ಪಡೆದ ಏಕೈಕ ಭಾರತೀಯ ವಿಮಾನ ನಿಲ್ದಾಣವಾಗಿದೆ. ಜಾಗತಿಕ ಮಟ್ಟದಲ್ಲಿ ಅಸಾಧಾರಣ ವಿನ್ಯಾಸ ಮತ್ತು ವಾಸ್ತು ಶಿಲ್ಪವನ್ನು ಹೊಂದಿರುವ ವಿಮಾನ ನಿಲ್ದಾಣಗಳ ಪೈಕಿ ಬೆಂಗಳೂರು ವಿಮಾನ ನಿಲ್ದಾಣ ಒಂದಾಗಿದೆ. ಈ ಮೂಲಕ ಬೆಂಗಳೂರು ವಿಮಾನ ನಿಲ್ದಾಣವನ್ನು ಜಾಗತಿಕವಾಗಿ ಉನ್ನತ ವಿಮಾನ ನಿಲ್ದಾಣಗಳ ಪಟ್ಟಿಗೆ ಸೇರಿದೆ.

ಇದನ್ನೂ ಓದಿ:ಹಾಸನದ ಶ್ರವಣಬೆಳಗೊಳ-ಗದಗ ಜಿಲ್ಲೆಯ ಲಕ್ಕುಂಡಿಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲು ಪ್ರಸ್ತಾಪನೆ, ಏನಿದರ ವಿವರ?

ನವೆಂಬರ್ 11, 2022 ರಂದು ಉದ್ಘಾಟನೆಗೊಂಡಿದ್ದ ಟರ್ಮಿನಲ್ 2

2015ರಲ್ಲಿ ಸ್ಥಾಪಿಸಲಾದ ಪ್ರಿಕ್ಸ್ ವರ್ಸೈಲ್ಸ್, ಇದು ಸಾಂಸ್ಕೃತಿಕ ರಾಯಭಾರಿಯಾಗಿದ್ದು, “ವ್ಯವಸ್ಥಿತ ಸುಸ್ಥಿರತೆ” ಯನ್ನು ಒಳಗೊಂಡು ನಾವೀನ್ಯತೆ, ಸೃಜನಶೀಲತೆ, ಸ್ಥಳೀಯ ಪರಂಪರೆ, ಪರಿಸರ ದಕ್ಷತೆ ಮತ್ತು ಸಾಮಾಜಿಕ ಸಂವಹನದ ಮೌಲ್ಯಗಳ ಮೇಲೆ ಗಮನಹರಿಸುತ್ತದೆ. T2 ಅನ್ನು “ಟರ್ಮಿನಲ್ ಇನ್ ಎ ಗಾರ್ಡನ್” ಎಂದೂ ಕರೆಯಲಾಗುತ್ತದೆ. ಇದು ನವೆಂಬರ್ 11, 2022 ರಂದು ಉದ್ಘಾಟನೆಗೊಂಡಿತು. 255,661 ಚದರ ಮೀಟರ್ ವಿಸ್ತೀರ್ಣದಲ್ಲಿ, ಟರ್ಮಿನಲ್ ಅನ್ನು ನಾಲ್ಕು ಅಡಿಪಾಯದ ಕಂಬಗಳ ಮೇಲೆ ನಿರ್ಮಿಸಲಾಗಿದೆ. ಈ ಟರ್ಮಿನಲ್ ಪರಿಸರದ ಸುಸ್ಥಿರತೆ, ಕರ್ನಾಟಕದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯ ಆಚರಣೆಯನ್ನು ಈ ಟರ್ಮಿನಲ್‌ನಲ್ಲಿ ಪ್ರತಿಬಿಂಬಿಸಲಾಗಿದೆ. ಅಷ್ಟೇ ಅಲ್ಲದೆ, ಟರ್ಮಿನಲ್‌ 2 ಸಂಪೂರ್ಣವಾಗಿ ಸಂಸ್ಕರಿಸಿದ ಬಿದಿರಿನಿಂದ ಅಲಂಕೃತಗೊಂಡಿದ್ದು, ಒಳಾಂಗಣಗಳು ಉತ್ಕ್ರಷ್ಟ ಲಕ್ಷಣವನ್ನು ನೀಡಲಿದೆ. ಸಂಪೂರ್ಣ ಹಸಿರುಮಯ, ಇಟ್ಟಿಗೆ ಗೋಡೆಗಳು ಹಾಗು ಕೃತಕ ಜಲಪಾತದಿಂದ ತುಂಬಿರುವ ಟರ್ಮಿನಲ್, ಒಂದು ವಿಶಾಲವಾದ ಒಳಾಂಗಣ ಉದ್ಯಾನವನವನ್ನೇ ಹೊಂದಿದೆ. ಹಾಗೆಯೇ ಮೇಲ್ಭಾಗದಲ್ಲಿ ಗಂಟೆಯೊಳಗಿರುವ ಸಸ್ಯಗಳು ಸಹ ಟರ್ಮಿನಲ್‌ನ ಅನನ್ಯ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಈ ಕುರಿತು ಮಾತನಾಡಿದ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ನ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹರಿ ಕೆ ಮರಾರ್  “2023 ರ ಪ್ರಿಕ್ಸ್ ವರ್ಸೈಲ್ಸ್ ಪ್ರಶಸ್ತಿಗೆ ಟರ್ಮಿನಲ್ 2 ನಾಮ ನಿರ್ದೇಶನವಾಗಿರುವುದು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಟರ್ಮಿನಲ್-2 ಅರ್ಹವಾದ ಮನ್ನಣೆ ಪಡೆದಿರುವುದು ಸಂತೋಷವೆನಿಸುತ್ತದೆ ಎಂದರು. ಟರ್ಮಿನಲ್ 2. ಕಲೆ ಮತ್ತು ತಂತ್ರಜ್ಞಾನದ ವಿಶಿಷ್ಟ ಮಿಶ್ರಣದೊಂದಿಗೆ ಒಂದು ವಿಶಿಷ್ಟ ಹೆಬ್ಬಾಗಿಲಾಗಿದೆ. ಇದು ಜಾಗತಿಕ ಪ್ರಯಾಣಿಕರ ಮೇಲೆ ಪ್ರಭಾವ ಬೀರುವುದಲ್ಲದೆ ನಮ್ಮ ರಾಜ್ಯ ಮತ್ತು ದೇಶದ ಶ್ರೀಮಂತ ಕೊಡುಗೆಗಳನ್ನು ಬಿಂಬಿಸುತ್ತದೆ ಎಂದು ಹೇಳಿದರು.

ರಾಜ್ಯದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:10 pm, Thu, 21 December 23